Team India : ಏಷ್ಯಾಕಪ್‌ನಿಂದ ಹೊರಗುಳಿದ ಬಳಿಕ ಇದೀಗ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗೆ ಭರ್ಜರಿ ತಯಾರಿ ನಡೆಸುತ್ತಿದೆ. ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗಾಗಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ  ಕೈಗೊಳ್ಳಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿ ಸೆಪ್ಟೆಂಬರ್ 20 ರಿಂದ ಆರಂಭವಾಗಲಿದೆ. ಹೀಗಾಗಿ, ಟೀಂ ಇಂಡಿಯಾ ಸ್ಟಾರ್ ಆಟಗಾರನೊಬ್ಬನಿಗೆ ಗೆಟ್ ಪಾಸ್ ನೀಡಿದೆ. ಹಾಗಿದ್ರೆ, ಈ ಆಟಗಾರ ಯಾರು? ಯಾಕೆ ಟೀಂನಿಂದ ಕೈಬಿಡಲಾಗಿದೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..


COMMERCIAL BREAK
SCROLL TO CONTINUE READING

ಟೀಂ ಇಂಡಿಯಾದ ಟಿ20 ಸರಣಿಯಿಂದ ಔಟ್


ಏಷ್ಯಾಕಪ್‌ನಲ್ಲಿ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾದ ಬೌಲರ್‌ನ ವೃತ್ತಿಜೀವನ ಬಹುತೇಕ ಅಂತ್ಯಕ್ಕೆ ಬಂದು ತಲುಪಿದೆ. ಈ ಆಟಗಾರ ಟೀಂ ಇಂಡಿಯಾಕ್ಕೆ ಮಾರಕವಾಗಿ ಕಾಡುತ್ತಿದ್ದಾರೆ. ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾದ ಸೋಲಿಗೆ ವೇಗದ ಬೌಲರ್ ಅವೇಶ್ ಖಾನ್ ದೊಡ್ಡ ವಿಲನ್ ಆಗಿ ಕಾಡಿದ್ದರು. ಈ ಆಟಗಾರನ ಪ್ರದರ್ಶನ ಎಷ್ಟು ಕಳಪೆಯಾಗಿದೆ ಎಂದರೆ ಈಗ ಟೀಂ ಇಂಡಿಯಾದಲ್ಲಿ ಅವೇಶ್ ಮರಳುವುದು ಕಷ್ಟಕರವಾಗಿದೆ. ಏಷ್ಯಾಕಪ್‌ನಲ್ಲಿ ಅವೇಶ್ ಖಾನ್ ಕೇವಲ 2 ವಿಕೆಟ್‌ಗಳನ್ನು ಗಳಿಸಲು ಸಾಧ್ಯವಾಯಿತು ಮತ್ತು ಅವರು ತುಂಬಾ ದುಬಾರಿಯಾಗಿ ಹೊರಹೊಮ್ಮಿದ್ದಾರೆ.


ಇದನ್ನೂ ಓದಿ : Virat Kohli : ಶತಕ ಸಿಡಿಸಿದ ವಿರಾಟ್ ಕೊಹ್ಲಿಗೆ ಸುಲಭವಾಗಿಲ್ಲ ಟಿ20 ವಿಶ್ವಕಪ್‌!


ಕಳಪೆ ಫಾರ್ಮ್‌ನಲ್ಲಿ ಅವೇಶ್ ಖಾನ್


ವೆಸ್ಟ್ ಇಂಡೀಸ್ ಪ್ರವಾಸದ ನಂತರ ಅವೇಶ್ ಖಾನ್ ಕಳಪೆ ಫಾರ್ಮ್‌ನಲ್ಲಿದ್ದಾರೆ ಮತ್ತು ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ 50 ಕ್ಕೂ ಹೆಚ್ಚು ರನ್ ನೀಡಿದರು. ಅವೇಶ್ ಖಾನ್ ಅವರ ಸಾಧನೆ ಗಮನಾರ್ಹ ಕುಸಿತ ಕಂಡಿದೆ. ಹೀಗಾಗಿ, ಅವೇಶ್ ಖಾನ್ ಟೀಂ ಇಂಡಿಯಾ ಪರ ಆಡುವುದನ್ನು ನೋಡಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ.


ಅವೇಶ್ ಖಾನ್ ಗಿಲ್ಲ ತಂಡದಲ್ಲಿ ಸ್ಥಾನ


ಅವೇಶ್ ಖಾನ್ ಪ್ರದರ್ಶನ ನೋಡಿದರೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಅವೇಶ್ ಖಾನ್ ಅವರ ಬೌಲಿಂಗ್ ನಲ್ಲಿ ಹಿಡಿತ ಸಾದಿಸುತ್ತಿಲ್ಲ, ಅಲ್ಲದೆ, ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಲ್ಲಿ ಭಯವನ್ನು ಉಂಟಾಗುತ್ತಿಲ್ಲ. ಅವೇಶ್ ಖಾನ್ ಬೌಲಿಂಗ್ ಗೆ ಏಷ್ಯಾಕಪ್ ನಲ್ಲಿ ಎದುರಾಳಿ ತಂಡದ ಬ್ಯಾಟ್ಸ್ ಮನ್ ಗಳು ರನ್ ಗಳ ಮಳೆ ಸುರಿಸಿದರು.


ಇದನ್ನೂ ಓದಿ : Team India : ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಈ ಅಪಾಯಕಾರಿ ಆಟಗಾರನಿಗೆ ಸ್ಥಾನ ಪಕ್ಕಾ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.