ನನಗೂ ಹೇಳಲು ಬಹಳಷ್ಟಿದೆ ಆದರೆ.. ತಂದೆಯ ಆರೋಪಗಳನ್ನು ಅಸಂಬದ್ಧ ಎಂದ ರವೀಂದ್ರ ಜಡೇಜಾ!
Ravindra Jadeja on his Father Statement: ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಮನೆಯಲ್ಲಿ ಪರಿಸ್ಥಿತಿ ಸರಿಯಾಗಿಲ್ಲ. ಇತ್ತೀಚೆಗೆ ಜಡೇಜಾ ತಂದೆ ಅನಿರುದ್ಧ್ ಸಿಂಗ್ ತಮ್ಮ ಹೇಳಿಕೆಯಿಂದ ಸಂಚಲನ ಮೂಡಿಸಿದ್ದರು. ಆದರೆ, ಜಡೇಜಾ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.
Ravindra Jadeja: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಸದ್ಯ ಮುಖ್ಯಾಂಶಗಳಲ್ಲಿದ್ದಾರೆ.. ಆದರೆ, ಜಡೇಜಾ ಸುದ್ದಿಯಲ್ಲಿರುವುದು ಕ್ರಿಕೆಟ್ ಮೈದಾನದಲ್ಲಿನ ಅವರ ಪ್ರದರ್ಶನದಿಂದಲ್ಲ ವೈಯಕ್ತಿಕ ಕಲಹದಿಂದ. ವಾಸ್ತವವಾಗಿ, ಶುಕ್ರವಾರ, ಜಡೇಜಾ ಅವರ ತಂದೆ ಸಂದರ್ಶನವೊಂದರಲ್ಲಿ ತಮ್ಮ ಮಗ ರವೀಂದ್ರ ಜಡೇಜಾ ಮತ್ತು ಅವರ ಸೊಸೆ ರಿವಾಬಾ ಅವರೊಂದಿಗೆ ಇನ್ನು ಮುಂದೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಡೇಜಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.. ಆದರೆ, ಜಡೇಜಾ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಸಿಂಗ್ ಅವರಿಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.. ರವೀಂದ್ರ ಜಡೇಜಾ ತಮ್ಮ ತಂದೆಯ ಹೇಳಿಕೆಯನ್ನು ಅಸಂಬದ್ಧ ಎಂದು ಬಣ್ಣಿಸಿ.. ಪತ್ನಿಗೆ ಬೆಂಬಲವಾಗಿ ದೊಡ್ಡ ಹೇಳಿಕೆಯನ್ನೂ ನೀಡಿದ್ದಾರೆ...
ಇದನ್ನೂ ಓದಿ-18 ಬೌಂಡರಿ, 3 ಸಿಕ್ಸರ್, ಒಂದೇ ಇನ್ನಿಂಗ್ಸ್’ನಲ್ಲಿ 159 ರನ್… 24ರ ಹರೆಯದ ಭಾರತದ ಕ್ರಿಕೆಟಿಗನಿಂದ ಅಮೋಘ ಶತಕದಾಟ!
ಈ ಬಗ್ಗೆ ವೀಂದ್ರ ಜಡೇಜಾ "ಸಂದರ್ಶನದಲ್ಲಿ ತಂದೆ ಹೇಳಿದ್ದೆಲ್ಲವೂ ತಪ್ಪು ಮತ್ತು ಅರ್ಥಹೀನ "ಅವರು ಕಥೆಯ ಒಂದು ಭಾಗವನ್ನು ಮಾತ್ರ ಹೇಳಿದ್ದಾರೆ.. ಅದನ್ನು ನಾನು ಒಪ್ಪಿಕೊಳ್ಳುವುದಿಲ್ಲ... ನನ್ನ ಪತ್ನಿಯ ಹೆಸರು ಕೆಡಿಸುವ ಯತ್ನ ನಡೆಯುತ್ತಿದೆ. ನನಗೂ ಹೇಳಲು ಬಹಳಷ್ಟಿದೆ ಆದರೆ ಸಾರ್ವಜನಿಕವಾಗಿ ಏನನ್ನೂ ಹೇಳದೇ ಇದ್ದರೆ ಒಳ್ಳೆಯದು." ಎಂದಿದ್ದಾರೆ..
Irfan Pathan wife: ಇರ್ಫಾನ್ ಪಠಾಣ್ ಪತ್ನಿ ಸಫಾ ಬೇಗ್ ಯಾರು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ