Team India: ಕೀವೀಸ್ ಕಿವಿ ಹಿಂಡಿದ ಟೀಂ ಇಂಡಿಯಾ: ಬೃಹತ್ ಮೊತ್ತ ಕಲೆಹಾಕಿ ಸರಣಿ ಗೆದ್ದ ಹಾರ್ದಿಕ್ ಪಡೆ
Team India won T20I series against New Zealand: ಇನ್ನೊಂದೆಡೆ ಭಾರತ ತಂಡದ ಸೂಪರ್ ಸ್ಟಾರ್ ಓಪನರ್ ಶುಭಮನ್ ಗಿಲ್ ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಬ್ಬರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಗಿಲ್ 63 ಎಸೆತಕ್ಕೆ 126 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 12 ಫೋರ್, 7 ಸಿಕ್ಸ್ ಸೇರಿದೆ. ಇದು ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಶತಕವಾಗಿದೆ.
Team India won T20I series against New Zealand: ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಮತ್ತು ಕೊನೆಯ ಟಿ20 ಪಂದ್ಯಾಟದಲ್ಲಿ ಕೀವೀಸ್ ತಂಡಕ್ಕೆ ಸೋಲುಣಿಸಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಟೀಂ ಇಂಡಿಯಾ ಅಬ್ಬರಿಸಿತ್ತು. ಅಷ್ಟೇ ಅಲ್ಲದೆ, ನ್ಯೂಜಿಲೆಂಡ್ ತಂಡವನ್ನು ಸಂಪೂರ್ಣವಾಗಿ ನಲುಗಿಹೋಗುವಂತೆ ಮಾಡಿದೆ.
ಇನ್ನೊಂದೆಡೆ ಭಾರತ ತಂಡದ ಸೂಪರ್ ಸ್ಟಾರ್ ಓಪನರ್ ಶುಭಮನ್ ಗಿಲ್ ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಬ್ಬರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಗಿಲ್ 63 ಎಸೆತಕ್ಕೆ 126 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 12 ಫೋರ್, 7 ಸಿಕ್ಸ್ ಸೇರಿದೆ. ಇದು ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಶತಕವಾಗಿದೆ.
ಇದನ್ನೂ ಓದಿ: Team India : ಟೀಂನಿಂದ ಈ ಆಟಗಾರನನ್ನು ಹೊರಗಿಟ್ಟು ವಿವಾದ ಸೃಷ್ಟಿಸಿದ ಪಾಂಡ್ಯ!
ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ನಡೆಸಿದೆ. ಆರಂಭಿಕ ಆಟಗಾರ ಇಶಾನ್ ಕಿಶನ್ ಹೊರತುಪಡಿಸಿ, ಮಿಕ್ಕೆಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇಶಾನ್ ಕಿಶನ್ 3 ಎಸೆತಕ್ಕೆ 1 ರನ್, ಶುಭ್ಮನ್ ಗಿಲ್ 63 ಎಸೆತಕ್ಕೆ ಅಜೇಯ 126 ರನ್, ರಾಹುಲ್ ತ್ರಿಪಾಠಿ 22 ಎಸೆತಕ್ಕೆ 44 ರನ್, ಸೂರ್ಯಕುಮಾರ್ ಯಾದವ್ 13 ಎಸೆತಕ್ಕೆ 24 ರನ್, ಹಾರ್ದಿಕ್ ಪಾಂಡ್ಯ 17 ಎಸೆತಕ್ಕೆ 30 ರನ್ ಮತ್ತು ದೀಪಕ್ ಹೂಡಾ 2 ಎಸೆತಕ್ಕೆ ಅಜೇಯ 2 ರನ್ ಕಲೆ ಹಾಕಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಶುಭ್ಮನ್ ಗಿಲ್ 100ಕ್ಕೂ ಹೆಚ್ಚು ರನ್ ಗಳ ಜೊತೆಯಾಟವಾಡಿದ್ದಾರೆ.
ಇನ್ನು ಟೀಂ ಇಂಡಿಯಾದ ಪ್ಲೇಯಿಂಗ್-11ರಲ್ಲಿ ಒಂದೇ ಒಂದು ಬದಲಾವಣೆ ಮಾಡಲಾಗಿತ್ತು. ಆತಿಥೇಯ ತಂಡದ ನಾಯಕರಾಗಿರುವ ಆಲ್ ರೌಂಡರ್ ವೇಗಿ ಉಮ್ರಾನ್ ಮಲಿಕ್ ಅವರಿಗೆ ಅವಕಾಶ ನೀಡಿದ್ದು, ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರನ್ನು ಮೂರನೇ ಟಿ20 ಪಂದ್ಯದಿಂದ ಕೈಬಿಡಲಾಗಿತ್ತು.
ನ್ಯೂಜಿಲೆಂಡ್ ತಂಡದಲ್ಲಿ ಬದಲಾವಣೆಯಾಗಿದ್ದು, ಜಾಕೋಬ್ ಡಫ್ಫಿ ಬದಲಿಗೆ ಬೆನ್ ಲಿಸ್ಟರ್ ಪ್ಲೇಯಿಂಗ್-11 ರಲ್ಲಿ ಅವಕಾಶ ಪಡೆದರು. ಇನ್ನು ನ್ಯೂಜಿಲೆಂಡ್ ತಂಡಕ್ಕೆ ಆರಂಭದಲ್ಲಿಯೇ ಟೀಂ ಇಂಡಿಯಾ ಆಘಾತ ನೀಡಿದೆ. ಆರಂಭಿಕರಾಗಿ ಆಟವಾಡಿದ ಫಿನ್ ಆಲೆನ್ ಮತ್ತು ಡಿವೊನ್ ಕಾನ್ವೆ ಒಂದಂಕಿ ರನ್ ಕಲೆ ಹಾಕಿ ಪೆವಿಲಿಯನ್ ಸೇರಿದರು. ಆ ಬಳಿಕ ಕ್ರೀಸ್ ಗೆ ಆಗಮಿಸಿದ ಮಾರ್ಕ್ ಚಾಂಪ್ಮನ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಬ್ರೇಸ್ವೆಲ್ ಕೊಂಚವೂ ಅಬ್ಬರಿಸಲು ಸಾಧ್ಯವಾಗಲಿಲ್ಲ. ಒಟ್ಟಾರೆ 12 ಓವರ್ ವೇಳೆಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ 66 ರನ್ ಹಾಕಿ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ: Shubman Gill: ಮತ್ತೆ ‘ದಿಲ್ ಗೆದ್ದ ಗಿಲ್’: ಅಬ್ಬರದ ಬ್ಯಾಟಿಂಗ್-T20Iನಲ್ಲಿ ಮೊದಲ ಶತಕ ಬಾರಿಸಿದ ಶುಭ್ಮನ್
ಸದ್ಯ ಟೀಂ ಇಂಡಿಯಾ ಸತತ ಗೆಲುವಿನ ಹಾದಿ ಹಿಡಿದಿದ್ದು, ಏಕದಿನದಲ್ಲೂ ಪರಾಕ್ರಮ ಸಾಧಿಸಿ, ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲೂ ವಿಜಯ ಸಾಧಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.