Cricketer Death: ಯಾವುದೇ ಕ್ರೀಡೆಯಾಗಲಿ, ಆಡುವಾಗ ಎಚ್ಚರ ಮುಖ್ಯವಾಗುತ್ತದೆ. ಕೆಲವೊಮ್ಮೆ ಗಾಯಗಳಾದರೆ, ಇನ್ನೂ ಕೆಲವೊಮ್ಮೆ ಪ್ರಾಣಕ್ಕೇ ಅಪಾಯ ಎದುರಾಗಬಹುದು. ಅಂತರಾಷ್ಟ್ರೀಯ ಮಟ್ಟದಲ್ಲೂ ಕ್ರೀಡಾಳುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅದಕ್ಕೆ ಬೇಕಾದ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಆದರೆ ಸ್ಥಳೀಯ ಪ್ರದೇಶದಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ಮಕ್ಕಳು ಕ್ರಿಕೆಟ್ ಆಡುವುದನ್ನು ಕಾಣಬಹುದು. ಇದೀಗ ಅದೇ ರೀತಿ ಆಟವಾಡುತ್ತಿದ್ದ ಮಗುವೊಂದು ದುರಾದೃಷ್ಟವಶಾತ್ ಸಾವನ್ನಪ್ಪಿರುವ ಘಟನೆ ಪುಣೆಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಎಂಎಸ್ ಧೋನಿ ಅಣ್ಣ ಯಾರು ಗೊತ್ತಾ? ಖ್ಯಾತ ರಾಜಕಾರಣಿ ಇವರು… ಆದ್ರೆ ಅನೇಕ ವರ್ಷಗಳಿಂದ ಮಾತೇ ಬಿಟ್ಟಿದ್ದಾರಂತೆ ಕ್ಯಾಪ್ಟನ್ ಕೂಲ್!


ಪುಣೆಯ ಲೋಹೆಗಾಂವ್ ಪ್ರದೇಶದಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕ್ರಿಕೆಟ್ ಬಾಲ್‌ ಮಗುವಿನ ಮರ್ಮಾಂಗಕ್ಕೆ ತಗುಲಿ ಸಾವನ್ನಪ್ಪಿದೆ. ಕಳೆದ ವಾರ ನಡೆದ ಘಟನೆ ಇದಾಗಿದ್ದು, ಮೃತನನ್ನು ಶಂಭು ಕಾಳಿದಾಸ್ ಖಾಂಡ್ವೆ ಅಲಿಯಾಸ್ ಶೌರ್ಯ ಎಂದು ಗುರುತಿಸಲಾಗಿದೆ.


ಮಾಹಿತಿ ಪ್ರಕಾರ, ಬೇಸಿಗೆ ರಜೆಯಲ್ಲಿದ್ದ ಬಾಲಕ, ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ. ಆದರೆ ಈ ಸಂದರ್ಭದಲ್ಲಿ ಚೆಂಡು ಮಗುವಿನ ಮರ್ಮಾಂಗಕ್ಕೆ ತಗುಲಿದ್ದು, ಪ್ರಾಣಪಕ್ಷಿಯನ್ನೇ ಕಿತ್ತುಕೊಂಡಿದೆ. ಇನ್ನು ಈ ದುರ್ಘಟನೆಯ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ.  


ಇದನ್ನೂ ಓದಿ:  ಮಾವಿನ ಹಣ್ಣನ್ನು ಹೀಗೆ ತಿಂದರೆ ಒಂದೇ ವಾರದಲ್ಲಿ 5 ಕೆಜಿಯಷ್ಟು ತೂಕ ಇಳಿಸಿಕೊಳ್ಳಬಹುದು! ಸೀಸನ್ ಮುಗಿಯೋದ್ರಲ್ಲಿ ಸ್ಲಿಮ್ ಆಗಿ


ಚೆಂಡು ತಗುಲಿದ ತಕ್ಷಣ ಶೌರ್ಯ ಮೊದಲು ನೇರವಾಗಿ ನಿಂತು ನಂತರ ಏಕಾಏಕಿ ಕುಸಿದು ಬಿದ್ದು ಒದ್ದಾಡತೊಡಗಿದ್ದಾನೆ. ಎಲ್ಲಾ ಮಕ್ಕಳು ಆತನನ್ನು ಎತ್ತಿಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿದೆ. ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ, ಶೌರ್ಯನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅದಾಗಲೇ ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.