IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಮಾರ್ಚ್ 9 ರಂದು ಪ್ರಾರಂಭವಾಗಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅತೀ ಮುಖ್ಯವಾಗಿದೆ. ಈ ಪಂದ್ಯ ಗೆದ್ದ ತಕ್ಷಣ ಭಾರತ 3-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಳ್ಳಲಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಡಬ್ಲ್ಯುಟಿಸಿ ಫೈನಲ್) ಫೈನಲ್‌ನ ಟಿಕೆಟ್ ಕೂಡ ಪಡೆಯಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 23ರ ಹರೆಯದ ಈ ಆಟಗಾರನಿಂದ ಅಂತ್ಯವಾಯ್ತು KL Rahul ವೃತ್ತಿಜೀವನ!


ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡ 571 ರನ್ ಗಳಿಸಿತ್ತು. ನಾಲ್ಕನೇ ದಿನದ ಮೂರನೇ ಸೆಷನ್‌ನಲ್ಲಿ ಅವರ ಇನ್ನಿಂಗ್ಸ್ ಕೊನೆಗೊಂಡಿತು. ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿದರು. ಆರಂಭಿಕರಾದ ಶುಭ್ಮನ್ ಗಿಲ್ (128) ನಂತರ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ 186 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು ಔಟಾಗುತ್ತಿದ್ದಂತೆಯೇ ತಂಡ ಕುಸಿದಿತ್ತು. 364 ಎಸೆತಗಳ ಸಂಯಮದ ಇನ್ನಿಂಗ್ಸ್‌ನಲ್ಲಿ ವಿರಾಟ್ 15 ಬೌಂಡರಿಗಳನ್ನು ಬಾರಿಸಿದರು. ಆಸ್ಟ್ರೇಲಿಯಾ ಪರ ಆಫ್ ಸ್ಪಿನ್ನರ್ ಗಳಾದ ನಾಥನ್ ಲಿಯಾನ್ ಮತ್ತು ಟಾಡ್ ಮರ್ಫಿ 3-3 ವಿಕೆಟ್ ಪಡೆದರು. ಭಾರತ ತಂಡ 91 ರನ್‌ಗಳ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 480 ರನ್ ಗಳಿಸಿತ್ತು.


ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಸುಮಾರು 3 ವರ್ಷಗಳ ನಂತರ ಟೆಸ್ಟ್ ಮಾದರಿಯಲ್ಲಿ ಶತಕ ಬಾರಿಸಿದರು. ಇದು ವಿರಾಟ್ ವೃತ್ತಿ ಬದುಕಿನ 75ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಆದರೆ ಅವರು ಇನ್ನಿಂಗ್ಸ್ ಹೊಂದಿಸುವಲ್ಲಿ ದೀರ್ಘಕಾಲ ತೊಡಗಿದ್ದರು. ಅವರು 364 ಎಸೆತಗಳನ್ನು ಆಡಿದ್ದರು. ಇನ್ನೊಂದೆಡೆ ಅಕ್ಷರ್ ಪಟೇಲ್ 113 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ಮೂಲಕ 79 ರನ್ ಕೊಡುಗೆ ನೀಡಿದರು. ವಿರಾಟ್ ಮತ್ತು ಅಕ್ಷರ್ ಆರನೇ ವಿಕೆಟ್‌ಗೆ 162 ರನ್ ಸೇರಿಸಿದರು. ಸ್ಟಾರ್ಕ್ ಎಸೆತದಲ್ಲಿ ಅಕ್ಷರ್ ಬೌಲ್ಡ್ ಆದರು.


ಇದನ್ನೂ ಓದಿ: ಈ ದಿಗ್ಗಜನ ದಾಖಲೆ ಉಡೀಸ್, 3 ವರ್ಷಗಳ ಕಾಯುವಿಕೆ ಅಂತ್ಯ: ವಿರಾಟ್ 28ನೇ ಟೆಸ್ಟ್ ಶತಕವನ್ನು ಅರ್ಪಿಸಿದ್ದು ಯಾರಿಗೆ ಗೊತ್ತಾ?


ಟೀಂ ಇಂಡಿಯಾಗೆ ಪಂದ್ಯ ಗೆಲ್ಲಬೇಕೆಂದಿಲ್ಲವೇ?


“ಭಾರತ ಕ್ರಿಕೆಟ್ ತಂಡ ಈ ಪಂದ್ಯವನ್ನು ಗೆಲ್ಲಲು ಬಯಸುವುದಿಲ್ಲ” ಅಂತ ಕೆಲ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಹೇಳುತ್ತಿದ್ದಾರೆ. ನಾಲ್ಕನೇ ದಿನದ ಮೊದಲೆರಡು ಸೆಷನ್‌ಗಳಲ್ಲಿ ಟೀಂ ಇಂಡಿಯಾ ನಿಧಾನವಾಗಿ ಬ್ಯಾಟಿಂಗ್ ಮಾಡಿದ ರೀತಿ, ವೈಖರಿ ಬಗ್ಗೆ ಪ್ರಶ್ನೆಗಳು ಎದ್ದಿವೆ ಎಂದು ಕಾಮೆಂಟರಿ ವೇಳೆಯೂ ಹೇಳಲಾಗಿತ್ತು. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್‌ಗೆ 289 ರನ್ ಗಳಿಸಿತ್ತು. ಇನ್ನೊಂದೆಡೆ ಟೀಮ್ ಇಂಡಿಯಾ ನಾಲ್ಕನೇ ದಿನದ ಟಿ-ಬ್ರೇಕ್ ತನಕ ಕೇವಲ 183 ರನ್ಗಳನ್ನು ಪೇರಿಸಿತು. ಆಗ ಕ್ರೀಸ್ ನಲ್ಲಿ ವಿರಾಟ್ ಅವರಂತಹ ಬಲಿಷ್ಠ ಆಟಗಾರರಿದ್ದರು. ಇದಾದ ಬಳಿಕ ಲಯಕ್ಕೆ ಬಂದ ವಿರಾಟ್ ಕೊನೆಯ ಅವಧಿಯಲ್ಲಿ ತಂಡಕ್ಕೆ ವೇಗವನ್ನು ನೀಡಿದರು. ಆರಂಭದಲ್ಲಿ ಈ ರನ್ ರೇಟ್ ಅಳವಡಿಸಿಕೊಂಡಿದ್ದರೆ, ಪಂದ್ಯ ಬೇರೆ ದಾರಿಯಲ್ಲಿ ತಿರುಗಬಹುದಿತ್ತು ಎಂಬುದು ಕ್ರಿಕೆಟ್ ಅಭಿಮಾನಿಗಳ ಮಾತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.