Team India Multiple Records in ODI: ಆಗಸ್ಟ್ 1ರಂದು ನಡೆದ 3ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಭಾರತ ತಂಡ ಹಲವು ದಾಖಲೆಗಳನ್ನು ಮುರಿದಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ತಂಡವನ್ನು 200 ರನ್ ಗಳಿಂದ ಸೋಲಿಸಿ ಬೃಹತ್ ಜಯ ದಾಖಲಿಸಿದೆ.


COMMERCIAL BREAK
SCROLL TO CONTINUE READING

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, 5 ವಿಕೆಟ್ ನಷ್ಟಕ್ಕೆ 351 ರನ್ ಕಲೆ ಹಾಕಿತು. ಇದರಲ್ಲಿ 4 ಬ್ಯಾಟ್ಸ್’ಮನ್’ಗಳು ಅರ್ಧಶತಕ ಸಿಡಿಸಿದ್ದರು, ಈ ಬಳಿಕ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಕೇವಲ 151 ರನ್‌ ಗಳಿಗೆ ಆಲೌಟ್ ಆಯಿತು. ಹೀಗಾಗಿ ಪಂದ್ಯವನ್ನು 200 ರನ್‌ ಗಳ ದೊಡ್ಡ ಅಂತರದಿಂದ ಭಾರತ ಗೆದ್ದಿತು.


ಇದನ್ನೂ ಓದಿ: ಟೀಂ ಇಂಡಿಯಾದ ಈ ಇಬ್ಬರು ವೇಗಿಗಳಿಂದಲೇ T20ಯಲ್ಲಿ ಗೆಲ್ಲುತ್ತೆ ಭಾರತ!


3ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಭಾರೀ ಅಂತರದ ಗೆಲುವಿನೊಂದಿಗೆ ಭಾರತವು ಸರಣಿಯನ್ನು ಗೆದ್ದುಕೊಂಡಿತು ಮಾತ್ರವಲ್ಲದೆ ಅನೇಕ ದಾಖಲೆಗಳನ್ನು ಬರೆದಿದೆ. ಇದು ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಸತತ 13ನೇ ಏಕದಿನ ಸರಣಿ ಜಯವಾಗಿದೆ. ಇದು ವಿಶ್ವ ದಾಖಲೆಯಾಗಿದ್ದು, ಜಿಂಬಾಬ್ವೆ ವಿರುದ್ಧ ಸತತ 11 ಸರಣಿ ಜಯದೊಂದಿಗೆ ಪಾಕಿಸ್ತಾನವು ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದೆ.


ಅಷ್ಟೇ ಅಲ್ಲದೆ, ಮೆನ್-ಇನ್-ಬ್ಲೂ ವೆಸ್ಟ್ ಇಂಡೀಸ್ ವಿರುದ್ಧ ODI ಪಂದ್ಯದ ರನ್‌’ಗಳ ವಿಷಯದಲ್ಲಿ ತಮ್ಮ ಎರಡನೇ ಅತಿ ದೊಡ್ಡ ಅಂತರದ (200 ರನ್) ಗೆಲುವನ್ನು ದಾಖಲಿಸಿದೆ. 2018 ರಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ 224 ರನ್‌ ಗಳಿಂದ ಜಯ ಗಳಿಸಿತ್ತು


5 ವಿಕೆಟ್ ನಷ್ಟಕ್ಕೆ 351 ರನ್ ಕಲೆ ಹಾಕಿರುವ ಭಾರತ, ಕೆರಿಬಿಯನ್ ವಿರುದ್ಧದ ODIಗಳಲ್ಲಿ ಭಾರತದ ಗರಿಷ್ಠ ಮೊತ್ತವಾಗಿದೆ. ಹಿಂದಿನ ಅತ್ಯುತ್ತಮ ಸ್ಕೋರ್ 2009 ರಲ್ಲಿ 6 ವಿಜೆಟ್ ನಷ್ಟಕ್ಕೆ 339 ರನ್ ಆಗಿತ್ತು. ಅಷ್ಟೇ ಅಲ್ಲದೆ, ಈ ಪಂದ್ಯದಲ್ಲಿ ಯಾವೊಬ್ಬ ಬ್ಯಾಟ್ಸ್‌ಮನ್  ಸೆಂಚುರಿ ಬಾರಿಸದೆ, ಭಾರತ ಕಲೆ ಹಾಕಿದ ಅತಿದೊಡ್ಡ ಮೊತ್ತವಾಗಿದೆ. 2005ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 350 ರನ್ ಗಳಿಸಿದ್ದು ಹಿಂದಿನ ಶ್ರೇಷ್ಠ ಸಾಧನೆಯಾಗಿತ್ತು.


ಇನ್ನು ಭಾರತದ ಅಗ್ರ ಐವರು ಬ್ಯಾಟರ್‌ಗಳ ಪೈಕಿ ನಾಲ್ವರು ಅರ್ಧಶತಕ ಸಿಡಿಸಿದ 7ನೇ ನಿದರ್ಶನ ಇದಾಗಿದೆ. ಅಗ್ರ ಐದು ಬ್ಯಾಟ್ಸ್‌’ಮನ್‌’ಗಳ ಪೈಕಿ ಇಶಾನ್ ಕಿಶನ್ (77), ಶುಭಮನ್ ಗಿಲ್ (85), ಸಂಜು ಸ್ಯಾಮ್ಸನ್ (51), ಮತ್ತು ಹಾರ್ದಿಕ್ ಪಾಂಡ್ಯ (70*) ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದಾರೆ. ನಂ.3ಕ್ಕೆ ಆಗಮಿಸಿದ ರುತುರಾಜ್ ಗಾಯಕ್ವಾಡ್ 8 ರನ್ ಗಳಿಸಿ ಔಟಾದರು.


ಶಾರ್ದೂಲ್ ಠಾಕೂರ್ 4 ವಿಕೆಟ್ ಬೇಟೆಯಾಡಿದರೆ, ಸ್ಪಿನ್ನರ್ ಕುಲದೀಪ್ ಯಾದವ್ 2 ವಿಕೆಟ್ ಪಡೆದರು. ಸೀಮರ್ ಜಯದೇವ್ ಉನದ್ಕತ್ ಕೂಡ 1 ವಿಕೆಟ್ ಪಡೆದರು. 85 ರನ್‌’ಗಳ ಭರ್ಜರಿ ಬ್ಯಾಟಿಂಗ್‌’ಗಾಗಿ ಶುಭ್ಮನ್ ಗಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.


ಇದನ್ನೂ ಓದಿ: ನಾಳೆಯಿಂದ ಈ ರಾಶಿಯವರ ಭಾಗ್ಯೋದಯ ! ಒಲಿದು ಬರುವಳು ವಿಜಯಲಕ್ಷ್ಮೀ ! ತುಂಬಿ ತುಳುಕುವುದು ಸುಖ ಸಂಪತ್ತು


ಎಲ್ಲಾ ಮೂರು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿರುವ ಇಶಾನ್ ಕಿಶನ್, IND vs WI ODI ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಮೊದಲ ಏಕದಿನ ಪಂದ್ಯವನ್ನು ಭಾರತ 5 ವಿಕೆಟ್‌ ಗಳಿಂದ ಗೆದ್ದುಕೊಂಡರೆ, 2ನೇ ಏಕದಿನ ಪಂದ್ಯದಲ್ಲಿ 6 ವಿಕೆಟ್‌ ಗಳಿಂದ ಸೋತಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ