Team India: ಬಾಲಿವುಡ್‌ ಹಾಗೂ ಕ್ರಿಕೆಟ್‌ಗೂ ಅಘಾದವಾದ ಸಂಬಂಧ ಇದೆ. ನಟಿಯರ ಜೊತೆ ಸ್ಟಾರ್‌ ಆಟಗಾರರು ಡೇಟ್‌ ಮಾಡುವುದು ಬ್ರೇಕ್‌ಅಪ್‌ ಮಾಡಿಕೊಳ್ಳುವುದು ಇವೆಲ್ಲಾ ಸಾಮಾನ್ಯ. ಈಗಿರುವಾಗ. ಟೀಂ ಇಂಡಿಯಾದ ಯಾವ ಯಾವ ಆಟಗಾರರು ನಟಿಯರ ಜೊತೆ ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆ ಗೊತ್ತಾ? 


COMMERCIAL BREAK
SCROLL TO CONTINUE READING

ಬಾಲಿವುಡ್‌ ನಟಿಯರನ್ನು ಟೀಂ ಇಂಡಿಯಾದ ಆಟಗಾರರು ಲವ್‌ ಮಾಡಿ ಬ್ರೇಕ್‌ ಅಪ್‌ ಆದ ಹಲವು ಉದಾಹರಣೆಗಳಿವೆ, ಲವ್‌ ಮಾಡಿದವರಲ್ಲಿ ಮದುವೆಯಾಗುವವರ ಸಂಖ್ಯೆ ಕಡಿಮೆ, ಉದಾಹರನೆಗೆ ಅಥಿಯಾ ಶೆಟ್ಟಿ- ಕೆ ಎಲ್‌ ರಾಹುಲ್‌, ಅನುಷ್ಕಾ ಶರ್ಮಾ- ವಿರಾಟ್‌ ಕೊಹ್ಲಿ. ಆದರೆ ಲವ್‌ ಮಾಡಿ ಬ್ರೇಕ್‌ ಅಪ್‌ ಮಾಡಿಕೊಂಡ ಹಲವು ಉದಾಹರಣೆಗಳು ಸಹ ಇದೆ. 


ಯುವರಾಜ್ ಸಿಂಗ್ - ಕಿಮ್ ಶರ್ಮಾ
ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಹೆಸರು ಬಾಲಿವುಡ್ ವಲಯದಲ್ಲಿ ಆಗಾಗ ಕೇಳಿಬರುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಯುವರಾಜ್ ಮತ್ತು ಕಿಮ್ ಶರ್ಮಾ ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ ಈ ಸಂಬಂಧದ ಕುರಿತು ಜೋಡಿ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ. 


ಇಶಾ ಶರ್ವಾನಿ - ಜಹೀರ್ ಖಾನ್ 
ಭಾರತೀಯ ಕ್ರಿಕೆಟಿಗರಾದ ಜಹೀರ್ ಖಾನ್ ಮತ್ತು ಇಶಾ ಶರ್ವಾನಿ ಸುಮಾರು ಎಂಟು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದಾರೆ. ಬಹಳ ದಿನಗಳ ನಂತರ ಇಬ್ಬರೂ ಬೇರೆಯಾಗಲು ನಿರ್ಧರಿಸಿದರು. ಅದರ ನಂತರ, ಜಹೀರ್ ಖಾನ್ 2017 ರಲ್ಲಿ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರನ್ನು ವಿವಾಹವಾದರು. ಶಾರುಖ್ ಖಾನ್ ಅಭಿನಯದ ಚಕ್ ದೇ ಇಂಡಿಯಾ ಚಿತ್ರದ ಮೂಲಕ ಸಾಗರಿಕಾ ಬಾಲಿವುಡ್ ಪ್ರವೇಶಿಸಿದ್ದರು.


ರವಿಶಾಸ್ತ್ರಿ - ಅಮೃತಾ ಸಿಂಗ್
ರವಿಶಾಸ್ತ್ರಿ ಮತ್ತು ಅಮೃತಾ ಸಿಂಗ್ ಒಂದಾನೊಂದು ಕಾಲದಲ್ಲಿ ಪರಸ್ಪರ ಪ್ರೀತಿ ಮಾಡಿ ಆಗಿನ ಕಾಲಕ್ಕೆ ತಮ್ಮ ಪ್ರೇಮ ಪ್ರಕರನದ ಮೂಲಕ ಸುದ್ದಿಯಲ್ಲಿದ್ದ ಜೋಡಿ. ಈ ಇಬ್ಬರು ಜೋಡಿ ಮದುವೆಯಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ರವಿ ಶಾಸ್ತರಿಯವರಿಗೆ ಅಮೃತಾ ಸಿಂಗ್‌ ಮದುವೆಯ ನಂತರ ನಟಿಸುವುದು ಇಷ್ಟವಿಲ್ಲದ ಕಾರಣ ಈ ಪ್ರೀತಿಯ ಸಂಬಂಧವನ್ನು ಜೋಡಿ ಮುರಿದುಕೊಂಡಿದ್ದರು. 1990 ರಲ್ಲಿ, ರವಿಶಾಸ್ತ್ರಿ ರಿತು ಸಿಂಗ್ ಅವರನ್ನು ವಿವಾಹವಾದರು ಮತ್ತು ಅಮೃತಾ ಸಿಂಗ್ ಅವರು ನಟ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.