ಟೀಂ ಇಂಡಿಯಾ ಸರಣಿ ಸೋಲು.. ಗೌತಮ್ ಗಂಭೀರ್ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಲು ಇದು ಒಳ ಸಂಚು..!?
Rohit Sharma Gautham Gambhir: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆದ ನಂತರ ನೆಟಿಜನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ತವರು ನೆಲದಲ್ಲಿ ಹಿಂದೆಂದೂ ಕಾಣದಂತಹ ಸೋಲನ್ನು ಟೀಂ ಇಂಡಿಯಾ ಇದೀಗ ಅನುಭವಿಸಿದೆ. ವಾಂಖಡೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನು ಸೋಲುವ ಮೂಲಕ ಟೀಂ ಇಂಡಿಯಾ ಬಾರಿ ಆಘಾತವನ್ನುಂಟು ಮಾಡಿದೆ.
Rohit Sharma Gautham Gambhir: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆದ ನಂತರ ನೆಟಿಜನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ತವರು ನೆಲದಲ್ಲಿ ಹಿಂದೆಂದೂ ಕಾಣದಂತಹ ಸೋಲನ್ನು ಟೀಂ ಇಂಡಿಯಾ ಇದೀಗ ಅನುಭವಿಸಿದೆ. ವಾಂಖಡೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನು ಸೋಲುವ ಮೂಲಕ ಟೀಂ ಇಂಡಿಯಾ ಬಾರಿ ಆಘಾತವನ್ನುಂಟು ಮಾಡಿದೆ.
ನ್ಯೂಜಿಲೆಂಡ್ ವಿರುದ್ಧ ವೈಟ್ ವಾಶ್ ಆಗಿರುವ ಟೀಂ ಇಂಡಿಯಾ ಆಟಗಾರರು ಈ ಪಂದ್ಯವನ್ನು ಉದ್ದೇಶ ಪೂರಕವಾಗಿಯೇ ಸೋತಿದ್ದಾರೆ ಎನ್ನುವ ಆರೋಪಗಲು ಇದೀಗ ಕೇಳಿ ಬರುತ್ತಿದೆ. ಅದರಲ್ಲೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಬ್ಬರು ಕೂಡ ಕಳಪೆ ಪ್ರದರ್ಶನ ನೀಡುವ ಮೂಲಕ ಗೌತಮ್ ಗಂಭೀರ್ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಈ ಇಬ್ಬರು ಸ್ಟಾರ್ ಆಟಗಾರರು, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಗಂಭೀರ್ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ಮುಕ್ತಗೊಳಿಸಲು ರನ್ ಮಾಡಿಲ್ಲ ಎಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಕಾರಣಕ್ಕಾಗಿಯೇ ಇದುವರೆಗೆ ಯಾವುದೇ ಕೋಚ್‌ಗೆ ನೀಡದ ಅಧಿಕಾರವನ್ನು ಗಂಭೀರ್‌ಗೆ ನೀಡಲಾಗಿದೆ. ಸಾಮಾನ್ಯವಾಗಿ ತಂಡದ ಆಯ್ಕೆ ಸಭೆಗಳಲ್ಲಿ ಮುಖ್ಯ ಕೋಚ್ ಭಾಗವಹಿಸುವುದಿಲ್ಲ. ಆದರೆ ಗಂಭೀರ್‌ಗೆ ಅವಕಾಶ ನೀಡಲಾಯಿತು. ತಂಡದ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವನ್ನು ಗಂಭಿರ್ ಅವರಿಗೆ ನೀಡಲಾಗಿದ್ದು, ಇದು ಯಾರಿಗೂ ಕೂಡ ಇಷ್ಟವಾಗುತ್ತಿಲ್ಲ.
ಈ ಮುಂಚೆ ಟೀಂ ಇಂಡಿಯಾದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಮತ್ತು ರವಿಶಾಸ್ತ್ರಿ ಅವರಿಗೂ ಈ ನಮ್ಯತೆಯನ್ನು ನೀಡಿರಲಿಲ್ಲ. ಆದರೆ ಇದೀಗ ಗಂಭೀರ್ ಅವರಿಗೆ ಈ ಆಯ್ಕೆ ಮಾಡುವ ಆಪ್ಷನ್ ನೀಡಲಾಗಿದ್ದು, ತಂಡದ ನಾಯಕ ಮಾಡಬೇಕಾದ ಕೆಲಸವನ್ನು ಕೂಡ ಗಂಭೀರ್ ಅವರೆ ಮಾಡುತ್ತಿದ್ದಾರೆ, ತಂಡದ ನಾಯಕನಾಗಿದ್ದರು ಕೂಡ ರೋಹಿತ್ ಅವರು ಏನೂ ಕೂಡ ಮಾಡದೆ ಸಾಮಾನ್ಯ ಆಟಾಗಾರನಂತೆ ಇದೀಗ ಟೀಂ ಇಂಡಿಯಾದಲ್ಲಿ ಮುಂದುವರೆಯುತ್ತಿದ್ದಾರೆ. ಇದೇ ಕಾರಣದಿಂದಾಗಿ ತಂಡದ ಆಟಗಾರರಿಗೆ ಗೌತಮ್ ಗಂಭೀರ್ ಅವರ ಮೇಲೆ ಅಸೂಯೆ ಉಂಟಾಗಿದೆ. ಗಂಭೀರ್‌ಗೆ ಹೆಚ್ಚಿನ ಅಧಿಕಾರ ನೀಡುವುದನ್ನು ಸಹಿಸಲಾಗದ ಭಾರತೀಯ ಆಟಗಾರರೊಂದಿಗೆ ಕೆಲವು ಅಧಿಕಾರಿಗಳು ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.