Venkatesh Iyer - Shruti Raghunathan: ಕಳೆದ ವರ್ಷ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಟೀಂ ಇಂಡಿಯಾ ಆಲ್ ರೌಂಡರ್, ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರ ವೆಂಕಟೇಶ್ ಅಯ್ಯರ್ ಅವರು ಇಂದು (ಭಾನುವಾರ) ತಮ್ಮ ಗೆಳತಿ ಶ್ರುತಿ ರಘುನಾಥನ್ ಅವರನ್ನು ವಿವಾಹವಾದರು. ಅವರ ವಿವಾಹ ಸಮಾರಂಭವು ದಕ್ಷಿಣ ಭಾರತದ ಸಾಂಪ್ರದಾಯಿಕ ಶೈಲಿಯಲ್ಲಿ ಕೆಲವು ಕುಟುಂಬ ಸದಸ್ಯರು, ಸ್ನೇಹಿತರ ನಡುವೆ ನಡೆಯಿತು. ವೆಂಕಟೇಶ್ ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನೆಟಿಜನ್‌ಗಳು ನವ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಇನ್ನು ಶೃತಿ ರಘುನಾಥನ್ ವಿಚಾರಕ್ಕೆ ಬಂದರೆ.. ಅವರು ಫ್ಯಾಷನ್ ಡಿಸೈನರ್ ಆಗಿದ್ದು, ಬೆಂಗಳೂರಿನ ಪ್ರಮುಖ ಫ್ಯಾಷನ್ ಡಿಸೈನಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.


ಮದುವೆಯಾಗದೇ ತಾಯಿಯಾಗಲಿರುವ ನಟಿ ಕೃತಿ ಶೆಟ್ಟಿ! ಏನಿದು ಹೊಸ ವಿಷಯ!?


ವೆಂಕಟೇಶ್ ಅಯ್ಯರ್ ಐಪಿಎಲ್‌ನಲ್ಲಿ ಪ್ರತಿನಿಧಿಸುತ್ತಿದ್ದು, ಐಪಿಎಲ್ 17ನೇ ಸೀಸನ್ ನಲ್ಲಿ ಕೆಕೆಆರ್ ತಂಡ ಚಾಂಪಿಯನ್ ಆಯಿತು. ಕೆಕೆಆರ್ ಯಶಸ್ಸಿನಲ್ಲಿ ಅಯ್ಯರ್ ಪ್ರಮುಖ ಪಾತ್ರ ವಹಿಸಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿ ತಂಡವನ್ನು ಗೆಲ್ಲಿಸಿದರು. ಇವರು 26 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳೊಂದಿಗೆ 52 ರನ್ ಗಳಿಸಿ ಅಜೇಯರಾಗುಳಿದರು. ವೆಂಕಟೇಶ್‌ ಅವರು ಐಪಿಎಲ್ ಇತಿಹಾಸದಲ್ಲಿ ಪ್ಲೇಆಫ್‌ನಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಇತಿಹಾಸವನ್ನು ಸೃಷ್ಟಿಸಿದರು.


ವೆಂಕಟೇಶ್ ಅಯ್ಯರ್ ಟೀಮ್ ಇಂಡಿಯಾ ಪರವಾಗಿ ಎರಡು ODI ಮತ್ತು ಒಂಬತ್ತು T20 ಪಂದ್ಯಗಳನ್ನು ಆಡಿದ್ದಾರೆ. ಅವರು ಫೆಬ್ರವರಿ 2002 ರಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ವೆಂಕಟೇಶ್ ಅಯ್ಯರ್ ಪ್ರಸಕ್ತ ಟಿ20 ವಿಶ್ವಕಪ್ 2024ರಲ್ಲಿ ಸ್ಥಾನ ಪಡೆದಿಲ್ಲ. 


ಇದನ್ನೂ ಓದಿ-ಮದುವೆಯಾಗದೇ ತಾಯಿಯಾಗಲಿರುವ ನಟಿ ಕೃತಿ ಶೆಟ್ಟಿ! ಏನಿದು ಹೊಸ ವಿಷಯ!?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.