Shikhar Dhawan Video: ಭಾರತ ತಂಡ ಸದ್ಯ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿ ಆಡಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಗೆದ್ದ ನಂತರ ಭಾರತ ತಂಡ ಇದೀಗ ಏಕದಿನ ಸರಣಿಯನ್ನು ಆಡಲಿದೆ. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಮಾರ್ಚ್ 17 ರಿಂದ ಆರಂಭವಾಗಲಿದೆ. ಈ ಮಧ್ಯೆ, ಭಾರತದ ಆಟಗಾರನ ವೀಡಿಯೊ ಸಾಕಷ್ಟು ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Virat Kohli: 40 ತಿಂಗಳ ಬಳಿಕ ವಿರಾಟ್ ಕೊಹ್ಲಿ ವೃತ್ತಿಜೀವನದಲ್ಲಿ ಬಂತು ಈ ವಿಶೇಷ ಕ್ಷಣ…! ಏನದು ಗೊತ್ತಾ?


ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರಿಗೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಹ ಸಾಕಷ್ಟು ವೈರಲ್ ಆಗಿವೆ. ಕೆಲವೊಮ್ಮೆ ಕಾಮಿಡಿ ಆಗಿರುವ ಡ್ಯಾನ್ಸ್ ವಿಡಿಯೋ ಅಥವಾ ಅವರ ಸಹ ಆಟಗಾರರೊಂದಿಗೆ ಮೋಜು ಮಾಡುವ ವಿಡಿಯೊಗಳನ್ನು ಕಾಣಬಹುದು. ಇದೀಗ ಶಿಖರ್ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಸಹೋದರಿ ಅವರನ್ನು ಹಿಂದಿಯಲ್ಲಿ ‘ಬದ್ತಮೀಜ್’ ಎಂದು ಕರೆಯುತ್ತಿದ್ದಾರೆ.



 


ಶಿಖರ್ ಧವನ್ ಇನ್ಸ್ಟಾ-ರೀಲ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ತಂದೆ ಮತ್ತು ಸಹೋದರಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಶಿಖರ್‌ ಅವರ ತಂದೆ ನೀರು ಕೊಡುವಂತೆ ಕೇಳಿದ್ದಾರೆ. ಆಗ ಅವರು ಸಂಪೂರ್ಣವಾಗಿ ಮೊಬೈಲ್‌ನಲ್ಲಿ ಮುಳುಗಿರುತ್ತಾರೆ. ಆಗ ಶಿಖರ್ ಪ್ರತಿಕ್ರಿಯೆಯಾಗಿ- 'ನಾನು ಹೋಗುವುದಿಲ್ಲ, ನಾನು ಆಟ ಆಡುತ್ತಿದ್ದೇನೆ' ಎಂದು ಹೇಳುತ್ತಾರೆ. ಅದಕ್ಕೆ ಅವರ ಸಹೋದರಿ “ಪಾಪಾ ಯೇ ತೊ ಹೈ ಹೀ ಬದ್ತಮೀಜ್, ಆಪ್ ಖುದ್ ಜಾಕರ್ ಪೀ ಲೋ' ಎನ್ನುತ್ತಾರೆ. ಈ ವಿಡಿಯೋವನ್ನು ತಮಾಷೆಗಾಗಿ ಮಾಡಲಾಗಿದ್ದು, ಇದುವರೆಗೆ ಲಕ್ಷಗಟ್ಟಲೆ ಲೈಕ್ಸ್ ಬಂದಿದೆ.


ಇದನ್ನೂ ಓದಿ: Aashika Ranganath: ರೇಷ್ಮೆ ಸೀರೆ ಅಂದ ಹೆಚ್ಚಿಸಿದ ಆಶಿಕಾ ಸೌಂದರ್ಯ: ಈ ಬ್ಯೂಟಿಗೆ ದೃಷ್ಟಿಯಾಗದಂತೆ ಕಾಪಾಡಪ್ಪಾ ‘ರಂಗನಾಥ’


ಭಾರತ ತಂಡದ ಡ್ಯಾಶಿಂಗ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಶಿಖರ್ ಧವನ್ ಅವರನ್ನು ಪರಿಗಣಿಸಲಾಗಿದೆ. ಅವರು ಇಲ್ಲಿಯವರೆಗೆ 34 ಟೆಸ್ಟ್, 167 ODI ಮತ್ತು 68 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಕಳೆದ 5 ವರ್ಷಗಳಿಂದ ಯಾವುದೇ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಇತ್ತೀಚೆಗೆ ಅವರು ತಮ್ಮ ಟೆಸ್ಟ್ ವೃತ್ತಿಜೀವನ ಮುಗಿದಿದೆ ಎಂದು ಹೇಳಿದ್ದರು. ಧವನ್ ಟೆಸ್ಟ್‌ನಲ್ಲಿ 2315 ರನ್, ಏಕದಿನದಲ್ಲಿ 6793 ರನ್ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 1759 ರನ್ ಗಳಿಸಿದ್ದಾರೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.