Rahul Dravid : ಭಾತರ ತಂಡದ ಮುಖ್ಯಕೋಚ್‌ ರಾಹುಲ್‌ ದ್ರಾವಿಡ್‌ ಸಧ್ಯ ಮೈಸೂರಿನಲ್ಲಿದ್ದಾರೆ. ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈಸೂರು ವಲಯ ಆಯೋಜಿಸಿದ್ದ U-19 ಕೂಚ್ ಬೆಹಾರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ವೀಕ್ಷಿಸಲು ತಮ್ಮ ಪತ್ನಿ ಜೊತೆ ಬಂದಿದ್ದಾರೆ. ಈ ಪಂದ್ಯಾವಳಿಯಲ್ಲಿ ದ್ರಾವಿಡ್‌ ಪುತ್ರ ಸಮೀತ್‌ ದ್ರಾವಿಡ್‌ ಆಟವಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಮೈಸೂರು ವಲಯ U-19 ಕೂಚ್ ಬೆಹಾರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ. ಈ ಮ್ಯಾಚ್‌ಗಳು ಮೈಸೂರಿನ ಮಾನಸ ಗಂಗೋತ್ರಿಯ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. 


ಇದನ್ನೂ ಓದಿ: ಟಿ 20 ವಿಶ್ವಕಪ್ ನಲ್ಲಿ ಈ ಆಟಗಾರನೇ ಟೀಂ ಇಂಡಿಯಾವನ್ನು ಮುನ್ನಡೆಸಬೇಕು : ಗಂಗೂಲಿ ಹೇಳಿದ್ದು ಯಾರ ಬಗ್ಗೆ?


ಇನ್ನು ಟೀಂ ರಾಹುಲ್‌ ದ್ರಾವಿಡ್‌ ಅವರ ಹಿರಿಯ ಮಗ ಸಮಿತ್‌ ದ್ರಾವಿಡ್‌ ಅಂಡರ್‌-19 ಕೂಚ್‌ ಬೆಹರ್‌ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಕರ್ನಾಟಕ ಮತ್ತು ಉತ್ತರಾಖಂಡ ನಡುವಿನ ಪಂದ್ಯವನ್ನು ವೀಕ್ಷಿಸಲು ದ್ರಾವಿಡ್‌ ಆಗಮಿಸಿದ್ದಾರೆ. 


ಮೊದಲು ಬ್ಯಾಟಿಂಗ್‌ ಮಾಡಿದ ಉತ್ತರಾಖಂಡ್‌ 9 ವಿಕೆಟ್‌ ನಷ್ಟಕ್ಕೆ 232 ರನ್‌ ಕಲೆಹಾಕಿತು. ಆಲ್ರೌಂಡಡರ್ ಸಮಿತ್‌ 5 ಓವರ್‌ನಲ್ಲಿ 11 ರನ್‌ ನೀಡಿ, 2 ಮೇಡನ್‌ ಮಾಡಿದರು. ಸಧ್ಯ ಮಗನ ಆಟವನ್ನು ನೋಡಲು ದ್ರಾವಿಡ್‌ ಜನ ಸಾಮಾನ್ಯರಂತೆ ಕ್ರೀಡಾಂಗಣದ ಕಲ್ಲು ಹಾಸಿನ ಮೇಲೆ ಕುಳಿತಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.