Virat Kohli Anushka Sharma: ಮುಂಬರುವ ವಿಶ್ವಕಪ್‌ಗಾಗಿ ಟೀಮ್ ಇಂಡಿಯಾ ಆಟಗಾರರು ಯುಎಸ್ಎ ತಲುಪಿದ್ದಾರೆ.  ಈ ಮಧ್ಯೆ, ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಮಂಗಳವಾರ (ಮೇ 28) ರಾತ್ರಿ ತಮ್ಮ ಪತ್ನಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಸ್ನೇಹಿತರೊಂದಿಗೆ ಡಿನ್ನರ್ ಪಾರ್ಟಿಯಲ್ಲಿ (Dinner Party) ಕಾಣಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ವಿರುಷ್ಕಾ ಡಿನ್ನರ್ ಪಾರ್ಟಿಯಲ್ಲಿ ಖ್ಯಾತ ಕ್ರಿಕೆಟಿಗರು: 
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ (Virat Kohli Anushka Sharma) ದಂಪತಿಯೊಂದಿಗೆ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಮತ್ತು ಅವರ ಪತ್ನಿ ಸಾಗರಿಕಾ ಘಾಟ್ಗೆ, ಖ್ಯಾತ ಕ್ರಿಕೆಟ್ ಆಂಕರ್ ಗೌರವ್ ಕಪೂರ್ ಮತ್ತು ಇತರ ಕೆಲವು ಸ್ನೇಹಿತರು ಕೂಡ ಉಪಸ್ಥಿತರಿದ್ದರು.


ಮುಂಬೈನಲ್ಲಿ ವಿರುಷ್ಕಾ ಡಿನ್ನರ್ ಪಾರ್ಟಿ ವೈರಲ್  ವಿಡಿಯೋ (Dinner Party Video Viral) ವನ್ನು ಪ್ರಸಿದ್ಧ ಸ್ವತಂತ್ರ ಛಾಯಾಗ್ರಾಹಕ ಮತ್ತು ಡಿಜಿಟಲ್ ಸೃಷ್ಟಿಕರ್ತ ಮಾನವ್ ಮಂಗ್ಲಾನಿ ಶೇಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಎಲ್ಲಾ ಸ್ನೇಹಿತರು ಮುಂಬೈನ ರೆಸ್ಟೋರೆಂಟ್‌ನಿಂದ ಹೊರಬರುತ್ತಿರುವುದನ್ನು ಕಾಣಬಹುದಾಗಿದೆ. 



ಇದನ್ನೂ ಓದಿ- ದಾಂಪತ್ಯದಲ್ಲಿ ಬಿರುಕು ವಿಚ್ಛೇದನ ವರದಿಗಳ ನಡುವೆ ನ್ಯೂಯಾರ್ಕ್ ತಲುಪಿದ ಹಾರ್ದಿಕ್ ಪಾಂಡ್ಯ


ವಾಸ್ತವವಾಗಿ, ಟಿ20 ವಿಶ್ವಕಪ್‌ಗೂ (T20 World Cup) ಮುನ್ನ  ಟಿ 20 ವಿಶ್ವಕಪ್ ತಂಡದ 10 ಆಟಗಾರರ ಮೊದಲ ತಂಡ ರೋಹಿತ್ ಶರ್ಮಾ ನೇತೃತ್ವದಲ್ಲಿ ಯುಎಸ್‌ಎ ತಲುಪಿದ್ದು ಟೀಂ ಇಂಡಿಯಾ ತರಬೇತಿ ಆರಂಭಿಸಿದೆ. ಈ ಆಟಗಾರರಲ್ಲಿ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಕುಲದೀಪ್ ಯಾದವ್, ಶಿವಂ ದುಬೆ, ಅಕ್ಷರ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಸೇರಿದಂತೆ ಇತರ ಪ್ರಮುಖ ಸದಸ್ಯರು  ಸೇರಿದ್ದಾರೆ. ರಾಹುಲ್ ದ್ರಾವಿಡ್ ಮತ್ತು ಇತರ ಕೋಚಿಂಗ್ ಸಿಬ್ಬಂದಿ ಕೂಡ ಮೊದಲ ಬ್ಯಾಚ್ ಆಟಗಾರರೊಂದಿಗೆ ಪ್ರಯಾಣಿಸಿದರು.


ಇದನ್ನೂ ಓದಿ- ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಪ್ರಬಲ ಸ್ಪರ್ಧಿ! ಯಾಕ್ ಗೊತ್ತಾ?


ಐಪಿಎಲ್‌ನಲ್ಲಿ (IPL) ಪ್ಲೇಆಫ್ ತಲುಪಿದ ತಂಡಗಳ ವಿಶ್ವಕಪ್‌ನಲ್ಲಿ ಆಯ್ಕೆಯಾದ ಆಟಗಾರರನ್ನು ಎರಡನೇ ತಂಡಕದಲ್ಲಿ ಕಳುಹಿಸಲಾಗುತ್ತದೆ. ಟೀಮ್ ಇಂಡಿಯಾದ ಎರಡನೇ ತಂಡದಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಏಳು ಸದಸ್ಯರು ಶೀಘ್ರದಲ್ಲೇ ಟಿ 20 ವಿಶ್ವಕಪ್‌ಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.