Stuart Binny Unlucky Cricketer: ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಎಷ್ಟು ಕಷ್ಟವೋ, ಆ ಸ್ಥಾನವನ್ನು ಉಳಿಸಿಕೊಳ್ಳುವುದೂ ಅಷ್ಟೇ ಕಷ್ಟ. ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ʼನಂತಹ ವೇದಿಕೆಗಳಲ್ಲಿ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ, ಕ್ರಿಕೆಟಿಗರು ಟೀಂ ಇಂಡಿಯಾದಲ್ಲಿ ಸ್ಥಾನ ಗಳಿಸುತ್ತಾರೆ. ಆದರೆ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಅಂತಹ ಕ್ರಿಕೆಟಿಗ ಬಗ್ಗೆ ಹುಡುಕಾಟ ಆರಂಭಿಸಿದರೆ ದೊಡ್ಡ ಪಟ್ಟಿಯೇ ಸಿಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅನುಷ್ಕಾ ಯಾವಾಗಲೂ ʼಅದನ್ನುʼ ಮಾಡೋದು ನನಗೆ ಇಷ್ಟವಾಗಲ್ಲ: ನಟ ಅಮೀರ್‌ ಖಾನ್‌ ಮುಂದೆ ಪತ್ನಿಯ ಸೀಕ್ರೆಟ್‌ ಬಿಚ್ಚಿಟ್ಟ ವಿರಾಟ್‌ ಕೊಹ್ಲಿ


ಏಕದಿನ ಪಂದ್ಯದಲ್ಲಿ ಕೇವಲ ನಾಲ್ಕು ರನ್ ನೀಡಿ ಆರು ವಿಕೆಟ್ ಪಡೆದ ಆಲ್ ರೌಂಡರ್ ಟೀಂ ಇಂಡಿಯಾದಲ್ಲಿದ್ದರು. ಇವತ್ತಿಗೂ, ಆ ದಾಖಲೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಬೌಲಿಂಗ್ ವಿಷಯದಲ್ಲಿ ಭಾರತವು ತೋರಿದ ಅತ್ಯುತ್ತಮ ಪ್ರದರ್ಶನವಾಗಿದೆ. ಅಂತಹ ಅದ್ಭುತ ಬೌಲಿಂಗ್ ಹೊರತಾಗಿಯೂ, ಈ ಆಲ್ ರೌಂಡರ್ ಕೆಟ್ಟ ಪಂದ್ಯದಿಂದಾಗಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು. ಆತ ಬೇರಾರು ಅಲ್ಲ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರ ಪುತ್ರ ಸ್ಟುವರ್ಟ್ ಬಿನ್ನಿ.


ರೋಜರ್ ಬಿನ್ನಿ 1983 ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದ ಕಪಿಲ್ ದೇವ್ ಅವರ ತಂಡದ ಭಾಗವಾಗಿದ್ದರು. ಮಗ ಸ್ಟುವರ್ಟ್ ಬಿನ್ನಿ ಕೂಡ ಇದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಬೆಂಗಳೂರಿನವರಾದ ಸ್ಟುವರ್ಟ್ ಬಿನ್ನಿ ಕೂಡ ತಂದೆಯ ಸಾಲಿನಲ್ಲಿ ಆಲ್ ರೌಂಡರ್ ಎನಿಸಿಕೊಂಡರು. 38 ವರ್ಷ ವಯಸ್ಸಿನ ಬಿನ್ನಿ ಎಡಗೈ ಬ್ಯಾಟ್ಸ್‌ಮನ್ ಆಗಿದ್ದರು ಮತ್ತು ಮಧ್ಯಮ ಬೌಲಿಂಗ್ ಮಾಡುತ್ತಿದ್ದರು. ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ಬಿನ್ನಿ ಐಪಿಎಲ್, ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ನ ಪ್ರತಿಸ್ಪರ್ಧಿ ಲೀಗ್‌ಗೆ ಸೇರುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.


ಆದರೆ ಅದಾದ ನಂತರ ಸ್ಟುವರ್ಟ್ ಬಿನ್ನಿ ಬಿಸಿಸಿಐಗೆ ಕ್ಷಮೆಯಾಚಿಸಿ ಐಪಿಎಲ್ ಸೇರಿದರು. ಐಪಿಎಲ್‌ʼನಲ್ಲಿನ ಅವರ ಅದ್ಭುತ ಪ್ರದರ್ಶನದ ಆಧಾರದ ಮೇಲೆ  2014 ರಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡುವ ಅವಕಾಶವನ್ನು ಪಡೆದರು. ಮುಂದಿನ ಎರಡು ವರ್ಷಗಳಲ್ಲಿ, ಬಿನ್ನಿ ಟೀಮ್ ಇಂಡಿಯಾ ಪರ ಆರು ಟೆಸ್ಟ್, 14 ODI ಮತ್ತು ಮೂರು T20 ಪಂದ್ಯಗಳನ್ನು ಆಲ್ ರೌಂಡರ್ ಆಗಿ ಆಡಿದರು.


ಇದನ್ನೂ ಓದಿ: ಇಂಡಸ್ಟ್ರಿಯಲ್ಲಿ ಕಿರೀಟವಿಲ್ಲದ ರಾಜಕುಮಾರ.. 2900 ಕೋಟಿ ಒಡೆಯ.. ಆದರೆ ಒಂದು ಮದುವೆ ಭಾಗ್ಯವೂ ಈತನ ಪಾಲಿಗಿಲ್ಲ..! ಯಾರು ಆ ನಟ!!


2014ರಲ್ಲಿ ಬಾಂಗ್ಲಾದೇಶ ವಿರುದ್ಧದ ಮೀರ್‌ಪುರ ಟೆಸ್ಟ್‌ʼನಲ್ಲಿ ಬಿನ್ನಿ ಇನ್ನಿಂಗ್ಸ್‌ವೊಂದರಲ್ಲಿ 4 ರನ್‌ ನೀಡಿ ಆರು ವಿಕೆಟ್‌ ಪಡೆದು ಮಿಂಚಿದ್ದರು. ಇಲ್ಲಿಯವರೆಗೆ, ಇದು 50 ಓವರ್‌\ಗಳ ಕ್ರಿಕೆಟ್‌ನಲ್ಲಿ ಇನಿಂಗ್ಸ್‌\ನಲ್ಲಿ ಭಾರತದ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. 2017 ರಲ್ಲಿ, ಅವರು ಕೊನೆಯ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಅಮೆರಿಕದ ಫ್ಲೋರಿಡಾದಲ್ಲಿ ನಡೆದ T20 ಪಂದ್ಯದಲ್ಲಿ ಕಾಣಿಸಿಕೊಂಡರು. ಇದು ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯವಾಗಿದೆ. ಈ ಸಂದರ್ಭದಲ್ಲಿ ಸ್ಟುವರ್ಟ್ ಬಿನ್ನಿಗೆ ಧೋನಿ ಕೇವಲ ಒಂದು ಓವರ್ ನೀಡಿದರು. ಆದರೆ ಈ ಓವರ್‌ʼನಲ್ಲಿ ಬಿನ್ನಿ ಬೌಲಿಂಗ್ʼಗೆ ಎದುರಾಳಿ ಬ್ಯಾಟರ್ ಐದು ಸಿಕ್ಸರ್‌‌ ಸಿಡಿಸಿದ್ದರು. ಇದಾದ ನಂತರ ಬಿನ್ನಿ ಪ್ರದರ್ಶನ ಮಂಕಾಗತೊಡಗಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.