Yashasvi jaiswal house : ಭಾರತ ಪ್ರವಾಸಲ್ಲಿರುವ ಆಂಗ್ಲರ ತಂಡಕ್ಕೆ ಕಂಟಕವಾಗಿರುವುದು ಟೀಂ ಇಂಡಿಯಾದ ಹೊಸ ಭರವಸೆ ಯಶಸ್ವಿ ಜೆಸ್ವಾಲ್‌. ತವರಿನಲ್ಲಿ ನಡೆಯುತ್ತಿರುವ ಟೆಸ್ಟ್‌ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದ ಯಶಸ್ವಿ ಜೈಸ್ವಾಲ್‌ ಭರ್ಜರಿ ಪ್ರದರ್ಶನ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಬಾಲ್ಯವನ್ನು ಬಡತನದಲ್ಲೇ ಕಳೆದ ಈ ಯುವ ಪ್ರತಿಭೆ ಈಗ ತಾನು ಪಟ್ಟ ಪರಿಶ್ರಮದಿಂದ ಇಂದು ಎಲ್ಲರು ಶಾಕ್‌ ಆಗುವ ಪ್ರದರ್ಶನ ನೀಡುತ್ತಿದ್ದಾನೆ. ಭಾರತ ತಂಡದ ಯುವ ತಾರೆ ಯಶಸ್ವಿ ಜೈಸ್ವಾಲ್ ಸದ್ಯ ಮುಂಬೈನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮನೆ ಖರೀದಿಸಿದ್ದಾರೆ. ಈ ಫ್ಲ್ಯಾಟ್‌ನ ಬೆಲೆ ಬರೋಬ್ಬರಿ 5.4 ಕೋಟಿ ರೂ. ಈ ಮನೆ ಖರೀದಿಸುವ ಚರ್ಚೆ ಬಹಳ ದಿನಗಳಿಂದ ನಡೆದಿತ್ತಂತೆ. ಈ ಅಪಾರ್ಟ್ಮೆಂಟ್ನ ಗಾತ್ರ 1,110 ಚದರ ಅಡಿ. ಇದರ ನೋಂದಣಿಯನ್ನು ಜನವರಿ 7 ರಂದು ಮಾಡಲಾಗಿದೆ ಎನ್ನಲಾಗಿದೆ. ಅಪಾರ್ಟ್ಮೆಂಟ್ ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದರೂ ಸಹ ಈ ವರ್ಷ ಯಶಸ್ವಿಗೆ ಹಸ್ತಾಂತರವಾಗಲಿದೆ ಎನ್ನಲಾಗಿದೆ. 


ಇದನ್ನು ಓದಿ : Mangal-Shukra Yuti: ಮಂಗಳ ಶುಕ್ರ ಯುತಿಯಿಂದ ಮೂರು ರಾಶಿಯವರಿಗೆ ಬಂಗಾರದ ಸಮಯ


ಯಶಸ್ವಿ ಖರೀದಿಸಿರುವ ಪ್ರಾಜೆಕ್ಟ್ ಅದಾನಿ ರಿಯಾಲ್ಟಿಯ X BKC ವಸತಿ ಯೋಜನೆಯಾಗಿದೆ. ಇದನ್ನು 2016 ರಲ್ಲಿ 2BHK, 3BHK ಮತ್ತು 4BHK ಅಪಾರ್ಟ್ಮೆಂಟ್ಗಳೊಂದಿಗೆ ಪ್ರಾರಂಭಿಸಲಾಗಿತ್ತು. ಇನ್ನು ಮನೆಯ ಒಳಗಡೆ ಡಿಸೈನಿಂಗ್‌ ವರ್ಕ್‌ ನಡೆಯುತ್ತಿದ್ದು, ಸುಂರವಾಗಿ ಅಣಿಯಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ ಯಶಸ್ವಿ ವಾರ್ಷಿಕ ವೇತನ 4 ಕೋಟಿ ರೂ. ಅವರ ನಿವ್ವಳ ಮೌಲ್ಯ ಸುಮಾರು 16 ಕೋಟಿ ರೂ. ಅವರು ಕಳೆದ ವರ್ಷ ಮುಂಬೈನ ಥಾಣೆಯಲ್ಲಿ 5 BHK ಫ್ಲಾಟ್ ಅನ್ನು ಸಹ ಖರೀದಿಸಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.