ಭಾರತೀಯ ಬೌಲರ್ಗಳು ಚೆಂಡು ವಿರೂಪಗೊಳಿಸಿದ್ದಾರೆ: ಪಾಕ್ ಮಾಜಿ ನಾಯಕನ ಆರೋಪ!
ICC Mens T20 World Cup 2024: ಇಂಜಮಾಮ್ ಆರೋಪವನ್ನು ಸಲೀಮ್ ಮಲಿಕ್ ಸಹ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡರುವ ಅವರು, ʼಇಂಜಿ, ನಾನು ಯಾವಾಗಲೂ ಇದನ್ನೇ ಹೇಳುತ್ತೇನೆ. ಕೆಲವು ತಂಡಗಳ ವಿಷಯಕ್ಕೆ ಬಂದಾಗ ಮೌನ ನಿಲುವು ತಾಳಲಾಗುತ್ತದೆ. ಟೀಂ ಇಂಡಿಯಾ ವಿಷಯದಲ್ಲಿಯೂ ಇದೇ ಆಗಿದೆ ಅಂತಾ ಹೇಳಿದ್ದಾರೆ.
ICC Mens T20 World Cup 2024: ಭಾರತ ತಂಡದ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ಪದೇ ಪದೇ ಚೆಂಡನ್ನು ವಿರೂಪಗೊಳಿಸುತ್ತಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಗಂಭೀರ ಆರೋಪ ಮಾಡಿದ್ದಾರೆ. ಚೆಂಡು ವಿರೂಪಗೊಳಿಸುತ್ತಿರುವುದರಿಂದಲೇ ಪ್ರಸಕ್ತ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಯಶಸ್ಸು ಕಾಣುತ್ತಿದೆ ಎಂತಲೂ ಅವರು ಆರೋಪ ಮಾಡಿದ್ದಾರೆ.
ಪಾಕಿಸ್ತಾನದ ಖಾಸಗಿ ಸುದ್ದಿ ವಾಹಿನಿಯಲ್ಲಿ ಮಾತನಾಡಿರುವ ಅವರು, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ. ಅರ್ಷದೀಪ್ ಅವರು 15ನೇ ಓವರ್ ಬೌಲಿಂಗ್ ಮಾಡುವಾಗ ಚೆಂಡು ಹೆಚ್ಚು ತಿರುವು ಪಡೆಯುತ್ತಿತ್ತು. ಹೊಸ ಚೆಂಡಿನೊಂದಿಗೆ ಇದು ತುಂಬಾ ಮುಂಚೆಯೇ ಅಂದರೆ 12ನೇ ಅಥವಾ 13ನೇ ಓವರ್‌ನಲ್ಲಿ ಚೆಂಡು ರಿವರ್ಸ್ ಸ್ವಿಂಗ್‌ಗೆ ಸಿದ್ಧವಾಗಿತ್ತು. ಅಂಪೈರ್‌ಗಳು ಈ ಬಗ್ಗೆ ತಮ್ಮ ಕಣ್ಣು ತೆರೆದು ನೋಡಬೇಕು ಅಂತಾ ಟೀಕಿಸಿದ್ದಾರೆ.
ಇದನ್ನೂ ಓದಿ: Rohith Sharma: ಒಂದೇ ಪಂದ್ಯದಲ್ಲಿ ಮೂರು ದಾಖಲೆ ಬರೆದ ಹಿಟ್‌ಮ್ಯಾನ್..!
ಅದೇ ಅರ್ಷದೀಪ್ ಸಿಂಗ್ ಜಾಗದಲ್ಲಿ ಪಾಕಿಸ್ತಾನಿ ಬೌಲರ್‌ಗಳಿದ್ದರೆ ಇದು ದೊಡ್ಡ ಸಮಸ್ಯೆಯಾಗುತ್ತಿತ್ತು. ನಮಗೆ ರಿವರ್ಸ್ ಸ್ವಿಂಗ್ ಚೆನ್ನಾಗಿ ತಿಳಿದಿದೆ. ಅರ್ಷದೀಪ್ 15ನೇ ಓವರ್‌ನಲ್ಲಿ ಬಂದು ಚೆಂಡನ್ನು ರಿವರ್ಸ್ ಮಾಡಿದ್ರೆ ಮೊದಲೇ ಇದರ ಬಗ್ಗೆ ಪ್ಲ್ಯಾನ್ ಮಾಡಿರುತ್ತಾರೆ ಎಂದರ್ಥವಲ್ಲವೇ? ಅಂತಾ ಇಂಜಮಾಮ್ ಪ್ರಶ್ನಿಸಿದ್ದಾರೆ.
ಇಂಜಮಾಮ್ ಆರೋಪವನ್ನು ಸಲೀಮ್ ಮಲಿಕ್ ಸಹ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡರುವ ಅವರು, ʼಇಂಜಿ, ನಾನು ಯಾವಾಗಲೂ ಇದನ್ನೇ ಹೇಳುತ್ತೇನೆ. ಕೆಲವು ತಂಡಗಳ ವಿಷಯಕ್ಕೆ ಬಂದಾಗ ಮೌನ ನಿಲುವು ತಾಳಲಾಗುತ್ತದೆ. ಟೀಂ ಇಂಡಿಯಾ ವಿಷಯದಲ್ಲಿಯೂ ಇದೇ ಆಗಿದೆ ಅಂತಾ ಹೇಳಿದ್ದಾರೆ. ಪಾಕಿಸ್ತಾನ ಆಟಗಾರರ ಈ ಗಂಭೀರ ಆರೋಪಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟೀಂ ಇಂಡಿಯಾದ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: IND vs AUS: ಭಾರತದ ಎದುರು ಮಂಡಿಯೂರಿದ ಆಸ್ಟ್ರೇಲಿಯಾ! ಸೆಮಿಫೈನಲ್ ತಲುಪಿದ ಟೀಮ್ ಇಂಡಿಯಾ!
ಲೀಗ್ ಹಂತದಲ್ಲಿಯೇ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬಿದ್ದ ಪರಿಣಾಮ ಪಾಕ್‌ನ ಆಟಗಾರರು ಹತಾಷೆಯಿಂದ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಗಂಭೀರ ಆರೋಪ ಮಾಡುವ ಮೊದಲು ಯೋಚಿಸಬೇಕು ಅಂತಾ ಸಲಹೆ ನೀಡಿದ್ದಾರೆ. ಟೀಂ ಇಂಡಿಯಾ ಇಂದು (ಜೂನ್ 27) ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಸೆಮಿಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.