Batsman Who Dismissed on Duck on ODI Debut: ತಮ್ಮ ODI ವೃತ್ತಿಜೀವನದ ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ಔಟಾದ ಭಾರತದ 5 ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಯಾರೆಂಬುದು ನಿಮಗೆ ತಿಳಿದಿದೆಯೇ? ಈ ಐವರು ಬ್ಯಾಟ್ಸ್‌ಮನ್‌ಗಳು ಏಕದಿನ ಕ್ರಿಕೆಟ್‌ನಲ್ಲಿ ಕಳಪೆ ಆರಂಭ ಪಡೆದಿದ್ದರೂ, ನಂತರ ಶ್ರೇಷ್ಠತೆಯ ಉತ್ತುಂಗಕ್ಕೇರಿದ್ದರು. ಅಂತಹ 5 ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಯಾರೆಂದು ನೋಡೋಣ:


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದರ್ಶನ್ ಹೆಸರು ಹೇಳಿಕೊಂಡು ಪಬ್ಲಿಸಿಟಿ ತಗೊಳ್ಳೋ ಅವಶ್ಯಕತೆ ನಂಗಿಲ್ಲ: ನಟಿ ರಚಿತಾ ರಾಮ್‌


1. ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್ 1989 ರ ಡಿಸೆಂಬರ್ 18 ರಂದು ಗುಜ್ರನ್ವಾಲಾದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಆದರೆ ತಮ್ಮ ಏಕದಿನ ವೃತ್ತಿಜೀವನದ ಮೊದಲ ಪಂದ್ಯದಲ್ಲಿಯೇ ಶೂನ್ಯಕ್ಕೆ ಔಟಾಗಿದ್ದರು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 5ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದು ಖಾತೆ ತೆರೆಯದೆಯೇ ಪೆವಿಲಿಯನ್‌ಗೆ ಮರಳಿದರು.


2. ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ ಡಿಸೆಂಬರ್ 23, 2004 ರಂದು ಚಿತ್ತಗಾಂಗ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಧೋನಿ ತಮ್ಮ ಏಕದಿನ ವೃತ್ತಿಜೀವನದ ಮೊದಲ ಪಂದ್ಯದಲ್ಲಿಯೇ ಶೂನ್ಯಕ್ಕೆ ಔಟಾಗಿದ್ದರು. ಈ ಪಂದ್ಯದಲ್ಲಿ4 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದ ಅವರು ರನೌಟ್‌ ಆಗಿದ್ದರು.


3. ಸುರೇಶ್ ರೈನಾ
ಸುರೇಶ್ ರೈನಾ ಜುಲೈ 30, 2005 ರಂದು ಡಾಬುಲ್ಲಾದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ರೈನಾ ತಮ್ಮ ಏಕದಿನ ವೃತ್ತಿಜೀವನದ ಮೊದಲ ಪಂದ್ಯದಲ್ಲಿಯೇ ಶೂನ್ಯಕ್ಕೆ ಔಟಾಗಿದ್ದರು. ಶ್ರೀಲಂಕಾದ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಸುರೇಶ್ ರೈನಾ ಅವರನ್ನು ಎಲ್ಬಿಡಬ್ಲ್ಯೂ ಆಗಿ ಔಟ್ ಮಾಡಿದರು.


4. ಶಿಖರ್ ಧವನ್
ಶಿಖರ್ ಧವನ್ 20 ಅಕ್ಟೋಬರ್ 2010 ರಂದು ವಿಶಾಖಪಟ್ಟಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಆಸ್ಟ್ರೇಲಿಯಾದ ವೇಗಿ ಕ್ಲಿಂಟ್ ಮೆಕ್ಕೇ ಎಸೆತದಲ್ಲಿ ಶಿಖರ್ ಧವನ್ ಕ್ಲೀನ್ ಬೌಲ್ಡ್ ಆಗಿದ್ದರು.


ಇದನ್ನೂ ಓದಿ: ಈ ಹಣ್ಣಿನ ರಸ ಕುಡಿಯಿರಿ.. ಕಣ್ಣಿನ ದೃಷ್ಟಿ ಮಂಕಾಗೋದೇ ಇಲ್ಲ! ವಯಸ್ಸು 60 ದಾಟಿದ್ರೂ ಕನ್ನಡಕವೂ ಬೇಕಿಲ್ಲ, ಪೊರೆಯೂ ಬರೋದಿಲ್ಲ


5. ಕೃಷ್ಣಮಾಚಾರಿ ಶ್ರೀಕಾಂತ್
ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ 1981 ರ ನವೆಂಬರ್ 25 ರಂದು ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ODI ವೃತ್ತಿಜೀವನದ ಮೊದಲ ಪಂದ್ಯದಲ್ಲಿಯೇ ಕೃಷ್ಣಮಾಚಾರಿ ಶ್ರೀಕಾಂತ್ ಕೂಡ ಶೂನ್ಯಕ್ಕೆ ಔಟಾಗಿದ್ದರು. ಕೃಷ್ಣಮಾಚಾರಿ ಶ್ರೀಕಾಂತ್ ಅವರನ್ನು ಇಂಗ್ಲೆಂಡ್‌ನ ಶ್ರೇಷ್ಠ ಆಲ್‌ರೌಂಡರ್ ಇಯಾನ್ ಬೋಥಮ್ ಔಟ್ ಮಾಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.