Shivam Dube: ಆಲ್ ರೌಂಡರ್ ಶಿವಂ ದುಬೆ ಟೀಂ ಇಂಡಿಯಾದಲ್ಲಿ ಅದ್ಭುತ ಪುನರಾಗಮನ ಮಾಡಿದ್ದಾರೆ. ಶಿವಂ ಸತತ ಎರಡನೇ ಟಿ20 ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡುವ ಮೂಲಕ ಕೋಚ್ ಮತ್ತು ನಾಯಕನ ಹೃದಯ ಗೆದ್ದರು. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಈ ಎತ್ತರದ ಆಲ್‌ರೌಂಡರ್‌ಗೆ ಅವಕಾಶ ಸಿಕ್ಕಿತು, ಅದನ್ನು ಅವರು ಸದುಪಯೋಗಪಡಿಸಿಕೊಂಡರು.. ಅಫ್ಘಾನಿಸ್ತಾನ ವಿರುದ್ಧ ಭಾರತ ಟಿ20 ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೆಲ್ಲವನ್ನು ಹೊರತುಪಡಿಸಿ ಶಿವಂ ದುಬೆ ಅವರ ಪ್ರೇಮಕಥೆ ಕೂಡ ತುಂಬಾ ಸಿನಿಮೀಯವಾಗಿದೆ ಎಂದೇ ಹೇಳಬಹುದು ಏಕೆಂದರೇ ಅವರು ತಮ್ಮ ಮುಸ್ಲಿಂ ಗೆಳತಿಯನ್ನು ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ  ಎರಡು ಬಾರೀ ವಿವಾಹವಾದರು...


COMMERCIAL BREAK
SCROLL TO CONTINUE READING

30 ವರ್ಷದ ಶಿವಂ ದುಬೆ ಅವರು ಇಂದೋರ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ (IND vs AFG) ಆಡಿದ ಎರಡನೇ T20 ನಲ್ಲಿ 63 ರನ್‌ಗಳ ಅಜೇಯ ಪಂದ್ಯ-ವಿಜೇತ ಇನ್ನಿಂಗ್ಸ್‌ಗಳನ್ನು ಆಡಿದರು. ಇದಕ್ಕೂ ಮುನ್ನ ಮೊಹಾಲಿ ಟಿ20ಯಲ್ಲಿ 60 ರನ್ ಗಳಿಸಿದ್ದರು. ಆಗ ಎರಡೂ ಟಿ20 ಪಂದ್ಯಗಳನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದು.. 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.. ಶಿವಂ ಅವರು ಮುಂಬರುವ T20 ವಿಶ್ವಕಪ್‌ಗೆ ತಮ್ಮ ಎರಡು ಇನ್ನಿಂಗ್ಸ್‌ಗಳ ಮೂಲಕ ಹಕ್ಕು ಸಾಧಿಸಿದ್ದಾರೆ. ಆದರೆ ಇದೀಗ ಶಿವಂ ಕೂಡ ತಮ್ಮ ಮದುವೆಯ ಬಗ್ಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ...


ಇದನ್ನೂ ಓದಿ-Anupama Gowda: ಕಿರುತೆರೆ ನಟಿ ಅನುಪಮಾ ನಟನೆಯಿಂದ ದೂರ ಉಳಿದಿದ್ದೇಕೆ ಗೊತ್ತೇ?


ಶಿವಂ ದುಬೆ ಅವರ ಬ್ಯಾಟಿಂಗ್ ಶೈಲಿಯ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ ಆದರೆ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಶಿವಂ ಅವರ ಜೀವನವು ತುಂಬಾ ವಿಭಿನ್ನವಾಗಿದೆ.. ಎಲ್ಲರನ್ನು ಅಚ್ಚರಿಗೊಳಿಸಿದ ಅವರು ತಮ್ಮ ಮುಸ್ಲಿಂ ಗೆಳತಿ ಅಂಜುಮ್ ಖಾನ್ ಅವರನ್ನು ವಿವಾಹವಾದರು.. ಆದರೆ ಅವರು ತಮ್ಮ ಲವ್ ಸ್ಟೋರಿ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಶಿವಂ ಮುಸ್ಲಿಂ ಹುಡುಗಿಯನ್ನು ಮದುವೆಯಾಗುವುದು ಜನರಿಗೆ ಸ್ವಲ್ಪ ವಿಚಿತ್ರವೆನಿಸಿತು...


ಶಿವಂ ಮತ್ತು ಅಂಜುಮ್ ಖಾನ್ ವಿವಿಧ ಧರ್ಮಗಳಿಗೆ ಸೇರಿದ ಕಾರಣ, ಮದುವೆಯ ನಂತರ ಭಾರತೀಯ ಕ್ರಿಕೆಟಿಗ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆಗಿದ್ದರು. ಆದರೆ, ಇವರಿಬ್ಬರ ಮನೆಯವರು ಇದಕ್ಕೆ ಯಾವುದೇ ಅಭ್ಯಂತರ ತೋರದ ಕಾರಣ ಇಂದು ಶಿವಂ ದುಬೆ ಹಾಗೂ ಅಂಜುಮ್ ಖಾನ್ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. 


ಇದನ್ನೂ ಓದಿ-BBK10: ಬಿಗ್‌ಬಾಸ್ ಮನೆಯೊಳಗೆ ಹಾರರ್ ಸರ್ಪೈಸ್!


ಅಂಜುಮ್ ಖಾನ್ ಉತ್ತರ ಪ್ರದೇಶದ ನಿವಾಸಿ. ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದಿಂದ ಲಲಿತಕಲೆಯಲ್ಲಿ ಪದವಿ ಪಡೆದಿದ್ದಾರೆ. ಅಲ್ಲದೇ ಇವರು ಅನೇಕ ಹಿಂದಿ ಧಾರಾವಾಹಿಗಳು ಮತ್ತು ಸಂಗೀತ ಆಲ್ಬಂಗಳಲ್ಲಿ ಕೆಲಸ ಮಾಡಿದ ಮಾಡೆಲ್ ಆಗಿದ್ದಾರೆ. ಈ ಜೋಡಿಯು 2021 ರಲ್ಲಿ ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯಗಳ ಪ್ರಕಾರ ವಿವಾಹವಾದರು...


ಮದುವೆಯಾದ ಸುಮಾರು ಒಂದು ವರ್ಷದ ನಂತರ ಶಿವಂ ದುಬೆ ಮತ್ತು ಅಂಜುಮ್ ಖಾನ್ ಪೋಷಕರಾದರು.. ಮದುವೆಗೂ ಮುನ್ನ ಇಬ್ಬರೂ ಒಂದು ವರ್ಷ ಡೇಟಿಂಗ್ ಮಾಡುತ್ತಿದ್ದರು. ಆದರೆ, ಈ ಸಮಯದಲ್ಲಿ ಅವರ ಪ್ರೇಮಕಥೆಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.