Virat Kohli on Rohit Sharma Memory Power: ಟೀಂ ಇಂಡಿಯಾದ ಹಿಟ್ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ನಾಯಕ ರೋಹಿತ್ ಶರ್ಮಾ ಮೈದಾನಕ್ಕಿಳಿದರೆ ಧೂಳೆಬ್ಬಿಸೋದು ಖಂಡಿತ. ಅಷ್ಟೇ ಅಲ್ಲದೆ, ರೋಹಿತ್ ಮಾಡುವ ಕೆಲಸಗಳಿಂದ ಆಗಾಗ್ಗ ಅವರು ಅಭಿಮಾನಿಗಳ ಮನಗೆಲ್ಲುವುದುಂಟು. ಕಳೆದ ದಿನ ನಡೆದ ಪಂದ್ಯದ ವೇಳೆ ಮೈದಾನಕ್ಕೆ ಓಡಿ ಬಂದು ಪುಟ್ಟ ಅಭಿಮಾನಿಯೊಬ್ಬ ರೋಹಿತ್ ಅವರನ್ನು ತಬ್ಬಿ ಹಿಡಿದಿದ್ದ. ಆದರೆ ಈ ಸಂದರ್ಭದಲ್ಲಿ ಬಾಲಕನನ್ನು ತಬ್ಬಿಕೊಂಡ ನಾಯಕ, ಆತನಿಗೆ ಏನೂ ಮಾಡದೆ ಹೊರಗೆ ಕರೆದುಕೊಂಡು ಹೋಗಿ ಎಂದು ಮನವಿ ಮಾಡಿದ್ದರು. ಈ ವಿಡಿಯೋ ಸಖತ್ ಟ್ರೆಂಡಿಂಗ್ ಆಗಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Rohit Sharma Retirement: ನಾಯಕ ಸ್ಥಾನಕ್ಕೆ ರೋಹಿತ್ ಶರ್ಮಾ ನಿವೃತ್ತಿ!? ವಿಶ್ವಕಪ್ ಬಳಿಕ ಇವರೇ ಟೀಂ ಇಂಡಿಯಾ ಕ್ಯಾಪ್ಟನ್!


ಆದರೆ ಇದೇ ಪಂದ್ಯ ಪ್ರಾರಂಭಕ್ಕೂ ಮುನ್ನ ಟಾಸ್ ವೇಳೆ ನಡೆದ ಒಂದು ಘಟನೆ ನೆರೆದಿದ್ದವರನ್ನು ನಗೆಪಾಟಲಿಗೀಡು ಮಾಡಿತ್ತು. ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ಅದಕ್ಕೂ ಮುನ್ನ ಟಾಸ್ ಆದ ನಂತರ ನಿಮ್ಮ ನಿರ್ಧಾರ ತಿಳಿಸಿ ಎಂದಾಹ ಸುಮಾರು 20 ಸೆಕೆಂಡುಗಳ ಕಾಲ ಏನು ಹೇಳಬೇಕು ಎಂಬುದನ್ನು ಆಲೋಚಿಸಿ ಮತ್ತೆ ತಮ್ಮ ನಿರ್ಧಾರವನ್ನು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಆ 20 ಸೆಕೆಂಡುಗಳ ಕಾಲ ತೆಗೆದುಕೊಳ್ಳಬೇಕಾದ ನಿರ್ಧಾರವನ್ನು ಏನು ಎಂಬುದನ್ನು ಅವರು ಮರೆತಿದ್ದರು. ಮೊದಲು ಬೌಲಿಂಗ್ ಮಾಡಬೇಕೇ ಅಥವಾ ಬ್ಯಾಟಿಂಗ್ ಮಾಡಬೇಕೇ ಎಂದು ಹೇಳಲು ಚಡಪಡಿಸಿದ್ದು, ಕಡೆಗೆ ಸಿಟ್ಟಿಗೆದ್ದು ತಲೆ ಕೆರೆದುಕೊಂಡಿದ್ದಾರೆ. ಕಡೆಗೆ ಬೌಲಿಂಗ್ ಮಾಡಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಈ ಸನ್ನಿವೇಶ ಕಂಡು ಎಲ್ಲರೂ ನಕ್ಕು ನಕ್ಕು ಸುಸ್ತಾಗಿದ್ದಾರೆ.


ಇನ್ನು ರೋಹಿತ್ ಶರ್ಮಾ ಅವರಿಗೆ ಮರೆವು ಕಾಯಿಲೆ ಇರುವಂತೆ ಕಾಣಿಸುತ್ತದೆ. ಇದಕ್ಕೆ ಪುರಾವೆ ಎಂಬಂತೆ ವಿರಾಟ್ ಕೊಹ್ಲಿ ಕೂಡ ಕೆಲವೊಂದು ಹೇಳಿಕೆಗಳನ್ನು ನೀಡಿದ್ದರು.


KL Rahul Tattoos: ಕೆಎಲ್ ರಾಹುಲ್ ದೇಹದಲ್ಲಿದೆ 9 ಟ್ಯಾಟೂಗಳು: ಒಂದೊಂದಕ್ಕೂ ಇದೆಯಂತೆ ವಿಭಿನ್ನ ಅರ್ಥ!


"ರೋಹಿತ್ ಶರ್ಮಾ ಮರೆಯುವುದು ಒಂದಲ್ಲ ಎರಡಲ್ಲ. ಅನೇಕ ವಿಷಯಗಳನ್ನು ಮರೆಯತ್ತಾರೆ. ಇಂತಹ ಮರೆಗುಳಿಯನ್ನು ನಾನೆಂದು ನೋಡಿಲ್ಲ. ಐಪ್ಯಾಡ್, ವ್ಯಾಲೆಟ್, ಫೋನ್ ಮಾತ್ರವಲ್ಲ. ಎಲ್ಲಾ ದೈನಂದಿನ ಬಳಕೆಯ ವಸ್ತುಗಳನ್ನೇ ಮರೆಯುತ್ತಾರೆ. ಹೊಸದು ಕೊಂಡರೆ ಆಯಿತು ಎಂದು ಬರುತ್ತಾರೆ. ಆದರೆ ಅವರಿಗೆ ತಾನು ಏನನ್ನು ಮರೆತು ಬಂದಿದ್ದೇನೆ ಎಂಬುದೇ ತಿಳಿದಿರುವುದಿಲ್ಲ. ಬಸ್ ಹೊರಟು ಅರ್ಧ ದಾರಿಯಲ್ಲಿ ಪ್ರಯಾಣಿಸುವಾಗ ಓಹ್, ನಾನು ನನ್ನ ಐಪ್ಯಾಡ್ ಅನ್ನು ವಿಮಾನದಲ್ಲಿ ಬಿಟ್ಟಿದ್ದೇನೆ ಎಂದು ನೆನಪಿಸಿಕೊಳ್ಳುತ್ತಾರೆ. ಪಾಸ್‌ಪೋರ್ಟ್ ಅನ್ನು ಸಹ ಕೆಲವು ಬಾರಿ ಬಿಟ್ಟು ಹೋಗಿದ್ದಾರೆ. ಅದನ್ನು ಹಿಂಪಡೆಯುವುದು ನಿಜವಾಗಿಯೂ ಕಷ್ಟಕರವಾಗಿತ್ತು. ಲಾಜಿಸ್ಟಿಕಲ್ ಮ್ಯಾನೇಜರ್ ಯಾವಾಗಲೂ ಕೇಳುತ್ತಾರೆ, 'ರೋಹಿತ್ ಶರ್ಮಾ ಅವರ ಬಳಿ ಎಲ್ಲಾ ವಸ್ತುಗಳು ಇದೆಯೇ?'. ಒಮ್ಮೆ ಅವರು ರೋಹಿತ್‌ನಿಂದ ಹೌದು ಎಂದು ಕೇಳಿದರೆ ಮಾತ್ರ ಬಸ್ ಹೊರಡುತ್ತದೆ" ಎಂದು ಕೊಹ್ಲಿ ಐದು ವರ್ಷಗಳ ಹಿಂದೆ ಹೇಳಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.