‘U19 World Cup 2023’ ಗೆದ್ದ ಟೀಂ ಇಂಡಿಯಾ ಮಹಿಳಾ ಪಡೆ: ಮೊದಲ ಬಾರಿ ಕಪ್ ಎತ್ತಿಹಿಡಿದು ಇತಿಹಾಸ ಸೃಷ್ಟಿ
Team India won Women’s U19 T20 World Cup 2023: 69 ರನ್‌ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ, ಶಫಾಲಿ ವರ್ಮನ್ ಮತ್ತು ಶ್ವೇತಾ ಸೆಹ್ರಾವತ್ ಅವರನ್ನು ಬೇಗನೆ ಕಳೆದುಕೊಂಡಿತ್ತು. ಆದರೆ ಜಿ ತ್ರಿಶಾ ಮತ್ತು ಸೌಮ್ಯಾ ತಿವಾರಿ ಜೋಡಿ ಭಾರತವನ್ನು ಗೆಲುವಿನ ಹಾದಿಗೆ ಕರೆದುಕೊಂಡು ಹೋಯಿತು.
Team India won Women’s U19 T20 World Cup 2023: ಭಾನುವಾರ ನಡೆದ ಮೊದಲ ICC U-19 ಮಹಿಳಾ T20 ವಿಶ್ವಕಪ್ ಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್ ಅನ್ನು 68 ರನ್‌ಗಳಿಗೆ ಅಲ್ಪ ಮೊತ್ತಕ್ಕೆ ಆಲೌಟ್ ಮಾಡಿದೆ. ಜೊತೆಗೆ ಏಳು ವಿಕೆಟ್ ಗಳ ಭರ್ಜರಿ ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.
69 ರನ್‌ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ, ಶಫಾಲಿ ವರ್ಮನ್ ಮತ್ತು ಶ್ವೇತಾ ಸೆಹ್ರಾವತ್ ಅವರನ್ನು ಬೇಗನೆ ಕಳೆದುಕೊಂಡಿತ್ತು. ಆದರೆ ಜಿ ತ್ರಿಶಾ ಮತ್ತು ಸೌಮ್ಯಾ ತಿವಾರಿ ಜೋಡಿ ಭಾರತವನ್ನು ಗೆಲುವಿನ ಹಾದಿಗೆ ಕರೆದುಕೊಂಡು ಹೋಯಿತು.
ಇದನ್ನೂ ಓದಿ: IND vs AUS : ಆಸ್ಟ್ರೇಲಿಯಾ ಸರಣಿಗೆ ಎಂಟ್ರಿ ನೀಡಲಿದ್ದಾರೆ ಜಸ್ಪ್ರೀತ್ ಬುಮ್ರಾ!
ಇತಿಹಾಸ ಸೃಷ್ಟಿ:
ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಭಾರತಕ್ಕೆ ಮೊದಲ ಜಾಗತಿಕ ಟ್ರೋಫಿಯನ್ನು ಪಡೆಯುವ ಸುವರ್ಣಾವಕಾಶ ಇಂದು ಲಭಿಸಿದೆ. 18 ವರ್ಷಗಳ ಹಿಂದೆ (2005 ODI ವಿಶ್ವಕಪ್ ಫೈನಲ್) ಮೊದಲ ಬಾರಿಗೆ ಭಾರತ ಮಹಿಳಾ ತಂಡ ವಿಶ್ವಕಪ್ ಪ್ರವೇಶ ಮಾಡಿತ್ತು. ಆದರೆ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು. ಆದರೆ ಇಂದು ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ.
ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್:
ಶ್ವೇತಾ ಸೆಹ್ರಾವತ್, ಶೆಫಾಲಿ ವರ್ಮಾ, ಸೌಮ್ಯ ತಿವಾರಿ, ಜಿ ತ್ರಿಶಾ, ರಿಚಾ ಘೋಷ್, ಹರ್ಷಿತಾ ಬಸು, ಟಿಟಾಸ್ ಸಾಧು, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶ್ವಿ ಚೋಪ್ರಾ, ಸೋನಮ್ ಯಾದವ್
ಇದನ್ನೂ ಓದಿ: Dinesh Karthik : ಟೀಂ ಇಂಡಿಯಾ ಮುಂದೆ ಇದ್ದಕ್ಕಿದ್ದಂತೆ ಈ ಬೇಡಿಕೆ ಇಟ್ಟ ದಿನೇಶ್ ಕಾರ್ತಿಕ್!
ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್:
ಗ್ರೇಸ್, ಲಿಬರ್ಟಿ ಹೀಪ್, ನಿಮಾಹ್, ಸೆರೆನ್, ರಿಯಾನ್ನಾ ಮ್ಯಾಕ್‌ಡೊನಾಲ್ಡ್, ಕ್ಯಾರಿಸ್, ಅಲೆಕ್ಸಾ ಸ್ಟೋನ್‌ಹೌಸ್, ಸೋಫಿ, ಜೋಶಿ, ಎಲ್ಲೀ ಆಂಡರ್ಸನ್, ಹನ್ನಾ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.