Tilak Verma Net Worth: ಆಗಸ್ಟ್ 3, 2023 ರಂದು ವೆಸ್ಟ್ ಇಂಡೀಸ್ ವಿರುದ್ಧದ T20Iಗೆ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ತಿಲಕ್ ವರ್ಮಾ, ಈ ಬಾರಿ ಏಷ್ಯನ್ ಗೇಮ್ಸ್’ನಲ್ಲೂ ಗೆಲುವಿನ ರುವಾರಿಗಳಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಋತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿತ್ತು. ಈ ಪಂದ್ಯದಲ್ಲಿ ತಿಲಕ್ ವರ್ಮಾ ಬಿರುಸಿನ ಬ್ಯಾಟಿಂಗ್ ಮೂಲಕ 55 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದ್ದರು. ಇದರಲ್ಲಿ 6 ಸಿಕ್ಸರ್‌’ಗಳು ಸೇರಿದ್ದವು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇನ್ನೆರಡು ವಾರದಲ್ಲಿ ವರ್ಷದ ಕೊನೆಯ ಚಂದ್ರಗ್ರಹಣ: ಈ 3 ರಾಶಿಯವರಿಗೆ ಧನಸಂಪತ್ತಿನ ಹೊನಲು, ಕೀರ್ತಿ ಜೊತೆ ಆಯಸ್ಸು ವೃದ್ಧಿ


ತಿಲಕ್ ವರ್ಮಾ ಹೆಸರಾಂತ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರು. ಐಪಿಎಲ್‌’ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ತಿಲಕ್, ಜನಿಸಿದ್ದು ಹೈದರಾಬಾದ್‌’ನಲ್ಲಿ. ಅವರ ತಂದೆ ಕೂಡ ಹೈದರಾಬಾದ್‌ ನಿವಾಸಿಯಾಗಿದ್ದು, ಸಾಮಾನ್ಯ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಇಂದು ತಿಲಕ್ ವರ್ಮಾ ಕೋಟಿ ಒಡೆಯನಾಗಿದ್ದಾರೆ.


ತಿಲಕ್ ವರ್ಮಾ ನವೆಂಬರ್ 8 2002ರಲ್ಲಿ ಹೈದರಾಬಾದ್‌’ನಲ್ಲಿ ಜನಿಸಿದರು. ಇನ್ನು 2022 ರಲ್ಲಿ ಐಪಿಎಲ್’ಗೆ ಪಾದಾರ್ಪಣೆ ಮಾಡಿದ ಅವರು, 2020-21 ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಎರಡು ಶತಕ ಬಾರಿಸಿದ್ದರು. ಆ ಬಳಿಕ ಆಯ್ಕೆ ಸಮಿತಿ ಗಮನ ಸೆಳೆದ ತಿಲಕ್ ಅವರನ್ನು, ಮುಂಬೈ ಇಂಡಿಯನ್ 2022ರ ಹರಾಜಿನಲ್ಲಿ 1 ಕೋಟಿ 70 ಲಕ್ಷಕ್ಕೆ ಖರೀದಿಸಿದರು. ಅವರ ಮೂಲ ಬೆಲೆ 20 ಲಕ್ಷ ರೂಪಾಯಿ ಮತ್ತು ಅನ್ ಕ್ಯಾಪ್ಡ್ ಆಟಗಾರರಾಗಿದ್ದರು.


ಇದನ್ನೂ ಓದಿ: ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಬೇಕಾದರೆ ಭಾರತ ತಂಡ ಎಷ್ಟು ಪಂದ್ಯ ಗೆಲ್ಲಬೇಕು?


ತಿಲಕ್ ವರ್ಮಾ ಅವರ ನಿವ್ವಳ ಮೌಲ್ಯ ಎಷ್ಟು?


ತಿಲಕ್ ವರ್ಮಾ ಅವರ ಒಟ್ಟು ಸಂಪತ್ತು 575.48 ಸಾವಿರ ಡಾಲರ್, ಇದು ಭಾರತೀಯ ರೂಪಾಯಿಯಲ್ಲಿ ಸರಿಸುಮಾರು 4.72 ಕೋಟಿ. ಕ್ರಿಕೆಟ್ ಪಂದ್ಯಗಳಿಂದ ಬರುವ ಲಾಭ ಮತ್ತು ಅವರ ಬ್ರಾಂಡ್ ಅನುಮೋದನೆಗಳು ಅವರ ಆದಾಯದ ಪ್ರಮುಖ ಭಾಗವಾಗಿದೆ. ಇವರ ಬಳಿ ಕೆಲವು ದುಬಾರಿ ಕಾರುಗಳು ಸಹ ಇವೆ. ಅವರು ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಅನ್ನು ಓಡಿಸುತ್ತಾರೆ. ಇದರ ಬೆಲೆ ಸುಮಾರು 1.5 ಕೋಟಿ ರೂ. ಇದಲ್ಲದೆ, BMW 7 ಸರಣಿಯನ್ನು ಹೊಂದಿದ್ದು, ಇದರ ಬೆಲೆ 2 ಕೋಟಿ ರೂ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.