ನವದೆಹಲಿ: ಟೀಂ ಇಂಡಿಯಾ ಓಪನರ್ ಮನೀಶ್ ಪಾಂಡೆ ಈಗ ಮದುವೆಯ ಸಂಭ್ರಮದಲ್ಲಿದ್ದಾರೆ. ದಕ್ಷಿಣ ಭಾರತದ ನಟಿ ಅಶ್ರಿತಾ ಶೆಟ್ಟಿ ಅವರೊಂದಿಗೆ ಕ್ರಿಕೆಟಿಗ ಮನೀಶ್ ಇದೇ ಡಿಸೆಂಬರ್ 2 ರಂದು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.


COMMERCIAL BREAK
SCROLL TO CONTINUE READING

2012ರಲ್ಲಿ ಬಿಡುಗಡೆಯಾದ 'ತೆಲಿಕೇಡಾ ಬೋಲಿ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ 26 ವರ್ಷದ ನಟಿ ಅಶ್ರಿತಾ ಅವರು ಇಂದ್ರಜಿತ್, ಒರು ಕನ್ನಿಯಂ ಮೂನು ಕಲವಾನಿಕಲಂ, ಉದಯಂ ಎನ್‌ಎಚ್ 4 ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.


ಮಾಧ್ಯಮ ವರದಿಗಳ ಪ್ರಕಾರ, ಮನೀಶ್ ಪಾಂಡೆ ಅವರ ವಿವಾಹ ಕಾರ್ಯಕ್ರಮದಲ್ಲಿ ಆಪ್ತರು ಮತ್ತು ಸಂಬಂಧಿಕರು ಭಾಗವಹಿಸಲಿದ್ದು, ಸಂಪ್ರದಾಯದ ಪ್ರಕಾರ ಎರಡು ದಿನಗಳ ಕಾಲ ವಿವಾಹ ಕಾರ್ಯಕ್ರಮ ನಡೆಯಲಿದೆ.  


ಕನ್ನಡದ ಕ್ರಿಕೆಟಿಗನಾದ ಮನೀಶ್, ಪ್ರಸ್ತುತ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಡಿಸೆಂಬರ್​ನಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಟಿ-20 ಸರಣಿ ಆಡಲಿದೆ. ಈ ನಡುವೆ ಪಾಂಡೆ ವಿವಾಹ ನಡೆಯಲಿದೆ ಎನ್ನಲಾಗಿದೆ.