ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ‌ ಇಂದು ನಡೆದ  ವಿವೋ ಪ್ರೋ ಕಬಡ್ಡಿ ಲೀಗ್‌ನ ಎರಡನೇ ಪಂದ್ಯದಲ್ಲಿ ಬಲಿಷ್ಠ ಯುಪಿ ಯೋಧಾಸ್‌ ತಂಡ ತಮಿಳು ತಲೈವಾಸ್‌ ವಿರುದ್ಧ 41-24 ಅಂತರದಲ್ಲಿ ಜಯ ಗಳಿಸಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Rohit Sharma Emotional Expression: ರಾಷ್ಟ್ರಗೀತೆ ಕೇಳುತ್ತಿದ್ದಂತೆ ಮೈದಾನದಲ್ಲೇ ಕಣ್ಣೀರು ಹಾಕಿದ ರೋಹಿತ್ ಶರ್ಮಾ! ವಿಡಿಯೋ ನೋಡಿ


ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಯೋಧಾಸ್‌ ಪ್ರಥಮಾರ್ಧದಲ್ಲಿ 23-11 ಅಂತರದಲ್ಲಿ ಮುನ್ನಡೆ ಕಂಡಿತ್ತು. ಅಶು ಸಿಂಗ್‌ (6) ಹಾಗೂ ಸುಮಿತ್‌ (7) ಟ್ಯಾಕಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದು ">ಯೋಧಾಸ್‌ ಜಯದ ಹೈಲೈಟ್ಸ್‌ ಆಗಿತ್ತು. ಎಂದಿನಂತೆ ಪ್ರದೀಪ್‌ ನರ್ವಾಲ್‌ (6) ಹಾಗೂ ಸುರೇಂದರ್‌ ಗಿಲ್‌ (4) ತಮ್ಮ ನೈಜ ಆಟ ಪ್ರದರ್ಶಿಸಿ ತಂಡದ ಜಯಕ್ಕೆ ನೆರವಾದರು. ತಮಿಳು ತಲೈವಾಸ್‌ ಪರ ಹಿಮಾಂಶು ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಗಳಿಸಿದರು.ಆದರೆ ರೈಡಿಂಗ್‌ನಲ್ಲಿ ಸಂಪೂರ್ಣ ವಿಫಲವಾಗಿದ್ದು ತಲೈವಾಸ್‌ ಸೋಲಿಗೆ ಪ್ರಮುಖ ಕಾರಣವಾಯಿತು.


ಇದನ್ನೂ ಓದಿ: Rohit Sharma: ಎಂಟು T20 ವಿಶ್ವಕಪ್ ನಲ್ಲಿ ಆಡಿದ ಟೀಂ ಇಂಡಿಯಾದ ಮೊದಲ ಸ್ಟಾರ್ ಆಟಗಾರ ಈತ!


ಪ್ರದೀಪ್‌ ನರ್ವಾಲ್‌ ದಾಖಲೆ:


ಸ್ಟಾರ್‌ ರೈಡರ್‌ ಪ್ರದೀಪ್‌ ನರ್ವಾಲ್‌ ಪ್ರೋ ಕಬಡ್ಡಿ ಇತಿಹಾದಲ್ಲೇ 1400 ರೈಡಿಂಗ್‌ ಅಂಕಗಳನ್ನು ಗಳಿಸುವ ಮೂಲಕ ಹೊಸ ಇತಿಹಾಸ ಬರೆದರು. ತಮಿಳು ತಲೈವಾಸ್‌ ವಿರುದ್ಧದ ಪಂದ್ಯದಲ್ಲಿ ಎರಡನೇ ಅಂಕ ಗಳಿಸುವ ಮೂಲಕ ಪ್ರದೀಪ್‌ ಈ ಹೊಸ ಮೈಲಿಗಲ್ಲು ದಾಟಿದರು. ಏಕಮುಖವಾಗಿ ನಡೆದ ಪಂದ್ಯದಲ್ಲಿ ಯುಪಿ ಯೋಧಾಸ್‌ ಪ್ರಥಮಾರ್ಧದಲ್ಲಿ 23-11 ಅಂತರದಲ್ಲಿ ಮೇಲುಗೈ ಸಾಧಿಸಿತು. ಯೋಧಾಸ್‌ ಟ್ಯಾಕಲ್‌ನಲ್ಲಿ 9 ಅಂಕಗಳನ್ನು ಗಳಿಸಿ ಎರಡು ಬಾರಿ ತಮಿಳು ತಲೈವಾಸ್‌ ಪಡೆಯನ್ನು ಆಲೌಟ್‌ ಮಾಡಿತು. ಆರಂಭದಲ್ಲೇ ಪ್ರದೀಪ್‌ ನರ್ವಾಲ್‌ ಅವರನ್ನು ಟ್ಯಾಕಲ್‌ನಲ್ಲಿ ಬಂಧಿಸುವ ಮೂಲಕ ತಮಿಳು ತಲೈವಾಸ್‌ ಉತ್ತಮ ಪ್ರದರ್ಶನ ತೋರುವ ಲಕ್ಷಣ ತೋರಿತ್ತು.ಆದರೆ ಪಂದ್ಯ ಸಾಗುತ್ತಿದ್ದಂತೆ ತನ್ನ ನೈಜ ಸಾಮರ್ಥ್ಯವನ್ನು ತೋರಿಸುವಲ್ಲಿ ವಿಫಲವಾಯಿತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ