India Probable Playing 11: ಏಷ್ಯಾ ಕಪ್ 2023 ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಸಿದ್ಧತೆಗಳನ್ನು ಮಾಡಲಾಗಿದೆ. ಈ ಟೂರ್ನಿಯಲ್ಲಿ ಭಾರತಕ್ಕೆ ಇದು ಮೊದಲ ಪಂದ್ಯವಾಗಿದ್ದು, ಪಾಕಿಸ್ತಾನ ತಂಡ ತನ್ನ ಮೊದಲ ಪಂದ್ಯದಲ್ಲಿ ನೇಪಾಳವನ್ನು 238 ರನ್‌’ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ 6 ವಿಕೆಟ್‌’ಗೆ 342 ರನ್‌’ಗಳ ಬೃಹತ್ ಮೊತ್ತ ಕಲೆ ಹಾಕಿ ನೇಪಾಳವನ್ನು 104 ರನ್‌ಗಳಿಗೆ ಆಲೌಟ್ ಮಾಡಿತ್ತು. ಪಾಕಿಸ್ತಾನ ತಂಡ 124 ರನ್‌’ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು, ಆದರೆ ಬಾಬರ್ ಅಜಮ್ ಮತ್ತು ಇಫ್ತಿಕರ್ ಅಹ್ಮದ್ ಶತಕ ಇನಿಂಗ್ಸ್ ಆಡುವ ಮೂಲಕ ತಂಡದ ಸ್ಕೋರ್ ಅನ್ನು 300 ರನ್‌’ಗಳ ಗಡಿ ದಾಟಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈತ ಹುಟ್ಟಿದ್ದು ಪಾಕ್’ನಲ್ಲಿ, ಆಡಿದ್ದು ದ.ಆಫ್ರಿಕಾ ಪರ, ಮದುವೆಯಾಗಿದ್ದು ಭಾರತದ ಮಾಡೆಲ್ ಜೊತೆ…!


ಪಾಕಿಸ್ತಾನ ತಂಡ ಅತ್ಯಂತ ಸಮತೋಲಿತವಾಗಿ ಕಾಣುತ್ತಿದೆ. ICC ODI ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನ ತಂಡದ ಎಲ್ಲಾ ಪ್ರಮುಖ ಆಟಗಾರರು ಲಭ್ಯವಿದ್ದು, ಈ ತಂಡವು ಅತ್ಯಂತ ಬಲಿಷ್ಠವಾಗಿ ಕಾಣುತ್ತಿದೆ. ಮತ್ತೊಂದೆಡೆ ಭಾರತ ತಂಡವು ತನ್ನ ಪ್ರಮುಖ ಆಟಗಾರರನ್ನು ಮಿಸ್ ಮಾಡಿಕೊಳ್ಳುತ್ತಿದೆ. ರಿಷಬ್ ಪಂತ್ ಕಾರು ಅಪಘಾತದ ನಂತರ ಚೇತರಿಸಿಕೊಳ್ಳುತ್ತಿದ್ದು, ಆಯ್ಕೆಗೆ ಲಭ್ಯವಾಗಿಲ್ಲ. ಕೆ ಎಲ್ ರಾಹುಲ್ ಶಸ್ತ್ರಚಿಕಿತ್ಸೆಯ ನಂತರ ಗಾಯದಿಂದ ಚೇತರಿಸಿಕೊಂಡಿದ್ದರು, ಆದರೆ ಫಿಟ್ನೆಸ್ ಇನ್ನೂ ಪಂದ್ಯಕ್ಕೆ ಅನುಸಾರವಾಗಿ ಇಲ್ಲದಿರುವ ಕಾರಣ ತಂಡದ ಭಾಗವಾಗಿದ್ದರೂ ಮೊದಲ ಎರಡು ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ ಎಂದು ಸಮಿತಿ ಈ ಹಿಂದೆಯೇ ಹೇಳಿದೆ.


ಏಷ್ಯಾಕಪ್‌’ಗಾಗಿ ಶ್ರೀಲಂಕಾ ತಲುಪಿರುವ ಭಾರತ ತಂಡದಲ್ಲಿ ಲೋಕೇಶ್ ರಾಹುಲ್ ಹೊರತಾಗಿ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್‌’ಗೆ ವಿಕೆಟ್‌ ಕೀಪರ್‌’ಗಳಾಗಿ ಅವಕಾಶ ನೀಡಲಾಗಿದೆ. ಸ್ಯಾಮ್ಸನ್ ಮೀಸಲು ಆಟಗಾರನಾಗಿ ತಂಡದಲ್ಲಿದ್ದಾರೆ. ಹೀಗಿರುವಾಗ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನದ ಬಗ್ಗೆ ಅನುಮಾನ ಮೂಡಿದೆ.


ಇಶಾನ್ ಕಿಶನ್ ಅತ್ಯುತ್ತಮ ಫಾರ್ಮ್‌ ನಲ್ಲಿದ್ದಾರೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸತತ ಮೂರು ಪಂದ್ಯಗಳಲ್ಲಿ ಅರ್ಧ ಶತಕಗಳನ್ನು ಗಳಿಸಿದ ನಂತರ ಪ್ಲೇಯಿಂಗ್ 11 ರಲ್ಲಿ ಸ್ಥಾನ ಪಡೆಯಲು ಪ್ರಬಲ ಸ್ಪರ್ಧಿಯಾಗಿದ್ದಾರೆ. ಪ್ರಸ್ತುತ ತಂಡದಲ್ಲಿ, ರೋಹಿತ್ ಶರ್ಮಾ ಅವರು ಶುಭ್ಮನ್ ಗಿಲ್ ಅವರೊಂದಿಗೆ ಇನ್ನಿಂಗ್ಸ್ ತೆರೆಯಲಿದ್ದಾರೆ. ವಿರಾಟ್ ಮೂರನೇ ಕ್ರಮಾಂಕದಲ್ಲಿ ಮತ್ತು ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಖಚಿತವಾಗಿದೆ.


ಹಾರ್ದಿಕ್ ಅವರನ್ನು ಐದನೇ ಸ್ಥಾನದಲ್ಲಿ ಕಣಕ್ಕಿಳಿಸಿದರೆ ನಾಯಕ ರೋಹಿತ್ ಅವರು ವಿಕೆಟ್ ಕೀಪರ್ ಅನ್ನು ಆರು ಅಥವಾ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿಸಬಹುದು. ರವೀಂದ್ರ ಜಡೇಜಾ ಅವರನ್ನು ಸಹ ಈ ಎರಡು ಕ್ರಮಾಂಕದಲ್ಲಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು. ಏಕೆಂದರೆ ಟೀಂ ಇಂಡಿಯಾದ ಆಪತ್ಭಾಂದವ ಎಂದೇ ಕರೆಯಲ್ಪಡುವ ಜಡ್ಡು, ಭಾರತಕ್ಕೆ ಸಮಸ್ಯೆ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸುವ ಸಾಮಾರ್ಥ್ಯ ಅವರಿಗಿದೆ. ಇನ್ನು ಇನ್ನಿಂಗ್ಸ್ ಆರಂಭಿಸುವ ಆಟಗಾರರ ಬಗ್ಗೆ ರೋಹಿತ್ ಮತ್ತು ಕೋಚ್ ದ್ರಾವಿಡ್‌ ನಿರ್ಧಾರ ತೆಗೆದುಕೊಳ್ಳಬೇಕಿದೆ.


ಬೌಲಿಂಗ್ ವಿಭಾಗ ಹೀಗಿದೆ…


ಭಾರತ ತಂಡವು ಹಾರ್ದಿಕ್ ಅವರೊಂದಿಗೆ ಮೂರು ವೇಗದ ಬೌಲರ್‌’ಗಳನ್ನು ತಂಡದಲ್ಲಿ ಆಯ್ಕೆ ಮಾಡಬೇಕೆ ಅಥವಾ ಏಷ್ಯಾದ ಪಿಚ್‌’ಗಳನ್ನು ಗಮನದಲ್ಲಿಟ್ಟುಕೊಂಡು ಮೂವರು ಸ್ಪಿನ್ ಬೌಲರ್‌’ಗಳೊಂದಿಗೆ ಕಣಕ್ಕಿಳಿಯಬೇಕೇ ಎಂದು ನಿರ್ಧರಿಸಬೇಕಿದೆ. ರೋಹಿತ್ ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿದರೆ, ಶಮಿ, ಬುಮ್ರಾ ಮತ್ತು ಸಿರಾಜ್‌’ರಲ್ಲಿ ಒಬ್ಬರನ್ನು ಕೈಬಿಡಬೇಕು. ಇದೊಂದು ಸವಾಲಿನ ನಿರ್ಧಾರವಾಗಲಿದೆ. ಬುಮ್ರಾ ದೇಶದ ಅತ್ಯುತ್ತಮ ವೇಗದ ಬೌಲರ್, ಶಮಿ ಅತ್ಯಂತ ಅನುಭವಿ ಮತ್ತು ಸಿರಾಜ್ ಐಸಿಸಿ ರ್ಯಾಂಕಿಂಗ್‌’ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನೊಂದೆಡೆ ಸ್ಪಿನ್ ಬೌಲರ್ ಗಳ ಪೈಕಿ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಆಡುವುದು ಖಚಿತ. ಮೂರನೇ ಸ್ಪಿನ್ನರ್’ಗೆ ಅವಕಾಶ ಸಿಕ್ಕರೆ ಅಕ್ಷರ್ ಪಟೇಲ್ ಅವರನ್ನೂ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.


ಇನ್ನು ಈ ಐತಿಹಾಸಿಕ ಪಂದ್ಯದಿಂದ ಭಾರತದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಹೊರಬೀಳುವ ಲಕ್ಷಣವಿದೆ. ಫಿಟ್ನೆಸ್ ಸಮಸ್ಯೆಯಿಂದ ಈಗಾಗಲೇ ಮೊದಲೆರಡು ಪಂದ್ಯದಿಂದ ಕೆ ಎಲ್ ರಾಹುಲ್ ಹೊರಗುಳಿದಿದ್ದಾರೆ.


ಇದನ್ನೂ ಓದಿ: ಜನವರಿಯಿಂದ 50% ಡಿಎ ಹೆಚ್ಚಳ! ಸರ್ಕಾರಿ ನೌಕರರ ಮೂಲ ವೇತನದಲ್ಲಿ ಭಾರೀ ಹೆಚ್ಚಳ 


ಭಾರತದ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.