Sai Sudarashan: ಟೀಂ ಇಂಡಿಯಾದ ಯುವ ಆಟಗಾರರ ತಂಡ ಒಳ್ಳೆಯ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ಐಪಿಎಲ್‌ನಲ್ಲಿ ಯುವ ಆಟಗಾರರು ಕಮಾಲ್‌ ಮಾಡುತ್ತಿದ್ದಾರೆ. ತಂಡಗಳಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರು ಸಾಲು ಸಾಲು ಐತಿಹಾಸಿಕ ದಾಖಲೆಗಳನ್ನು ಬರೆಯುತ್ತಿದ್ದಾರೆ. ಆದರೆ ಇದೀಗ ಇದರ ಬೆನ್ನಲ್ಲೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಟೀಂ ಇಂಡಿಯಾದ ಯುವ ಆಟಗಾರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.


COMMERCIAL BREAK
SCROLL TO CONTINUE READING

ಹರ್ನಿಯಾದಿಂದ ಬಳಲುತ್ತಿದ್ದ ಸ್ಟಾರ್‌ ಭ್ಯಾಟ್ಸ್‌ಮ್ಯಾನ್‌ ಸಾಯಿ ಸುದರ್ಶನ್‌ ಅವರು ಅಂಡನ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಐಪಿಎಲ್ ಸರಣಿ ಆರಂಭಕ್ಕೆ ಇನ್ನು ಕೆಲವೇ ದಿನ ಬಾಕಿ ಇದ್ದು, ಇವರು ಐಪಿಎಲ್‌ಗಿಂತಲೂ ಮುನ್ನ ಚೇತರಿಸಿಕೊಂಡು ಕಮ್‌ಬ್ಯಾಕ್‌ ಮಾಡುತ್ತಾರಾ ಅಥವಾ ಇಲ್ವಾ ಎಂಬ ಅನುಮಾನ ಶುರುವಾಗಿದೆ. 


ಡೆಲ್ಲಿ ತಂಡದ ಪರ ಐಪಿಎಲ್‌ನಲ್ಲಿ ಆಡುತ್ತಿರುವ ಸಾಯಿ ಸುದರ್ಶನ್‌, ಅವರು ಒಟ್ಟು 12 ಪಂದ್ಯಗಳಲ್ಲಿ 527 ರನ್‌ ಗಳಿಸಿದ್ದಾರೆ, ಇದೇ ಕಾರಣಕ್ಕೆ ಡೆಲ್ಲಿ ತಂಡ ಸಾಯಿ ಸುದರ್ಶನ್‌ ಅವರನ್ನು ರೂ.8.50 ಕೋಟಿ ಕೊಟ್ಟು ಉಳಿಸಿಕೊಂಡಿದೆ. ಸಾಯಿ ಸುದರ್ಶನ್ ಈಗಾಗಲೇ ಭಾರತ ತಂಡದಲ್ಲಿ ಏಕದಿನ ಪಂದ್ಯಗಳನ್ನು ಸಹ ಆಡುತ್ತಿದ್ದು, ಶೀಘ್ರದಲ್ಲೇ ಟೆಸ್ಟ್ ತಂಡದಲ್ಲಿಯೂ ತಮ್ಮ ಛಾಪು ಮೂಡಿಸುವ ನಿರೀಕ್ಷೆಯಿದೆ.


ಕ್ರೀಡಾ ಪಟುಗಳು ಸ್ಫೋರ್ಟ್ಸ್‌ ಹಾರ್ನಿಯಾದಿಂದ ಬಳಲುವುದು ಸಾಮಾನ್ಯ, ಕಳೆದ ಭಾರಿ ಸೂರ್ಯಕುಮಾರ್‌ ಯಾದವ್‌ ಅವರು ಕೂಡ ಕಳೆದ ವರ್ಷ ಸ್ಪೋರ್ಟ್ಸ್‌ ಕಾರ್ನಿಯಾ ಸಮಸ್ಯೆಗೆ ತುತ್ತಾಗಿದ್ದರು, ಈ ಭಾರಿ 23 ವರ್ಷದ ಯುವ ಆಟಗಾರ ಸಾಯಿ ಸುದರ್ಶನ್‌ ಕೂಡ ಈ ಸಮಸ್ಯೆಗೆ ತುತ್ತಾಗಿದ್ದು, ಲಂಡನ್‌ನಲ್ಲಿ ಶಾತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಯುವ ಆಟಗಾರನಿಗೆ ಈ ಸಮಸ್ಯೆ ಎದುರಾಗುತ್ತಿದ್ದಂತೆ ಬಿಸಿಸಿಐ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆಟಗಾರರನ್ನು ಚಿಕಿತ್ಸೆಗಾಗಿ ಲಂಡನ್‌ಗೆ ಕಳುಹಿಸಿಕೊಟ್ಟಿದೆ.


"ಇನ್ನೂ, ಶಸ್ತ್ರ ಚಿಕಿತ್ಸೆಯ ನಂತರ ನಾನು ಈಗ ಸುದಾರಿಸಿಕೊಂಡಿದ್ದೇನೆ, ಹುಮ್ಮಸ್ಸಿನೊಂದಿಗೆ ಮತ್ತೆ ನಾನು ಹಿಂತಿರುಗಲಿದ್ದೇನೆ, ನನಗೆ ಸಹಾಯ ಮಾಡಿದ ಬಿಸಿಸಿಐ ತಂಡಕ್ಕೂ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೂ ಧನ್ಯವಾದ" ಎಂದು ಬರೆದುಕೊಂಡು ಪೋಸ್ಟ್‌ ಅನ್ನು ತಮ್ಮ ಎಕ್ಸ್‌ ಕಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ