Team India: ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡದ ನಡುವಿನ ಮೂರು ಪಂದ್ಯಗಳ T20 ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಇಂದು ಅಂದರೆ ಅಕ್ಟೋಬರ್ 12 ರಂದು ನಡೆದಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಜಾತಕದಲ್ಲಿ ಗಜಕೇಸರಿ ಯೋಗ... ಈ ರಾಶಿಯವರು ಇನ್ನುಂದೆ ಮುಟ್ಟಿದ್ದೆಲ್ಲಾ ಚಿನ್ನವೇ! ಒಂದೇ ಸಮನೆ ಸಂಪತ್ತು ಉಕ್ಕಿಬರುವುದು, ಸರ್ಕಾರಿ ನೌಕರಿ ಭಾಗ್ಯ ಇವರದ್ದು


ಅಂದಹಾಗೆ ಈ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ ನಷ್ಟಕ್ಕೆ 297 ರನ್‌ ಕಲೆಹಾಕಿದ್ದು, ಇದು ಟಿ20 ಕ್ರಿಕೆಟ್‌ ಚರಿತ್ರೆಯಲ್ಲೇ ಅತ್ಯಧಿಕ ಸ್ಕೋರ್‌ ಆಗಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.


ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದು, ಮೊದಲು ಬ್ಯಾಟಿಂಗ್ ಗೆ ಬಂದ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ಆದರೆ ಆ ಬಳಿಕ ಸಂಜು ಸ್ಯಾಮ್ಸನ್‌ ಮಿಂಚಿನ ಆಟ ಪ್ರದರ್ಶಿಸಿ 111 ರನ್‌ಗಳ ಭರ್ಜರಿ ಕೊಡುಗೆ ನೀಡಿದರು.


ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು 86 ರನ್‌ಗಳಿಂದ ಸೋಲಿಸಿತ್ತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿತ್ತು. ಇಂದಿನ ಪಂದ್ಯವನ್ನು ಗೆದ್ದರೆ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡುತ್ತದೆ.


ಇದನ್ನೂ ಓದಿ:  ಈ 6 ಜನ್ಮರಾಶಿಗಳಿಗೆ ಶುಕ್ರದೆಸೆ ಶುರು... ಜೀವನದಲ್ಲಿ ಸಾಧ್ಯವೇ ಇಲ್ಲ ಎನ್ನುವ ಕೆಲಸವೂ ಕೈಗೂಡುವುದು! ಅದೃಷ್ಟಕ್ಕೆ ಮತ್ತೊಂದು ಹೆಸರಾಗುವರು ಈ ಷಷ್ಟರಾಶಿಯವರು


T20I ಗಳಲ್ಲಿ ಗರಿಷ್ಠ ಸ್ಕೋರ್:
ಭಾರತ: 2024 ರಲ್ಲಿ ಬಾಂಗ್ಲಾದೇಶ ವಿರುದ್ಧ 297/6
ಅಫ್ಘಾನಿಸ್ತಾನ: 2019 ರಲ್ಲಿ ಐರ್ಲೆಂಡ್ ವಿರುದ್ಧ 278/3
ಇಂಗ್ಲೆಂಡ್: 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 267/3
ಆಸ್ಟ್ರೇಲಿಯಾ: 2016 ರಲ್ಲಿ ಶ್ರೀಲಂಕಾ ವಿರುದ್ಧ 263/3
ಶ್ರೀಲಂಕಾ: 2007 ರಲ್ಲಿ ಕೀನ್ಯಾ ವಿರುದ್ಧ 260/6


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.