Team India batting order: ಆಗಸ್ಟ್ 30 ರಂದು ನಡೆಯಲಿರುವ ಏಷ್ಯಾಕಪ್ ಟೂರ್ನಿಗೂ ಮುನ್ನ ಟೀಮ್‌ ಇಂಡಿಯಾ ಆಟಗಾರರು ಆರು ದಿನಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಆಲೂರು ಕ್ಯಾಂಪಸ್‌’ನಲ್ಲಿ ಸೇರಿರುವ ಆಟಗಾರರು ಅಂತಿಮ ತಯಾರಿ ನಡೆಸುತ್ತಿದ್ದಾರೆ. ಇವೆಲ್ಲದರ ಜೊತೆಗೆ ಪಂದ್ಯಾವಳಿಗಳಲ್ಲಿ ಭಾರತದ ಬ್ಯಾಟಿಂಗ್ ಕ್ರಮಾಂಕ ಹೇಗಿರಲಿದೆ ಎಂಬುದರ ಬಗ್ಗೆ ಇದೀಗ ಅಪ್ಡೇಟ್ ಹೊರಬಿದ್ದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 21 ವರ್ಷಗಳ ಬಳಿಕ ಕೂಡಿಬಂತು ಗುರುಬಲ: ಇನ್ನೊಂದು ತಿಂಗಳಲ್ಲಿ ದುಡ್ಡಿನಲ್ಲೇ ಮಿಂದೇಳುವರು ಈ ರಾಶಿಯವರು-ಅದೃಷ್ಟ ಅಂದ್ರೆ ಇವರದ್ದೇ


ಇನ್ನು ಏಷ್ಯಾಕಪ್’ಗೆ ಭಾರತ ತಂಡ ಪ್ರಕಟವಾದಾಗ ಎಲ್ಲರ ಗಮನ ಸೆಳೆದ ವಿಷಯವೆಂದರೆ ಕೆಎಲ್‌ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ವಾಪಾಸಾತಿ. ಸುದೀರ್ಘ ಅವಧಿಯಿಂದ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದ ಕನ್ನಡಿಗ ರಾಹುಲ್ ಮತ್ತು ಮುಂಬೈಕರ್ ಶ್ರೇಯಸ್ ಅಯ್ಯರ್, ಏಷ್ಯಾಕಪ್‌ ಮೂಲಕ ತಂಡಕ್ಕೆ ಮರಳುತ್ತಿದ್ದಾರೆ. 2023ರ ಐಪಿಎಲ್ ಸಮಯದಲ್ಲಿ ಗಾಯಗೊಂಡಿದ್ದ ರಾಹುಲ್ ಮೇ ತಿಂಗಳಿನಿಂದ ತಂಡದಿಂದ ಹೊರಗುಳಿದಿದ್ದರು.


ಇನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಅಭ್ಯಾಸ ಪಂದ್ಯಗಳ ಮೂಲಕ ತಮ್ಮ ಫಿಟ್‌ನೆಸ್ ಸಾಬೀತುಪಡಿಸಿದ ಈ ಇಬ್ಬರು ಆಟಗಾರರು ಮತ್ತೆ ತಂಡಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.


ಇನ್ನು ಕ್ರಿಕ್‌’ಬಜ್‌ ಪ್ರಕಾರ, ಅಭ್ಯಾಸ ಅವಧಿಯಲ್ಲಿ ಭಾರತದ ಬ್ಯಾಟಿಂಗ್‌ ಕ್ರಮಾಂಕವನ್ನು ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯಬಹುದು. ಇನ್ನು ನಂತರದ ಅಂದರೆ 4 ಮತ್ತು 5ನೇ ಕ್ರಮಾಂಕದಲ್ಲಿ ಕ್ರಮವಾಗಿ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟ್ ಬೀಸಲಿದ್ದಾರೆ.


ಇನ್ನು ನಂತರದ ಕ್ರಮಾಂಕದಲ್ಲಿ ಕನ್ನಡಿಗ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಮೈದಾನಕ್ಕೆ ಇಳಿಯಬಹುದು. ಇತ್ತೀಚೆಯಷ್ಟೇ ಟೀಂ ಇಂಡಿಯಾದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು, ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬೆಸ್ಟ್ ಫಿನಿಶರ್ ಆಗಬಲ್ಲರು ಎಂದು ಹೇಳಿಕೆ ಕೊಟ್ಟಿದ್ದರು.


ಇದನ್ನೂ ಓದಿ: ಏಕಾದಶಿ ತಿಥಿಯ ಅದ್ಭುತ ದಿನ: ಇಂದು ಈ ರಾಶಿಯವರಿಗೆ ವಿಶೇಷ ಫಲ-ಉದ್ಯೋಗದಲ್ಲಿ ಹಿಂದೆಂದೂ ಕಂಡಿರದ ಯಶ


ಇನ್ನು ತಂಡ ಪ್ರಕಟವಾದ ಸಂದರ್ಭಲ್ಲಿ ಭಾರತದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಹೇಳಿರುವ ಪ್ರಕಾರ, ಏಷ್ಯಾಕಪ್‌ನ ಮೊದಲೆರಡು ಪಂದ್ಯಗಳಿಂದ ಕೆಎಲ್ ರಾಹುಲ್ ಹೊರಗುಳಿಯಬಹುದು. ಒಂದು ವೇಳೆ ರಾಹುಲ್ ತಂಡದಿಂದ ಹೊರಗುಳಿದರೆ, ಇಶಾನ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಆದರೆ ಇಶಾನ್ 5ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೋ ಅಥವಾ ಗಿಲ್ ಬದಲಿಗೆ ಆರಂಭಿಕರಾಗಿ ಕಣಕ್ಕಿಳಿಯುತ್ತಾರೋ ಎಂಬುದು ಇನ್ನೂ ಗೊಂದಲದಲ್ಲಿರುವ ವಿಷಯ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ