IND vs AUS 1st Test, Vikram Rathour Statement: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇದುವರೆಗೆ ಉತ್ತಮ ಪ್ರದರ್ಶನ ನೀಡಿದೆ. ಮೊದಲ ದಿನ ಬೌಲರ್‌ಗಳು ಪ್ರಾಬಲ್ಯ ಮೆರೆದರೆ, ಎರಡನೇ ದಿನ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಬ್ಯಾಟಿಂಗ್ ನಲ್ಲಿ ಅಬ್ಬರ ತೋರಿಸಿದ್ದಾರೆ. ಎರಡನೇ ದಿನದಾಟದ ಅಂತ್ಯದ ನಂತರ ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಸುದ್ದಿಗೋಷ್ಠಿ ನಡೆಸಿ ಪಂದ್ಯದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs AUS : ಆಸ್ಟ್ರೇಲಿಯಾ ತಂಡಕ್ಕೆ ಭಾರಿ ಹೊಡೆತ, ಈ ಸ್ಟಾರ್ ಆಟಗಾರ ಪಂದ್ಯದಿಂದ ಔಟ್!


ರೋಹಿತ್ ಪ್ರಶಂಸೆ: ಆಸ್ಟ್ರೇಲಿಯಾ ವಿರುದ್ಧ 120 ರನ್ ಗಳಿಸಲು ರೋಹಿತ್ ಶರ್ಮಾ ಕಠಿಣ ಪರಿಶ್ರಮ ಪಡಬೇಕಾಯಿತು ಎಂದು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಶುಕ್ರವಾರ ಹೇಳಿದ್ದಾರೆ. ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ, ರನ್ ಗಳಿಸಲು ಏನಾದರೂ ವಿಶೇಷ ಸಾಧನೆ ಮಾಡಬೇಕಾಗಿದೆ ಎಂದರು. ರೋಹಿತ್ 120 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ನಂತರ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅರ್ಧಶತಕ ಗಳಿಸಿ ಅಜೇಯರಾಗಿ ಮರಳಿದರು. ಭಾರತ ಇದುವರೆಗೆ ಮೊದಲ ಇನ್ನಿಂಗ್ಸ್‌ನಲ್ಲಿ 144 ರನ್‌ಗಳ ಮುನ್ನಡೆ ಸಾಧಿಸಿದೆ.


ನಾಗ್ಪುರದಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಬಳಿಕ ಮಾತನಾಡಿದ ವಿಕ್ರಮ್ ರಾಥೋಡ್, 'ರೋಹಿತ್ ಅವರ ಈ ಇನ್ನಿಂಗ್ಸ್ ತುಂಬಾ ವಿಶೇಷವಾಗಿದೆ. ಅವರು ರನ್ ಗಳಿಸುವುದನ್ನು ನೋಡಲು ಸಂತೋಷವಾಗಿದೆ. ಅವರು ಉತ್ತಮ ಚೈತನ್ಯವನ್ನು ತೋರಿಸಿದ್ದು, ಇದು ಬಹಳ ಮುಖ್ಯವಾದ ಇನ್ನಿಂಗ್ಸ್. ಏಕೆಂದರೆ ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ರೋಹಿತ್ ಅವರು ಪ್ರಾರಂಭವಾದಾಗಿನಿಂದ ಕೆಲವು ಉತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ ಆದರೆ ಅವರ ಮೂರು ಶತಕಗಳು ಎದ್ದು ಕಾಣುತ್ತವೆ. ಇದರಲ್ಲಿ ಚೆನ್ನೈನಲ್ಲಿ 161 ರನ್, ಓವಲ್‌ನಲ್ಲಿ ಶತಕ ಮತ್ತು ಶುಕ್ರವಾರ ಇಲ್ಲಿನ ನಿಧಾನಗತಿಯ ಪಿಚ್‌ನಲ್ಲಿ ಶತಕ ಸೇರಿವೆ” ಎಂದರು.


ಇದನ್ನೂ ಓದಿ:  KL Rahul : ನಾಗ್ಪುರ ಟೆಸ್ಟ್ ಕೆಎಲ್ ರಾಹುಲ್ ವೃತ್ತಿಜೀವನದ ಕೊನೆಯ ಪಂದ್ಯ? ಸಂಚಲನ ಮೂಡಿಸಿದ ಬಿಸಿಸಿಐ ಅಧಿಕಾರಿ ಹೇಳಿಕೆ


”ಇದು ರೋಹಿತ್ ಅವರ ಬ್ಯಾಟಿಂಗ್‌ನ ವಿಶೇಷತೆ. ಅವರು ಇಂಗ್ಲೆಂಡ್‌ನ ವೇಗದ ಪಿಚ್‌ಗಳಲ್ಲಿ ರನ್ ಗಳಿಸಿದರು. ಆದರೆ ನಾವು ಅವರ ಇನ್ನಿಂಗ್ಸ್ ಬಗ್ಗೆ ಮಾತನಾಡಿದರೆ ಇಂದು ರನ್ ಗಳಿಸಲು ಶ್ರಮಿಸಬೇಕಾಯಿತು. ಸಾಮಾನ್ಯವಾಗಿ ರೋಹಿತ್ ಆರಂಭದಲ್ಲಿ ಕೆಲವು ರನ್ ಗಳಿಸಿದ ನಂತರ ಸುಲಭವಾಗಿ ರನ್ ಗಳಿಸುತ್ತಾರೆ. ಆದರೆ ಇಲ್ಲಿ ಅವರು ಕಷ್ಟಪಡಬೇಕಾಯಿತು” ಎಂದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ