Team India Squad for Zimbabwe T20Is: ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ ಪ್ರಕಟಿಸಲಾಗಿದೆ. ಜುಲೈ 6ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಶುಭ್ಮನ್ ಗಿಲ್’ರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಇನ್ನು ಮೊದಲ ಬಾರಿಗೆ ಟಿ20 ತಂಡಕ್ಕೆ ಐವರು ಆಟಗಾರರು ಸೇರ್ಪಡೆಗೊಂಡಿದ್ದಾರೆ. ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ನಿತೀಶ್ ರೆಡ್ಡಿ, ತುಷಾರ್ ದೇಶಪಾಂಡೆ ಮತ್ತು ಧ್ರುವ ಜುರೆಲ್‌’ಗೆ ಆಯ್ಕೆ ಸಮಿತಿ ಮಣೆಹಾಕಿದೆ.


ಇದನ್ನೂ ಓದಿ: ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದಾತ ಇಂದು ಕೋಟಿ ಆಸ್ತಿ ಒಡೆಯ! 8ನೇ ಕ್ಲಾಸ್ ಓದಿರುವ ಟೀಂ ಇಂಡಿಯಾದ ಪ್ರಮುಖ ಆಲ್’ರೌಂಡರ್ ಯಾರು ಗೊತ್ತೇ?


ಜಿಂಬಾಬ್ವೆ ಸರಣಿಯೊಂದಿಗೆ ನಾಲ್ವರು ಆಟಗಾರರು ಟೀಂ ಇಂಡಿಯಾಕ್ಕೆ ಮರಳಿದ್ದು, ರುತುರಾಜ್ ಗಾಯಕ್ವಾಡ್‌’ಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್, ವೇಗಿ ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್ ತಂಡಕ್ಕೆ ಮರಳಿದ್ದಾರೆ.


ಕುತೂಹಲಕಾರಿ ಸಂಗತಿಯೆಂದರೆ ಐಪಿಎಲ್ ವಿಜೇತ ಕೆಕೆಆರ್ ತಂಡದ ಹಲವು ಟಾಪ್ ಪರ್ಫಾರ್ಮೆನ್ಸ್ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿಲ್ಲ. ಇದರಲ್ಲಿ ಶ್ರೇಯಸ್ ಅಯ್ಯರ್ ಕೂಡ ಸೇರಿದ್ದಾರೆ. ಇವರಲ್ಲದೆ ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ಕೂಡ ತಂಡಕ್ಕೆ ಸೇರ್ಪಡೆಗೊಂಡಿಲ್ಲ.


ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ:


ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ರುತುರಾಜ್ ಗಾಯಕ್ವಾಡ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಧ್ರುವ್ ಜುರೆಲ್, ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್ ಮತ್ತು ತುಷಾರ್ ದೇಶಪಾಂಡೆ.


ಇದನ್ನೂ ಓದಿ:  ಶಮಿ ಜೊತೆ ಸಾನಿಯಾ ಮದುವೆ! ಕೊನೆಗೂ ಪೋಸ್ಟ್ ಶೇರ್ ಮಾಡಿ ಸಿಹಿಸುದ್ದಿ ಕೊಟ್ಟೇಬಿಟ್ರಾ ಮೂಗುತಿ ಸುಂದರಿ?


ಭಾರತ-ಜಿಂಬಾಬ್ವೆ ಸರಣಿ ವೇಳಾಪಟ್ಟಿ


ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಎಲ್ಲಾ ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್‌’ನಲ್ಲಿ ನಡೆಯಲಿದ್ದು, ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಆರಂಭವಾಗಲಿವೆ.


ಮೊದಲ ಪಂದ್ಯ - ಜುಲೈ 6


ಎರಡನೇ ಪಂದ್ಯ - ಜುಲೈ 7


ಮೂರನೇ ಪಂದ್ಯ - ಜುಲೈ 10


ನಾಲ್ಕನೇ ಪಂದ್ಯ-13 ಜುಲೈ


ಐದನೇ ಪಂದ್ಯ - 14 ಜುಲೈ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.