33 ಎಸೆತ, 14 ಸಿಕ್ಸರ್, 9 ಬೌಂಡರಿ! ಅತೀ ವೇಗವಾಗಿ ಶತಕ ಸಿಡಿಸಿ ತಲ್ಲಣ ಮೂಡಿಸಿದ್ದು ಭಾರತದ ಈ ಕಿಲಾಡಿ!
Indian Player Record, Taranjeet Singh: ತರಂಜೀತ್ ಸಿಂಗ್ ಅವರು ಬಿರುಸಿನ ರೀತಿಯಲ್ಲಿ ರನ್ ಕಲೆ ಹಾಕಿದ್ದು, ಸಾಕಷ್ಟು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಕೇವಲ 33 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಯುರೋಪಿಯನ್ ಕ್ರಿಕೆಟ್ ಸರಣಿಯಲ್ಲಿ (ECS) ಈ ಸಾಧನೆ ಮಾಡಿದ್ದು, 322ರ ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದರು
Indian Player Record, Taranjeet Singh: ಕ್ರಿಕೆಟ್ ನಲ್ಲಿ ದಾಖಲೆಗಳು ಸಾಮಾನ್ಯವಾಗಿ ಒಂದೊಂದಾಗಿ ಮುರಿಯಲ್ಪಡುತ್ತವೆ. ಶತಕಗಳು, ಹ್ಯಾಟ್ರಿಕ್ ಗಳು, ಕ್ಯಾಚ್ ಗಳು ಮತ್ತು ಬ್ಯಾಟಿಂಗ್ ಗೆ ಸಂಬಂಧಿಸಿದ ಅನೇಕ ದಾಖಲೆಗಳು ವಿಶ್ವ ಕ್ರಿಕೆಟ್ ನಲ್ಲಿ ಮಾಡಲ್ಪಟ್ಟಿವೆ, ಮತ್ತು ಮುರಿಯಲ್ಪಟ್ಟಿವೆ ಕೂಡ. ಇದೀಗ ಟಿ10 ಲೀಗ್ ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಆಟಗಾರನೊಬ್ಬ ತನ್ನ ಹೆಸರನ್ನು ಮುಖ್ಯಾಂಶಗಳಲ್ಲಿ ತಂದಿದ್ದಾನೆ. ಕುತೂಹಲಕಾರಿಯಾಗಿ, ಆ ಆಟಗಾರ ಭಾರತೀಯ ಮೂಲದವರು.
ಇದನ್ನೂ ಓದಿ: ಯೋಗ-ವ್ಯಾಯಾಮ ಬೇಡ.. ಈ 3 ಬೀಜ ಸೇವಿಸಿದರೆ ಒಂದೇ ವಾರದಲ್ಲಿ ಬೆಲ್ಲಿ ಫ್ಯಾಟ್ ಕರಗುತ್ತೆ!
33 ಎಸೆತಗಳಲ್ಲಿ ಶತಕ:
ತರಂಜೀತ್ ಸಿಂಗ್ ಅವರು ಬಿರುಸಿನ ರೀತಿಯಲ್ಲಿ ರನ್ ಕಲೆ ಹಾಕಿದ್ದು, ಸಾಕಷ್ಟು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಕೇವಲ 33 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಯುರೋಪಿಯನ್ ಕ್ರಿಕೆಟ್ ಸರಣಿಯಲ್ಲಿ (ECS) ಈ ಸಾಧನೆ ಮಾಡಿದ್ದು, 322ರ ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದರು.
ರೊಮೇನಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ತರಂಜಿತ್ ಸಿಂಗ್ ಮೈದಾನದಲ್ಲಿ ಸಂಚಲನ ಮೂಡಿಸಿದ್ದರು. ಯುರೋಪಿಯನ್ ಕ್ರಿಕೆಟ್ ಸರಣಿ (ಇಸಿಎಸ್) ಟಿ10 ಲೀಗ್ ನಲ್ಲಿ 33 ಎಸೆತಗಳಲ್ಲಿ ಶತಕ ಸಿಡಿಸಿರುವ ತರಂಜಿತ್ ಭಾರತೀಯ ಮೂಲದವರಾಗಿದ್ದಾರೆ. 40 ಎಸೆತಗಳಲ್ಲಿ 129 ರನ್ ಗಳಿಸಿದ್ದು, ಇದರಲ್ಲಿ 14 ಸಿಕ್ಸರ್ ಹಾಗೂ 9 ಬೌಂಡರಿ ಸೇರಿದ್ದವು. ಅಷ್ಟೇ ಅಲ್ಲ, ಇನಿಂಗ್ಸ್ ನ 9ನೇ ಓವರ್ ನಲ್ಲಿ ಅಲ್ ಅಮೀನ್ ಎಸೆತಗಳಲ್ಲಿ ಸತತ 5 ಸಿಕ್ಸರ್ ಸಿಡಿಸಿದ್ದರು.
ತಂಡ 96 ರನ್‌ಗಳ ಜಯ ಸಾಧಿಸಿತು..
ಆರಂಭಿಕರಾಗಿ ಮೈದಾನಕ್ಕಿಳಿದ ತರಂಜಿತ್ ಸಿಂಗ್ ಕ್ಷಿಪ್ರ ರೀತಿಯಲ್ಲಿ ಬ್ಯಾಟ್ ಬೀಸುತ್ತಲೇ ಇದ್ದರು. ಅವರ ಇನ್ನಿಂಗ್ಸ್ ನಿಂದಾಗಿ ಟೀಮ್ ಕ್ಲೂಜ್ ಕೇವಲ 10 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ನಂತರ ಗುರಿ ಬೆನ್ನಟ್ಟಿದ ಬುಕಾರೆಸ್ಟ್ ಸೂಪರ್ ಕಿಂಗ್ಸ್ ತಂಡ 90 ರನ್ ಗಳ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡು 96 ರನ್ ಗಳ ಬೃಹತ್ ಅಂತರದಿಂದ ಸೋಲನುಭವಿಸಿತು. ತಂಡದ ಆರಂಭಿಕ ಆಟಗಾರರು ಮಾತ್ರ ಎರಡಂಕಿ ಮುಟ್ಟಲು ಸಾಧ್ಯವಾಯಿತು. ಕ್ಲೂಜ್ ಪರ ರಜಿತ್ ಪೆರೇರಾ 2 ಓವರ್ ಗಳಲ್ಲಿ 5 ರನ್ ನೀಡಿ 3 ವಿಕೆಟ್ ಪಡೆದರು.
ಇದನ್ನೂ ಓದಿ: ಹೇರ್ ಡೈ ಬೇಡವೇ ಬೇಡ … ಈ ಎರಡು ಎಣ್ಣೆಗಳಿದ್ದರೆ ಬಿಳಿಕೂದಲು ಬುಡಸಮೇತ ಕಪ್ಪಾಗುತ್ತೆ!
ಅಂತರಾಷ್ಟ್ರೀಯ ವೃತ್ತಿಜೀವನ ಹೀಗಿದೆ
37ರ ಹರೆಯದ ತರಂಜಿತ್ ಸಿಂಗ್ ಇದುವರೆಗೆ 19 ಟಿ20 ಪಂದ್ಯಗಳಲ್ಲಿ 1 ಶತಕ ಮತ್ತು 5 ಅರ್ಧಶತಕಗಳ ನೆರವಿನಿಂದ 704 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, ಅವರು ಆಫ್ ಸ್ಪಿನ್ನರ್ ಕೂಡ. ತರಂಜಿತ್ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 26 ವಿಕೆಟ್ ಪಡೆದಿದ್ದಾರೆ. ಅಂಪೈರ್ ಪಾತ್ರವನ್ನೂ ನಿರ್ವಹಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ