ಆನಂದಂ ಗುಜರಾತ್ : ಭಾರತೀಯ ಕ್ರಿಕೆಟ್ ತಂಡದ (Team India) ಫಾಸ್ಟ್ ಬೌಲರ್ ಜಯದೇವ್ ಉನಾದ್ಕಟ್ (Jaydev Unadkat)  ಪ್ರೀತಿ ಮುಂದೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಸೌರಾಷ್ಟ್ರಕ್ಕೆ (Saurashtra) ಆಡುವ 29 ವರ್ಷದ ಈ ಬೌಲರ್ ಪ್ರೇಯಸಿ ರಿನ್ನಿ ಜೊತೆ ರಹಸ್ಯವಾಗಿ ಮದುವೆ ಆಗಿದ್ದಾರೆ. ಮದುವೆಗೆ ಕೇವಲ ಹತ್ತಿರದ ಸಂಬಂಧಿಗಳು ಮತ್ತು ಗೆಳೆಯರಿಗೆ ಆಹ್ವಾನ ನೀಡಲಾಗಿತ್ತು. ಮದುವೆ ಕಾರ್ಯಕ್ರಮವನ್ನು ಎಲ್ಲಾ ರೀತಿಯಲ್ಲೂ ರಹಸ್ಯವಾಗಿಡಲಾಗಿತ್ತು.


COMMERCIAL BREAK
SCROLL TO CONTINUE READING

ಗುಜರಾತ್ ರೆಸಾರ್ಟಿನಲ್ಲಿ ನಡೆಯಿತು ಸಂಗೀತ್ : 
ಗುಜರಾತಿನ (Gujarat) ಆನಂದ್ ನಲ್ಲಿರುವ ಮಧುಬನ್ ರಿಸಾರ್ಟ್ ನಲ್ಲಿ ಈ ಮದುವೆ (Marriage) ನಡೆಯಿತು.  ಉನಾದ್ಕಟ್ (Jaydev Unadkat)  ಮತ್ತು ರಿನ್ನಿ ಇಬ್ಬರು ಕೂಡಾ ಎಲ್ಲಿಯೂ ತಮ್ಮ ಮದುವೆಯ ವಿಚಾರವನ್ನು ದೃಢಪಡಿಸಿಲ್ಲ. ಆದರೆ, ಸೋಮವಾರ ಇವರ ಸಂಗೀತ್ (Sangeeth) ಕಾರ್ಯಕ್ರಮ ನಡೆದಿದ್ದು, ಅದರ ವಿಡಿಯೋಗಳನ್ನು ಉನಾದ್ಕಟ್ ಗೆಳೆಯರು ಶೇರ್ ಮಾಡಿದ್ದಾರೆ.


ಇದನ್ನೂ ಓದಿ : "ಇಂಗ್ಲೆಂಡ್ ತಂಡವು ಭಾರತದ ವಿರುದ್ಧ ಯಾವುದೇ ಟೆಸ್ಟ್ ಗೆಲ್ಲುತ್ತದೆ ಎಂದು ಅನಿಸುವುದಿಲ್ಲ"


ಉನಾದ್ಕಟ್ ಒಲಮೆಯ ಈ ರಿನ್ನಿ ಯಾರು..? :
ಉನಾದ್ಕಟ್ ಮತ್ತು ರಿನ್ನಿ ಬಹಳ ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಉನಾದ್ಕಟ್ ಗೆಳತಿ ರಿನ್ನಿ ವೃತ್ತಿಯಲ್ಲಿ ಲಾಯರ್. ಮಾರ್ಚ್ 15, 2020ರಂದು ಇಬ್ಬರ ನಿಶ್ಚಿತಾರ್ಥ (Engagement) ನೆರವೇರಿತ್ತು.ಉನಾದ್ಕಟ್ ಖುದ್ದು ನಿಶ್ಚಿತಾರ್ಥದ ಫೋಟೋ ಶೇರ್ ಮಾಡಿದ್ದರು. ನಿಶ್ಚಿತಾರ್ಥಕ್ಕೆ ಎರಡು ದಿನ ಮೊದಲು ಸೌರಾಷ್ಟ್ರ ತಂಡ ರಣಜಿ ಟೂರ್ನಮೆಂಟಿನಲ್ಲಿ ಚಾಂಪಿಯನ್ ಆಗಿತ್ತು. 


ಟೀಂ ಇಂಡಿಯಾದಲ್ಲಿ ಉನಾದ್ಕಟ್ :
ಉನಾದ್ಕಟ್ ಟೀಂ ಇಂಡಿಯಾ (Team India) ಪರ 1 ಟೆಸ್ಟ್, 7 ಏಕದಿನ (OD) ಮತ್ತು 10 ಟಿ- ಟ್ವೆಂಟಿ (T20) ಮ್ಯಾಚ್ ಆಡಿದ್ದಾರೆ. ಏಕದಿನದಲ್ಲಿ ಉನಾದ್ಕಟರ 18 ವಿಕೆಟ್ ಮತ್ತು ಟಿ- 20ಯಲ್ಲಿ 14 ವಿಕೆಟ್ ಕಬಳಿಸಿದ್ದಾರೆ. ಟೆಸ್ಟ್ ಕ್ರಿಕೆಟಿನಲ್ಲಿ (Test Cricket) ಅವರಿಗೆ ಯಾವುದೇ ವಿಕೆಟ್ ಸಿಕ್ಕಿಲ್ಲ. ಉನಾದ್ಕಟ್ ಐಪಿಎಲ್ ನಲ್ಲೂ (IPL) ಫೇಮಸ್ ಆಗಿದ್ದು, 80 ಮ್ಯಾಚಿನಲ್ಲಿ 81 ವಿಕೆಟ್ (Wicket) ಕಬಳಿಸಿದ್ದಾರೆ.


ಇದನ್ನೂ ಓದಿ : IPL 2021: 14ನೇ ಆವೃತ್ತಿಯ ಐಪಿಎಲ್‌ ವೇಳಾಪಟ್ಟಿ ಅಂತಿಮ‌..!?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.