ಒಬ್ಬರಲ್ಲ, ಇಬ್ಬರಲ್ಲ… ಪಾಕ್ ವಿರುದ್ಧ ‘ಚೊಚ್ಚಲ ಪಂದ್ಯ’ ಆಡಲಿದ್ದಾರೆ ಟೀಮ್ ಇಂಡಿಯಾದ 4 ಆಟಗಾರರು!
Indian Cricketers Making Debut Against Pakistan: ಈ ಐತಿಹಾಸಿಕ ಪಂದ್ಯದಲ್ಲಿ ಭಾರತದ ನಾಲ್ವರು ಆಟಗಾರರರು ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಏಷ್ಯಾಕಪ್ ಏಕದಿನ ಕ್ರಿಕೆಟ್ ಪಂದ್ಯವನ್ನಾಡುತ್ತಿದ್ದಾರೆ.
Team India Playing 11: ಇಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯಕ್ಕೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಇದು ಮೊದಲನೇ ಪಂದ್ಯವಾಗಿದ್ದು, ಪಾಕಿಸ್ತಾನ ತಂಡ ತನ್ನ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಆಡಿ 238 ರನ್’ಗಳಿಂದ ಎದುರಾಳಿಯನ್ನು ಸೋಲಿಸಿದೆ.
ಇದನ್ನೂ ಓದಿ: ಈತ ಹುಟ್ಟಿದ್ದು ಪಾಕ್’ನಲ್ಲಿ, ಆಡಿದ್ದು ದ.ಆಫ್ರಿಕಾ ಪರ, ಮದುವೆಯಾಗಿದ್ದು ಭಾರತದ ಮಾಡೆಲ್ ಜೊತೆ…!
ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನ 6 ವಿಕೆಟ್’ಗೆ 342 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿ ನೇಪಾಳವನ್ನು 104 ರನ್’ಗಳಿಗೆ ಕಟ್ಟಿಹಾಕಿತ್ತು. ಪಾಕಿಸ್ತಾನ ತಂಡ 124 ರನ್’ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆದರೆ ಬಾಬರ್ ಅಜಮ್ ಮತ್ತು ಇಫ್ತಿಕರ್ ಅಹ್ಮದ್ ಶತಕ ಇನಿಂಗ್ಸ್ ಆಡುವ ಮೂಲಕ ತಂಡದ ಸ್ಕೋರ್ ಅನ್ನು 300 ರನ್’ಗಳ ಗಡಿ ದಾಟುವಂತೆ ಮಾಡಿದ್ದರು.
ಇನ್ನು ಈ ಐತಿಹಾಸಿಕ ಪಂದ್ಯದಲ್ಲಿ ಭಾರತದ ನಾಲ್ವರು ಆಟಗಾರರರು ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಏಷ್ಯಾಕಪ್ ಏಕದಿನ ಕ್ರಿಕೆಟ್ ಪಂದ್ಯವನ್ನಾಡುತ್ತಿದ್ದಾರೆ. ಆರಂಭಿಕ ಆಟಗಾರ ಶುಭ್ಮನ್ ಗಿಲ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್, ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮತ್ತು ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಈ ಗುಂಪಿನಲ್ಲಿದ್ದಾರೆ. ಇವರೆಲ್ಲರೂ ಪ್ಲೇಯಿಂಗ್ 11 ರಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.
ಇನ್ನು ಪಾಕಿಸ್ತಾನ ತಂಡ ಪ್ರಸ್ತುತ ದಿನದವರೆಗೆ ಅತ್ಯಂತ ಸಮತೋಲಿತವಾಗಿ ಕಾಣುತ್ತಿದೆ. ICC ODI ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನ ತಂಡದ ಎಲ್ಲಾ ಪ್ರಮುಖ ಆಟಗಾರರು ಲಭ್ಯವಿದ್ದು, ಈ ತಂಡವು ಅತ್ಯಂತ ಬಲಿಷ್ಠವಾಗಿ ಕಾಣುತ್ತಿದೆ. ಮತ್ತೊಂದೆಡೆ ಭಾರತ ತಂಡವು ತನ್ನ ಪ್ರಮುಖ ಆಟಗಾರರನ್ನು ಮಿಸ್ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: ಪಾಕ್ ವಿರುದ್ಧದ ಪಂದ್ಯಕ್ಕಿಲ್ಲ ಭಾರತದ ಗೇಮ್ ಚೇಂಜಿಂಗ್ ಆಟಗಾರ!
ಭಾರತದ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.