Wriddhiman saha Retirement: ಭಾರತ ಕ್ರಿಕೆಟ್ ತಂಡ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ಟೀಂ ಇಂಡಿಯಾ 3-0 ಅಂತರದ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಈ ಸರಣಿಯಲ್ಲಿ ಟೀಂ ಇಂಡಿಯಾ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಈ ನಡುವೆ ಟೀಂ ಇಂಡಿಯಾ ಪರ ಆಡಿದ ಸ್ಟಾರ್ ವಿಕೆಟ್ ಕೀಪರ್ ಏಕಾಏಕಿ ನಿವೃತ್ತಿ ಘೋಷಿಸಿದ್ದಾರೆ. ಈ ಆಟಗಾರ ಭಾರತ ಟೆಸ್ಟ್ ತಂಡದಲ್ಲಿ ಸುದೀರ್ಘ ಕಾಲ ಆಡಿದ್ದಾರೆ. ಈ ಆಟಗಾರ ಬೇರಾರೂ ಅಲ್ಲ ವೃದ್ಧಿಮಾನ್ ಸಹಾ. ವೃದ್ಧಿಮಾನ್ ಸಾಹಾ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಸಹಾ ವೃತ್ತಿಜೀವನ ಹೇಗಿತ್ತು?


ವೃದ್ಧಿಮಾನ್ ಸಹಾ ಅವರ ವೃತ್ತಿಜೀವನವನ್ನು ನೋಡುವುದಾದರೆ, ಅವರು 2010 ರಿಂದ 2021ರವರೆಗೆ ಭಾರತಕ್ಕಾಗಿ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದಲ್ಲದೇ ಟೀಂ ಇಂಡಿಯಾ ಪರ 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರಿಗೆ ಟಿ-20 ಅಂತಾರಾಷ್ಟ್ರೀಯ ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ವೃದ್ಧಿಮಾನ್ ಸಹಾ ಭಾರತ ಪರ 40 ಟೆಸ್ಟ್ ಪಂದ್ಯಗಳಲ್ಲಿ 29.41 ಸರಾಸರಿಯಲ್ಲಿ 1,353 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಗರಿಷ್ಠ ಸ್ಕೋರ್ 117 ರನ್. ಈ ಆಟಗಾರನಿಗೆ ಏಕದಿನದಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಪರ 9 ಏಕದಿನ ಪಂದ್ಯಗಳಲ್ಲಿ 41 ರನ್ ಗಳಿಸಿದ್ದರು. ಅವರ ಐಪಿಎಲ್ ವೃತ್ತಿಜೀವನವು ಅದ್ಭುತವಾಗಿತ್ತು.


ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಕುರಿತು ಬಿಸಿಸಿಐ ಶಾಕಿಂಗ್‌ ನಿರ್ಧಾರ... ಗಂಭೀರ್‌ ವಜಾ! ರೋಹಿತ್ ಶರ್ಮಾ ಆರಾಧ್ಯ ದೈವವೆನ್ನುವ ದಿಗ್ಗಜನಿಗೆ ಮುಂದಿನ ಜವಾಬ್ದಾರಿ!


ವೃದ್ಧಿಮಾನ್ ಸಹಾ ಐಪಿಎಲ್‌ನಲ್ಲಿ ಐದು ತಂಡಗಳಿಗಾಗಿ ಆಡಿದ್ದರು. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಹೆಸರುಗಳು ಸೇರಿವೆ. ಈ ಐದು ತಂಡಗಳಿಗೆ ಆಡುವಾಗ ಅವರು ಉತ್ತಮ ಪ್ರದರ್ಶನ ನೀಡಿದರು. ಐಪಿಎಲ್‌ನಲ್ಲಿ 170 ಪಂದ್ಯಗಳಲ್ಲಿ 2,934 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 127.56 ಆಗಿತ್ತು. ಸಹಾ ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳ ತಂಡದ ಪರ ಆಡುತ್ತಾರೆ. ಸದ್ಯ ಅವರು ರಣಜಿಯಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಅವರ ಕೊನೆಯ ಟೂರ್ನಿಯಾಗಲಿದೆ. ಇದಲ್ಲದೆ ಅವರು ಐಪಿಎಲ್ 2025ರ ಹರಾಜಿನಲ್ಲಿ ಭಾಗವಹಿಸುವುದಿಲ್ಲವೆಂದು ವರದಿಗಳು ತಿಳಿಸಿವೆ.


ನಿವೃತ್ತಿ ಬಗ್ಗೆ ದೊಡ್ಡ ಹೇಳಿಕೆ 


ಕ್ರಿಕೆಟ್‌ನಲ್ಲಿ ಅದ್ಭುತ ಪಯಣದ ನಂತರ ಇದೇ ನನ್ನ ಕೊನೆಯ ಸೀಸನ್ ಎಂದು ಸಹಾ ಹೇಳಿದ್ದಾರೆ. ಬಂಗಾಳವನ್ನು ಪ್ರತಿನಿಧಿಸುವ ಗೌರವ ನನಗೆ ಸಿಕ್ಕಿದ್ದು ನನ್ನ ಪುಣ್ಯ. ನಿವೃತ್ತಿಗೆ ಮುನ್ನ ರಣಜಿ ಟ್ರೋಫಿ ಮಾತ್ರ ಆಡುತ್ತೇನೆ. ಈ ನನ್ನ ಅದ್ಭುತ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ಧನ್ಯವಾದಗಳು, ನಿಮ್ಮ ಬೆಂಬಲ ತುಂಬಾ ಅರ್ಥಪೂರ್ಣವಾಗಿದೆ. ಈ ಋತುವನ್ನು ಸ್ಮರಣೀಯವಾಗಿಸೋಣ..."ʼವೆಂದು ಹೇಳಿದ್ದಾರೆ.


ಇದನ್ನೂ ಓದಿ: ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆ ಹೆಸರು ಬರಲು ಕಾರಣವೇನು..? ಇದರ ಹಿಂದಿದೆ ಇಂಟರೆಸ್ಟಿಂಗ್‌ ಸ್ಟೋರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ