IND vs SA : ಭಾರತ ತಂಡವು 5 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲು ಸಿದ್ಧವಾಗಿದೆ. ಈ ಸರಣಿಯನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ವಿಶ್ವಕಪ್‌ಗೆ ಉತ್ತಮ ರೀತಿಯಲ್ಲಿ ತಯಾರಿ ನಡೆಸಲಿದೆ. ಈ ನಡುವೆ ಟೀಂ ಇಂಡಿಯಾದ ಲೆಜೆಂಡರಿ ಆಲ್ ರೌಂಡರ್ ಇರ್ಫಾನ್ ಪಠಾಣ್ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಪ್ರದರ್ಶನ ನೀಡಬಲ್ಲ ಆಟಗಾರನೊಬ್ಬನ ಬಗ್ಗೆ ಭವಿಷ್ಯ ನುಡಿದಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬ್ಯಾಟ್ಸ್‌ಮನ್ ಅದ್ಭುತ ಪ್ರದರ್ಶನ ನೀಡಲಿದ್ದಾರೆ 


ಈ ಕುರಿತು ಸ್ಟಾರ್ ಸ್ಪೋರ್ಟ್ಸ್‌ನ ಫಾಲೋ ದಿ ಬ್ಲೂಸ್ ಶೋನಲ್ಲಿ ಮಾತನಾಡಿದ ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್, ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೆ ಕೆಎಲ್ ರಾಹುಲ್ ನಾಯಕತ್ವ ವಹಿಸುವ ನಿರೀಕ್ಷೆಯಲ್ಲಿರುವುದರಿಂದ, ಈ ಪಂದ್ಯದಲ್ಲಿ ರಾಹುಲ್ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ ಸರಣಿಯ ಮೊದಲ ಪಂದ್ಯವನ್ನು ಗೆಲ್ಲಲು ತುದಿಗಳಿನಿನಲ್ಲಿ ನಿಂತಿದೆ. ಏಕೆಂದರೆ ಅವರು ಈ ಪಂದ್ಯವನ್ನು ಗೆದ್ದರೆ ತಂಡವು 13 ಟಿ20 ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಬರೆಯಲಿದೆ. 


ಇದೇ ಮೊದಲ ಬಾರಿಗೆ ನಾಯಕತ್ವವಹಿಸಿಕೊಂಡ ರಾಹುಲ್ 


ಇದೇ ಮೊದಲ ಬಾರಿಗೆ ರಾಹುಲ್ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ತಂಡವು ತಯಾರಿ ಆರಂಭಿಸಿದೆ. 'ಭಾರತ ತಂಡದ ಪ್ರತಿಯೊಬ್ಬ ಆಟಗಾರನ ಪ್ರದರ್ಶನವನ್ನು ಪರೀಕ್ಷಿಸಲಾಗಿದ್ದರೂ, ರಾಹುಲ್‌ಗೆ ಇದು ಹೆಚ್ಚು ಕಷ್ಟಕರವಾಗಿರುತ್ತದೆ ಎಂದು ಹೇಳಿದ್ದಾರೆ. 


ಉತ್ತಮ ಕ್ಯಾಪ್ಟನ್ ಕೆಎಲ್ ರಾಹುಲ್ 


ಐಪಿಎಲ್ ಪಂಜಾಬ್ ಕಿಂಗ್ಸ್ ನಾಯಕನಾಗಿ ರಾಹುಲ್ ಮೊದಲ ಬಾರಿಗೆ ಉತ್ತಮವಾಗಿ ಮುನ್ನಡೆಸಿದ್ದಾರೆ ಎಂದು ಮಾಜಿ ಕ್ರಿಕೆಟಿಗರು ಭಾವಿಸಿದ್ದಾರೆ. ಹಾಗೆ, 2022 ರ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಮುನ್ನಡೆಸಿದರು, ಆದರೆ ತಂಡವು ಐಪಿಎಲ್‌ನ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಇನ್ನು ಮಾಜಿ ಕ್ರಿಕೆಟಿಗ, 'ರಾಹುಲ್ ಅವರ ಬ್ಯಾಟಿಂಗ್ ಸ್ಟೈಲ್ ಇನ್ನೂ ಸುಧಾರಿಸಬೇಕಾಗಿದೆ. ಸಮಯ ಕಳೆದಂತೆ, ಅವರು ಉತ್ತಮ ಪಿತಾದರ್ಶನ ನೀಡಲಿದ್ದಾರೆ. ಅವರು ಶಾಂತ ಮತ್ತು ಅತ್ಯಂತ ಅನುಭವಿ ಆಟಗಾರ. ನಾಯಕನಾಗಿ ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ನನಗೆ ಖಾತ್ರಿಯಿದೆ ಮತ್ತು ನಾನು ರಾಹುಲ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ