Indian Cricket, Mohammed Shami: ಭಾರತ ಕ್ರಿಕೆಟ್ ತಂಡ ಸೆಪ್ಟೆಂಬರ್ 22 ರಿಂದ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದೆ. ಈ ಸರಣಿಗೆ ಎರಡೂ ತಂಡಗಳು ತಮ್ಮ ತಂಡವನ್ನು ಪ್ರಕಟಿಸಿವೆ. ಆದರೆ ಇದಕ್ಕೂ ಮುನ್ನ ಟೀಂ ಇಂಡಿಯಾದ ಆಟಗಾರನೊಬ್ಬ ಕೋರ್ಟ್ ಮೆಟ್ಟಿಲೇರಿದ್ದಾನೆ.


COMMERCIAL BREAK
SCROLL TO CONTINUE READING

ಈ ಆಟಗಾರನ ವಿರುದ್ಧ ಪತ್ನಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಆದರೆ ಇದೀಗ ಕೆಳ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ.


ಇದನ್ನೂ ಓದಿ: ಸತತ 4 ತಿಂಗಳು ಈ ರಾಶಿಯವರಿಗೆ ಕುಬೇರ ಯೋಗ: ಹರಿದುಬರಲಿದೆ ಅಪಾರ ಸಂಪತ್ತು, ಬಹುಕಾಲದ ಆಶಯ ನನಸಾಗುವ ಸಮಯ


ಏಕದಿನ ವಿಶ್ವಕಪ್‌’ಗೂ ಮುನ್ನ ಭಾರತದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೋಲ್ಕತ್ತಾದ ಕೆಳ ನ್ಯಾಯಾಲಯವು ಅವರ ಪತ್ನಿ ಹಸಿನ್ ಜಹಾನ್ ಸಲ್ಲಿಸಿದ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಶಮಿಗೆ ಜಾಮೀನು ನೀಡಿದೆ. ಶಮಿಯ ಹಿರಿಯ ಸಹೋದರ ಮೊಹಮ್ಮದ್ ಹಸೀಬ್‌’ಗೂ ಇದೇ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿತ್ತು. ಮಂಗಳವಾರ ಇಬ್ಬರೂ ಸಹೋದರರು ಕೆಳ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದು, ಅವರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಕೋರ್ಟ್ ಅಂಗೀಕರಿಸಿದೆ.


ಮೊಹಮ್ಮದ್ ಶಮಿ ವಿರುದ್ಧ ಗಂಭೀರ ಆರೋಪ!


ಮಾರ್ಚ್ 2018 ರಲ್ಲಿ, ಮೊಹಮ್ಮದ್ ಶಮಿ ಅವರ ಪತ್ನಿ ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದರು. ಶಮಿ ತನಗೆ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದರು. ಈ ಪ್ರಕರಣದಲ್ಲಿ ಶಮಿ ಹಾಗೂ ಆತನ ಅಣ್ಣನನ್ನೂ ಪೊಲೀಸರು ವಿಚಾರಣೆ ನಡೆಸಿದ್ದು, ಇಬ್ಬರ ವಿರುದ್ಧ ಅರೆಸ್ಟ್ ವಾರಂಟ್ ಕೂಡ ಜಾರಿ ಮಾಡಿದ್ದರು. ಆದರೆ, ಕೋಲ್ಕತ್ತಾದ ಕೆಳ ನ್ಯಾಯಾಲಯವು ಆ ವಾರಂಟ್‌’ಗೆ ತಡೆ ನೀಡಿತ್ತು. ಇದಾದ ನಂತರ ಹಸೀನ್ ಜಹಾನ್ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೋಲ್ಕತ್ತಾ ಹೈಕೋರ್ಟ್‌’ನ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಕೂಡ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ನಂತರ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌’ಗೆ ತೆರಳಿದರು, ಇತ್ತೀಚೆಗೆ ಪ್ರಕರಣವನ್ನು ಅದೇ ಕೆಳ ನ್ಯಾಯಾಲಯಕ್ಕೆ ಮರುಹೊಂದಿಸಿ ಪ್ರಕರಣದ ಎಲ್ಲಾ ಕಕ್ಷಿದಾರರನ್ನು ಆಲಿಸಿದ ನಂತರ ಅಂತಿಮ ನಿರ್ಧಾರಕ್ಕೆ ಬರುವಂತೆ ಸೂಚಿಸಿದರು.


ಇದನ್ನೂ ಓದಿ: Horoscope: ಮಹಾಗಣಪತಿ ದಯೆಯಿಂದ ಈ ರಾಶಿಯವರಿಗೆ ಆದಾಯದಲ್ಲಿ ದುಪ್ಪಟ್ಟು ಫಲ, ವೃತ್ತಿಯಲ್ಲಿ ಅಭ್ಯುದಯ


ಮೊಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್‌’ಗೆ ಮಾಸಿಕ 1.30 ಲಕ್ಷ ರೂ. ಭತ್ಯೆ ನೀಡುವಂತೆ ಈ ವರ್ಷದ ಜನವರಿಯಲ್ಲಿ ನ್ಯಾಯಾಲಯ ಆದೇಶಿಸಿತ್ತು, ಅದರಲ್ಲಿ 50,000 ರೂ. ವೈಯಕ್ತಿಕ ಜೀವನಾಂಶ ಮತ್ತು ಉಳಿದ 80,000 ರೂ.ಗಳನ್ನು ಅವರ ಮಗಳಿಗೆ ನೀಡಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.