Ireland ಪ್ರವಾಸ ಕೈಗೊಳ್ಳಲಿರುವ Team India, ಇಲ್ಲಿದೆ ಶೆಡ್ಯೂಲ್
Ind Vs Ire: ಏಪ್ರಿಲ್ ನಲ್ಲಿ ನಡೆಯಬೇಕಿರುವ ಜಿಂಬಾಬ್ವೆ ತಂಡದ ಐರ್ಲೆಂಡ್ ಪ್ರವಾಸವನ್ನು ರದ್ದುಗೊಳಿಸಲಾಗಿದೆ
Team India Ireland Schedule - ಐರ್ಲೆಂಡ್ (Ireland) ತಂಡ ಬೇಸಿಗೆಯಲ್ಲಿ ಭಾರತ (India), ನ್ಯೂಜಿಲೆಂಡ್ (New Zealand), ದಕ್ಷಿಣ ಆಫ್ರಿಕಾ (South Africa) ಮತ್ತು ಅಫ್ಘಾನಿಸ್ತಾನ (Afghanistan)ವಿರುದ್ಧ ವೈಟ್ ಬಾಲ್ ಸರಣಿಯನ್ನು ಆಡಲಿದೆ. ಕ್ರಿಕೆಟ್ ಐರ್ಲೆಂಡ್ (CI) ತನ್ನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆದರೆ, ಅಫ್ಘಾನಿಸ್ತಾನ ಸರಣಿಯ ದಿನಾಂಕಗಳು ಮತ್ತು ಸ್ಥಳಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ. ಬೇಸಿಗೆಯಲ್ಲಿ ಐರ್ಲೆಂಡ್ ದಾಖಲೆ ಸಂಖ್ಯೆಯಲ್ಲಿ ಪಂದ್ಯಗಳನ್ನು ಆಡಲಿದೆ ಎಂದು CI ಮುಖ್ಯ ಕಾರ್ಯನಿರ್ವಾಹಕ ವಾರೆನ್ ಡ್ಯುಟ್ರೋಮ್ ಹೇಳಿದ್ದಾರೆ. ಮೂರು ಏಕದಿನ ಮತ್ತು 12 ಟಿ20 ಪಂದ್ಯಗಳು ನಡೆಯುವುದು ಖಚಿತಪಡಿಸಲಾಗಿದೆ.
ಏಪ್ರಿಲ್‌ನಲ್ಲಿ ನಡೆಯಬೇಕಿದ್ದ ಐರ್ಲೆಂಡ್‌ನ ಜಿಂಬಾಬ್ವೆ ಪ್ರವಾಸವನ್ನು ಮುಂದೂಡಲಾಗಿದೆ. ಇಲ್ಲಿ ತಂಡವು ಟೆಸ್ಟ್ ಪಂದ್ಯಗಳನ್ನು ಆಡಬೇಕಿತ್ತು. ಆದರೆ, ಜಿಂಬಾಬ್ವೆ ಪ್ರವಾಸವನ್ನು ಮುಂದೂಡಿದ ಮೂರು ವರ್ಷಗಳ ನಂತರ ಟೆಸ್ಟ್ ಪಂದ್ಯಕ್ಕಾಗಿ ಅವರ ಕಾಯುವಿಕೆ ವಿಸ್ತರಣೆಯಾಗಲಿದೆ.
ಭಾರತ ಕೊನೆಯದಾಗಿ 2018ರಲ್ಲಿ ಐರ್ಲೆಂಡ್‌ನಲ್ಲಿ ತನ್ನ ಪಂದ್ಯ ಆಡಿತ್ತು. ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಜಯ ಸಾಧಿಸಿತ್ತು. ಇದೀಗ ಭಾರತ ತಂಡವು ಜೂನ್ 26 ರಂದು ಮಲಾಹೈಡ್ ನಲ್ಲಿ ಐರ್ಲೆಂಡ್ ವಿರುದ್ಧ ಮೊದಲ T20I ಮತ್ತು ಜೂನ್ 28 ರಂದು ಎರಡನೇ T20 ಅನ್ನು ಅದೇ ಸ್ಥಳದಲ್ಲಿ ಆಡಲಿದೆ.
ಇಲ್ಲಿದೆ ವೇಳಾಪಟ್ಟಿ
26 ಜೂನ್ - 1 ನೇ T20I ಭಾರತ vs ಐರ್ಲೆಂಡ್ ಮಲಾಹೈಡ್
28 ಜೂನ್ - 2 ನೇ T20I ಐರ್ಲಾಂಡ್ vs ಭಾರತ, ಮಲಾಹೈಡ್
ನ್ಯೂಜಿಲೆಂಡ್ ವಿರುದ್ಧ ವೇಳಾಪಟ್ಟಿ
ಜುಲೈ 10 - ನ್ಯೂಜಿಲೆಂಡ್ ವಿರುದ್ಧ 1ನೇ ODI, ಮಲಾಹೈಡ್
ಜುಲೈ 12 - ನ್ಯೂಜಿಲೆಂಡ್ 2ನೇ ODI, ಮಲಾಹೈಡ್
ಜುಲೈ 15 - ನ್ಯೂಜಿಲೆಂಡ್ ವಿರುದ್ಧ 3ನೇ ODI, ಮಲಾಹೈಡ್
18 ಜುಲೈ - ನ್ಯೂಜಿಲೆಂಡ್ ವಿರುದ್ಧ 1ನೇ T20I, ಸ್ಟೊರ್ಮೊಂಟೊ
20 ಜುಲೈ - ನ್ಯೂಜಿಲೆಂಡ್ ವಿರುದ್ಧ 2ನೇ T20I, ಸ್ಟೊರ್ಮೊಂಟೊ
22 ಜುಲೈ - ನ್ಯೂಜಿಲೆಂಡ್ ವಿರುದ್ಧ 3ನೇ T20I, ಸ್ಟೊರ್ಮೊಂಟೊ
ದಕ್ಷಿಣ ಆಫ್ರಿಕಾ ವಿರುದ್ಧ ವೇಳಾಪಟ್ಟಿ
ಆಗಸ್ಟ್ 3 - ದಕ್ಷಿಣ ಆಫ್ರಿಕಾ ವಿರುದ್ಧ ನೇ T20I, ಬ್ರಿಸ್ಟಲ್
ಆಗಸ್ಟ್ 5 - ದಕ್ಷಿಣ ಆಫ್ರಿಕಾ ವಿರುದ್ಧ 2ನೇ T20I, ಬ್ರಿಸ್ಟಲ್