IND vs AUS 3rd Test: ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ನಾಲ್ಕನೇ ದಿನದಾಟದ ಅಂತ್ಯದವರೆಗೂ ಫಾಲೋ-ಆನ್ ತಪ್ಪಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಭಾರತ ದಿನದಾಟದ ಅಂತ್ಯಕ್ಕೆ 445ಕ್ಕೆ 9 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿದೆ. ಟೀಂ ಇಂಡಿಯಾ ಇನ್ನೂ 193 ರನ್‌ಗಳ ಹಿನ್ನಡೆಯಲ್ಲಿದೆ. ಫಾಲೋ-ಆನ್ ತಪ್ಪಿಸಲು ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್ ಅಜೇಯ 39 ರನ್ ಜೊತೆಯಾಟ ನಡೆಸಿದರು. ಅದಕ್ಕೂ ಮುನ್ನ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಟೀಂ ಇಂಡಿಯಾದ ಬಹುತೇಕ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದಾರೆ. ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ನಿರಾಸೆ ಮೂಡಿಸಿದರು. ವಿರಾಟ್ ಕೇವಲ 3 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಈ ಪಂದ್ಯದ ವೇಳೆ ವಿರಾಟ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ವಿರಾಟ್ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಮೊದಲು ಅಭ್ಯಾಸ ಮಾಡಲು ನೆಟ್ಸ್‌ಗೆ ಹೋಗಲು ನಿರ್ಧರಿಸಿದರು.


COMMERCIAL BREAK
SCROLL TO CONTINUE READING

ಪಂದ್ಯದ ಮೂರನೇ ದಿನ (ಡಿಸೆಂಬರ್ 16) ಅಗ್ರ ಕ್ರಮಾಂಕದಲ್ಲಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಆಫ್ ಸೈಡ್ ಕಡೆಗೆ ಹೋಗುತ್ತಿದ್ದ ಬಾಲ್ ಟ್ಯಾಂಪರಿಂಗ್ ಮಾಡಿ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರು. ಇದಕ್ಕಾಗಿ ವಿರಾಟ್ ಟೀಕೆಗೆ ಗುರಿಯಾಗಿದ್ದರು. ವಿರಾಟ್ ಈ ಚೆಂಡನ್ನು ಬಿಡಬೇಕಿತ್ತು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.  


ಇದನ್ನೂ ಓದಿ-ವಯಸ್ಸೆಲ್ಲಾ ಯಾವ ಲೆಕ್ಕಾ ಗುರು ಇದ್ರೆ ನೆಮ್ಮದಿಯಾಗಿರ್ಬೇಕು.. 60 ನೇ ವಯಸ್ಸಿನಲ್ಲಿ ಪ್ರೀತಿಸಿ ಎಡರನೇ ಮದುವೆಯಾದ ಖ್ಯಾತ ನಟ ಈತ! 


ಹರ್ಭಜನ್ ಸಿಂಗ್ ಹೇಳಿದ್ದೇನು?
ವಿರಾಟ್ ನೆಟ್ಸ್ ಅಭ್ಯಾಸದ ವಿಡಿಯೋವನ್ನು ಸ್ಟಾರ್ ಸ್ಪೋರ್ಟ್ಸ್ ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ಹರನ್‌ಭಜನ್ ಸಿಂಗ್ ವಿರಾಟ್ ಅಭ್ಯಾಸದ ಬಗ್ಗೆ ಮಾತನಾಡುತ್ತಿರುವುದು ಕಂಡುಬಂದಿದೆ.  “ವಿರಾಟ್ ಅವರು ನೆಟ್‌ನಲ್ಲಿ ಸಾಧ್ಯವಾದಷ್ಟು ಆಡಲು ಪ್ರಯತ್ನಿಸಬೇಕು, ಇದರಿಂದ ಅವರು ಕಂಬ್ಯಾಕ್‌ ಮಾಡಬಹುದು. ನೀವು ಎಷ್ಟು ಅಭ್ಯಾಸ ಮಾಡುತ್ತಿರೋ ಅಷ್ಟು ಉತ್ತಮವಾಗಿ ಆಡುತ್ತಿರಿ.. ಹೆಚ್ಚು ರನ್ ಗಳಿಸಬಹುದು. ಮುಂದಿನ ದಿನಗಳಲ್ಲಿ ಗಿಲ್ ಮತ್ತು ವಿರಾಟ್ ಇಬ್ಬರೂ ಮೈದಾನಕ್ಕಿಳಿದಾಗ ಶತಕ ಬಾರಿಸುತ್ತಾರೆ ಎಂದು ಆಶಿಸುತ್ತೇವೆ" ಎಂದು ಹರ್ಭಜನ್ ಹೇಳಿದ್ದಾರೆ.


ವಯಸ್ಸೆಲ್ಲಾ ಯಾವ ಲೆಕ್ಕಾ ಗುರು ಇದ್ರೆ ನೆಮ್ಮದಿಯಾಗಿರ್ಬೇಕು.. 60 ನೇ ವಯಸ್ಸಿನಲ್ಲಿ ಪ್ರೀತಿಸಿ ಎಡರನೇ ಮದುವೆಯಾದ ಖ್ಯಾತ ನಟ ಈತ! 


ಮೂರನೇ ಟೆಸ್ಟ್‌ಗಾಗಿ ಆಸ್ಟ್ರೇಲಿಯಾ ಪ್ಲೇಯಿಂಗ್ XI: ಪ್ಯಾಟ್ ಕಮ್ಮಿನ್ಸ್ (ನಾಯಕ), ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್ ಮತ್ತು ಜೋಶ್ ಹ್ಯಾಜಲ್‌ವುಡ್.


ಮೂರನೇ ಟೆಸ್ಟ್‌ಗಾಗಿ ಟೀಂ ಇಂಡಿಯಾ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಮತ್ತು ನಿತೀಶ್ ಕುಮಾರ್ ರೆಡ್ಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.