ACC U-19 Asia Cup, India vs Nepal: ಭಾರತ ಕ್ರಿಕೆಟ್ ತಂಡ ಮಂಗಳವಾರ ನೇಪಾಳ ವಿರುದ್ಧ ಭರ್ಜರಿ ಜಯ ದಾಖಲಿಸಿ ಅಂಡರ್-19 ಏಷ್ಯಾಕಪ್‌’ನ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ನೇಪಾಳವನ್ನು 257 ಎಸೆತಗಳು ಬಾಕಿ ಇರುವಂತೆಯೇ 10 ವಿಕೆಟ್‌’ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಯುವ ವೇಗಿ ರಾಜ್ ಲಿಂಬಾನಿ ಅದ್ಭುತ ಪ್ರದರ್ಶನ ನೀಡಿ 7 ವಿಕೆಟ್ ಪಡೆದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: "ಲೀಲಾವತಿ ಬೆಡ್ ರೂಂನಲ್ಲಿದ್ದ ರಾಜ್’ಕುಮಾರ್’ಗೆ ಊಟ ಮಾಡಿಸುವ ಫೋಟೋ…"-ಬ್ರಹ್ಮಾಂಡ ಗುರೂಜಿ


ವೇಗಿ ರಾಜ್ ಲಿಂಬಾನಿ ನೇಪಾಳ ವಿರುದ್ಧ ಕೇವಲ 13 ರನ್ ನೀಡಿ 7 ವಿಕೆಟ್ ಕಬಳಿಸಿದರು, ಇದರ ನೆರವಿನಿಂದ ಭಾರತ ನೇಪಾಳವನ್ನು 10 ವಿಕೆಟ್’ಗಳಿಂದ ಸೋಲಿಸಿತು. ನೇಪಾಳ ತಂಡ ಕೇವಲ 22.1 ಓವರ್‌’ಗಳಲ್ಲಿ 52 ರನ್‌’ಗಳಿಗೆ ಆಲೌಟ್ ಆಗಿದ್ದು ರಾಜ್ ಅವರ ಮೋಡಿಯಿಂದಾಗಿ... ಇದಾದ ಬಳಿಕ ಆಲ್’ರೌಂಡರ್ ಅರ್ಶಿನ್ ಕುಲಕರ್ಣಿ 43 ರನ್’ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡವನ್ನು 10 ವಿಕೆಟ್ ಗಳಿಂದ ಗೆಲುವಿನತ್ತ ಮುನ್ನಡೆಸಿದರು.


ಕಳೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 8 ವಿಕೆಟ್’ಗಳಿಂದ ಸೋತಿದ್ದ ಭಾರತ ತಂಡ ನಾಕೌಟ್ ಹಂತಕ್ಕೇರಲು ತನ್ನ ಕೊನೆಯ ಲೀಗ್ ಪಂದ್ಯವನ್ನು ಹೇಗಾದರೂ ಗೆಲ್ಲಲೇಬೇಕಿತ್ತು. ಮೊದಲೆರಡು ಪಂದ್ಯಗಳಲ್ಲಿ ಸೋತ ನೇಪಾಳ ಸೆಮಿಫೈನಲ್‌ ರೇಸ್‌’ನಿಂದ ಹೊರಗುಳಿದಿತ್ತು. ಈ ಪಂದ್ಯದಲ್ಲಿ ನೇಪಾಳದ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ.


ಇದನ್ನೂ ಓದಿ: ಅಪ್ಪಿತಪ್ಪಿಯೂ ಈ 2 ದಿನ ಮನೆಯಲ್ಲಿ ಅಗರಬತ್ತಿ ಹಚ್ಚಬೇಡಿ… ತೀರಾ ಬಡತನ ಕಾಡುತ್ತೆ!


ಬರೋಡಾದ 18 ವರ್ಷದ ವೇಗದ ಬೌಲರ್ ಲಿಂಬಾನಿ ಅವರ ಈ ಪ್ರದರ್ಶನವು ಅಂಡರ್-19 ಅಂತರರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ವಿಶೇಷ ಸಾಧನೆಯಾಗಿದೆ. ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ 2004 ರಲ್ಲಿ ಲಾಹೋರ್‌’ನಲ್ಲಿ ನಡೆದ ಜೂನಿಯರ್ ಏಷ್ಯಾ ಕಪ್‌’ನಲ್ಲಿ ಬಾಂಗ್ಲಾದೇಶ ವಿರುದ್ಧ 16 ರನ್‌’ಗಳಿಗೆ 9 ವಿಕೆಟ್ ಪಡೆದಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ