Team India: ಟೀಂ ಇಂಡಿಯಾದ ಡ್ಯಾಶಿಂಗ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯಂತಹ ಅದ್ಭುತ ನಾಯಕ ಈ ಆಲ್ ರೌಂಡರ್ ಎಂದು ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಓರ್ವ ಕ್ರಿಕೆಟಿಗನನ್ನು ಬಣ್ಣಿಸಿದ್ದಾರೆ. ಸುನಿಲ್ ಗವಾಸ್ಕರ್ ಪ್ರಕಾರ, ಭಾರತದ ಈ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯಂತೆ ಮೈದಾನದಲ್ಲಿ ಶಾಂತವಾಗಿರುತ್ತಾನೆ. ಅದು ಅವರಿಗೆ ಅತ್ಯುತ್ತಮ ನಾಯಕನಾಗಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL ಫೈನಲ್’ಗೂ ಮುನ್ನ ನಡೆಯುತ್ತಿದೆ ಈ ಮೋಸದಾಟ! ಗುಜರಾತ್ ಪೊಲೀಸರಿಂದ ಖಡಕ್ ವಾರ್ನಿಂಗ್


ಅಷ್ಟಕ್ಕೂ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಶ್ಲಾಘಿಸಿರುವುದು ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು. ಅವರು ತಮ್ಮ ತಂಡಕ್ಕೆ ತರುವ ಶಾಂತತೆಯು ಮಹೇಂದ್ರ ಸಿಂಗ್ ಧೋನಿಯನ್ನು ನೆನಪಿಸುತ್ತದೆ ಎಂದು ಹೇಳಿದ್ದಾರೆ.


ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಶುಕ್ರವಾರ ನಡೆದ ಐಪಿಎಲ್ 2023 ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 62 ರನ್‌ ಗಳಿಂದ ಸೋಲಿಸಿ ಸತತ ಎರಡನೇ ವರ್ಷ ಐಪಿಎಲ್ ಫೈನಲ್‌ ಗೆ ಲಗ್ಗೆ ಇಟ್ಟಿದೆ. ಐಪಿಎಲ್ 2023 ರ ಫೈನಲ್‌ ನಲ್ಲಿ ಗುಜರಾತ್ ಟೈಟಾನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.


ಈ ಸಂದರ್ಭದಲ್ಲಿ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಸ್ಟಾರ್ ಸ್ಪೋರ್ಟ್ಸ್‌ ಜೊತೆ ಮಾತನಾಡಿದ್ದು,”ಮಹೇಂದ್ರ ಸಿಂಗ್ ಧೋನಿ ಅವರ ವೃತ್ತಿಜೀವನವನ್ನು ಅನುಸರಿಸಿದ ವ್ಯಕ್ತಿಯಂತೆ ಅವರು (ಹಾರ್ದಿಕ್) ಇದ್ದಾರೆ. ಮಹೇಂದ್ರ ಸಿಂಗ್ ಧೋನಿಯ ಮೇಲಿನ ಅಭಿಮಾನ ಮತ್ತು ಪ್ರೀತಿಯ ಬಗ್ಗೆ ತುಂಬಾ ಮುಕ್ತರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಟಾಸ್‌ ಗೆ ಹೋದಾಗ, ಅವರು ತುಂಬಾ ಸ್ನೇಹಪರರಾಗಿರುತ್ತಾರೆ ಎಂದು ಹೇಳಿದ್ದಾರೆ.


ಆದರೆ ಪಂದ್ಯದ ವಿಷಯಕ್ಕೆ ಬಂದರೆ ಸಂಪೂರ್ಣ ಭಿನ್ನ ವಾತಾವರಣವಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಎಷ್ಟು ಬೇಗ ಕಲಿತೆ ಎಂಬುದನ್ನು ತೋರಿಸಲು ಇದೊಂದು ಉತ್ತಮ ಅವಕಾಶ. ಗುಜರಾತ್ ಟೈಟಾನ್ಸ್ ಆರಂಭಿಕ ಋತುವಿನಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿದರು ಎಂದು ಹೇಳಿದರು.


ಇದನ್ನೂ ಓದಿ: White Hair Tips: ಬಿಳಿ ಕೂದಲಿಗೆ ಡೈ ಮಾಡುವುದೇ ಬೇಡ… ಈ ಎಲೆ-ಬೀಜದ ಎಣ್ಣೆ ಬಳಸಿದರೆ ಸಾಕು!


ಸುನೀಲ್ ಗವಾಸ್ಕರ್, “ಹಾರ್ದಿಕ್ ಪಾಂಡ್ಯ ಕಳೆದ ವರ್ಷ ಮೊದಲ ಬಾರಿಗೆ ನಾಯಕತ್ವ ವಹಿಸಿದಾಗ, ಯಾರಿಗೂ ಏನನ್ನು ನಿರೀಕ್ಷಿಸಲು ಸಾಧ್ಯವಿರಲಿಲ್ಲ. ಪಾಂಡ್ಯ ತನ್ನ ತಂಡಕ್ಕೆ ತರುವ ಶಾಂತತೆಯು ಮಹೇಂದ್ರ ಸಿಂಗ್ ಧೋನಿಯನ್ನು ನೆನಪಿಸುತ್ತದೆ” ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ