ನವದೆಹಲಿ: T20 ವಿಶ್ವಕಪ್ 2022 ಸೆಮಿಫೈನಲ್‌ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋಲುವುದರೊಂದಿಗೆ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.


COMMERCIAL BREAK
SCROLL TO CONTINUE READING

ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ "ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ಸ್ ತುಂಬಾ ನಿರಾಶಾದಾಯಕವಾಗಿತ್ತು ಎಂದು ನನಗೆ ತಿಳಿದಿದೆ. ನಾವು ಬೋರ್ಡ್ ನಲ್ಲಿ ಉತ್ತಮ ಮೊತ್ತವನ್ನು ಹೊಂದಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳೋಣ. ಅಡಿಲೇಡ್ ಓವಲ್‌ನಲ್ಲಿ 168 ಉತ್ತಮವಾಗಿರಲಿಲ್ಲ ಏಕೆಂದರೆ ಮೈದಾನದ ಆಯಾಮಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ ಮತ್ತು ಚಿಕ್ಕ ಬೌಂಡರಿಗಳು ಇವೆ. ನಾವು ವಿಕೆಟ್ ಪಡೆಯುವಲ್ಲಿಯೂ ವಿಫಲರಾಗಿದ್ದೇವೆ “ಎಂದು ತೆಂಡೂಲ್ಕರ್ ANI ಗೆ ತಿಳಿಸಿದರು.


 “ಪ್ರಧಾನಿ ಮೋದಿ ಅವರ ಕೊಡುಗೆ ಕೇವಲ ಹೂವಿನ ಹಾರ, ಕೋಟಿ ನಮಸ್ಕಾರ ಮಾತ್ರ”


ಇದೇ ವೇಳೆ ಭಾರತ ತಂಡವು ಟಿ20ಯಲ್ಲಿ ಈಗಲೂ ನಂಬರ್ 1 ಎಂದು ಅವರು ಹೇಳಿದರು."ಆ ನಂಬರ್ 1 ಸ್ಥಾನಕ್ಕೆ ಬರಲು, ಇದು ರಾತ್ರೋರಾತ್ರಿ ಆಗುವುದಿಲ್ಲ. ತಂಡವು ಒಂದು ಅವಧಿಯಲ್ಲಿ ಉತ್ತಮ ಕ್ರಿಕೆಟ್ ಆಡಬೇಕು ಮತ್ತು ಅದು ಮಾಡಿದೆ. ಈ ಪ್ರದರ್ಶನದ ಆಧಾರದ ಮೇಲೆ ನಮ್ಮ ತಂಡವನ್ನು ನಿರ್ಣಯಿಸಬಾರದು. ಕ್ರೀಡೆಯಲ್ಲಿ, ಈ ಏರಿಳಿತಗಳು ಸಹಜ ನಾವು ಅದರ ಜೊತೆಗೆ ಇರಬೇಕು ಎಂದು ಸಚಿನ್ ತೆಂಡೂಲ್ಕರ್ ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.