Yujvendra Chahal Wife Dhanashree Verma: ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಇಬ್ಬರೂ ಯಾವಾಗಲೂ ಪರಸ್ಪರ ಬೆಂಬಲಿಸುತ್ತಾರೆ. 2024ರ ಟಿ20 ವಿಶ್ವಕಪ್‌ಗೆ ಭಾರತೀಯ ತಂಡವನ್ನು ಕೆಲ ಸಮಯದ ಹಿಂದೆಯೇ ಪ್ರಕಟಿಸಲಾಗಿದೆ. ಈ ಆಟಗಾರರ ಪಟ್ಟಿಯಲ್ಲಿ ಯುಜುವೇಂದ್ರ ಚಹಾಲ್ ಕೂಡ ಸ್ಥಾನ ಪಡೆದಿದ್ದಾರೆ. ಹೀಗಿರುವಾಗ ಧನಶ್ರೀ ಮತ್ತೊಮ್ಮೆ ಪತಿಯ ಮೇಲೆ ತನ್ನ ಪ್ರೀತಿಯ ಸುರಿಮಳೆಗೈದಿದ್ದಾಳೆ. ಯುಜುವೇಂದ್ರಗಾಗಿ ಸ್ಪೆಷಲ್ ಇನ್ಸ್ಟಾಸ್ಟೋರಿಯನ್ನು ಧನಶ್ರೀ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಯುಜ್ವೆಂದ್ರ ಮೇಲೆ ಪ್ರೀತಿಯ ಧಾರೆ ಎರೆದ ಧನಶ್ರೀ ವರ್ಮಾ
2024 ರ ಟಿ20 ವಿಶ್ವಕಪ್‌ಗೆ ಭಾರತ ತಂಡದ ಪಟ್ಟಿ ಇಂದು ಪ್ರಕಟಿಸಲಾಗಿದೆ. ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಅಮೇರಿಕಾದಲ್ಲಿ ನಡೆಯಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಯುಜುವೇಂದ್ರ ಚಹಾಲ್ ಕೂಡ ಆಯ್ಕೆಯಾದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಾರಣ ಧನಶ್ರೀ ವರ್ಮಾ ತುಂಬಾ ಖುಷಿಯಾಗಿದ್ದಾರೆ. ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಹಿ ಈಸ್ ಬ್ಯಾಕ್' ಎಂಬ ಶೀರ್ಷಿಕೆಯನ್ನೂ ಕೂಡ ನೀಡಿದ್ದಾರೆ.


ಭಾರತದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಏಪ್ರಿಲ್ 22 ಸೋಮವಾರದಂದು ಐಪಿಎಲ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಎಂಬ ಇತಿಹಾಸವನ್ನು ನಿರ್ಮಿಸಿದ್ದಾರೆ. ಯುಜ್ವೇಂದ್ರ ಚಹಾಲ್ ಇದುವರೆಗೆ 80 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 25.09 ಸರಾಸರಿ ಮತ್ತು 8.19 ಸ್ಟ್ರೈಕ್ ರೇಟ್‌ನಲ್ಲಿ 96 ವಿಕೆಟ್‌ಗಳನ್ನು ಪಡೆದಿದ್ದಾರೆ.


ಇದನ್ನೂ ಓದಿ-IPL 2024 ನಡುವೆಯೇ ಮುಂಬೈನಲ್ಲಿ ಕಾಣಿಸಿಕೊಂಡ Virat Kohli, 'ನೀನು ವಿಶ್ವದ 8ನೇ ಅದ್ಭುತ' ಅಂತ ಅಭಿಮಾನಿಗಳು ಹೇಳಿದ್ಯಾಕೆ?


ಯುಜ್ವೆಂದ್ರ ಚಹಾಲ್ ಆಯ್ಕೆ ವಿಶೇಷವಾಗಿದೆ
2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಮೊದಲ ಟಿ20 ಅಂತಾರಾಷ್ಟ್ರೀಯ ವಿಶ್ವಕಪ್ ಗೆದ್ದಿತ್ತು. ಅಂದಿನಿಂದ ಭಾರತಕ್ಕೆ ಯಾವುದೇ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಟಿ20 ಅಂತರಾಷ್ಟ್ರೀಯ ವಿಶ್ವಕಪ್‌ನ ಒಂಬತ್ತನೇ ಸೀಸನ್ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ನಡೆಯಲಿದೆ.  2021 ರ ಟಿ 20 ವಿಶ್ವಕಪ್‌ನಲ್ಲಿ ಯುಜ್ವೆಂದ್ರ ಚಹಾಲ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿರಲಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. 2022ರ ಟಿ20 ವಿಶ್ವಕಪ್‌ಗೆ ತಂಡಕ್ಕೆ ಆಯ್ಕೆಯಾದಾಗ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿರಲಿಲ್ಲ.


ಇದನ್ನೂ ಓದಿ-IPL 2024: KKR ತಂಡದ ಜೊತೆಗೆ ಮೈದಾನದಲ್ಲಿ ಬೆವರು ಸುರಿಸಿದ Shah Rukh Khan-AbRam, ಇಲ್ಲಿವೆ ವಿಡಿಯೋ!


ಅಥಿಯಾ ಶೆಟ್ಟಿ ಪತಿಗೆ ಸಿಕ್ಕಿಲ್ಲ ಸ್ಥಾನ
ಒಂದೆಡೆ ಧನಶ್ರೀಯ ಖುಷಿಗೆ ಮಿತಿಯೇ ಇಲ್ಲ ಎಂತಾದರೆ. ಇನ್ನೊಂದೆಡೆ ಅಥಿಯಾ ಶೆಟ್ಟಿ ಪತಿ ಕೆಎಲ್ ರಾಹುಲ್ ಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇದೆ ವೇಳೆ, 2024 ರ T20 ವಿಶ್ವಕಪ್‌ಗಾಗಿ ಅಭಿಮಾನಿಗಳು ತುಂಬಾ ಕಾತರರಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.