ನವದೆಹಲಿ: ಕೆಲ ತಿಂಗಳ ಹಿಂದಷ್ಟೇ ತಾಯಿಯಾಗುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದೀಗ ತಮ್ಮ ನೂತನ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಟೆನಿಸ್ ತಾರೆಯರಲ್ಲಿ ಗ್ಲಾಮರಸ್ ಆಗಿರುವ ಸಾನಿಯಾ ಮಿರ್ಜಾ ಏಪ್ರಿಲ್ ತಿಂಗಳಿನಲ್ಲಿ ಪತಿ ಹಾಗೂ ಪಾಕಿಸ್ತಾನ ಮಾಜಿ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ ಜೊತೆ ಮಗುವಿನ ನಿರೀಕ್ಷೆಯಲ್ಲಿರುವ ಕುರಿತಾಗಿ ಟ್ವೀಟ್ ಮಾಡಿದ್ದರು. ಇದೀಗ ಸ್ವತಃ ಸಾನಿಯಾ ಮಿರ್ಜಾ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ನೂತನ ಭಾವಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣುತ್ತಿರುವ ಸಾನಿಯಾ ತಮ್ಮ ಹೊಟ್ಟೆಯ ಮೇಲೆ ಕೈಯಿಟ್ಟುಕೊಂಡಿದ್ದು, "ಆ ಕ್ಷಣಗಳ ಕಾತುರದಲ್ಲಿ.." ಎಂದು ಬರೆದುಕೊಂಡಿದ್ದಾರೆ.



ಈ ಹಿಂದೆ ಏಪ್ರಿಲ್ ತಿಂಗಳಿನಲ್ಲಿ ನಡೆದ ಗೋವಾ ಫೆಸ್ಟ್‌ ಕಾರ್ಯಕ್ರಮದಲ್ಲಿ ಲಿಂಗ ಪಕ್ಷಪಾತ ಎಂಬ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ್ದ ಸಾನಿಯಾ, ತಮ್ಮ ಮಗುವಿನ ಸರ್‌ನೇಮ್ ಮಿರ್ಜಾ ಮಲಿಕ್ ಎಂದಿರಬೇಕೆ ಹೊರತು ಮಲಿಕ್ ಎಂದಿರಬಾರದು. ಇದರಿಂದ ಮಗುವಿನ ಹೆಸರಿನಲ್ಲಿ ಎರಡೂ ಕುಟುಂಬದ ಸರ್‌ ನೇಮ್ ಇರುತ್ತದೆ. ಮಲಿಕ್‌ಗೆ ಹೆಣ್ಣುಮಗು ಎಂದರೆ ಇಷ್ಟ ಎಂದು ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.