ನವದೆಹಲಿ: ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸುವ ತಂಡದ ಡ್ರೆಸ್ಸಿಂಗ್ ಕೊಠಡಿಯಿಂದ ಪಂದ್ಯವನ್ನು ನೋಡುವ ಮೂಲಕ ತನ್ನ ಕೇಂದ್ರ ಒಪ್ಪಂದದ ಷರತ್ತು ಉಲ್ಲಂಘಿಸಿದ್ದಕ್ಕಾಗಿ ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ಬೇಷರತ್ ಕ್ಷಮೆಯಾಚನೆಯನ್ನು ಬಿಸಿಸಿಐ ಸೋಮವಾರದಂದು ಸ್ವೀಕರಿಸಿದೆ.


COMMERCIAL BREAK
SCROLL TO CONTINUE READING

ಶಾರುಖ್ ಖಾನ್ ಸಹ-ಮಾಲೀಕತ್ವದ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನ ಡ್ರೆಸ್ಸಿಂಗ್ ಕೊಠಡಿಯಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ ಪಂದ್ಯವನ್ನು ನೋಡುವ ಮೂಲಕ ಬಿಸಿಸಿಐನ ಕೇಂದ್ರ ಒಪ್ಪಂದದ ಷರತ್ತು ಉಲ್ಲಂಘಿಸಿದ್ದಕ್ಕಾಗಿ ಕಾರ್ತಿಕ್ ಬೇಷರತ್ತಾದ ಕ್ಷಮೆಯಾಚಿಸಿದರು.ದಿನೇಶ್ ಕಾರ್ತಿಕ್ ಅವರ ಕ್ಷಮೆಯಾಚನೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ ಮತ್ತು ಈ ವಿಷಯವು ಈಗ ಮುಗಿದ ಅಧ್ಯಾಯವಾಗಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.


ಕೇಂದ್ರ ಒಪ್ಪಂದದ ಪ್ರಕಾರ ಭಾರತಕ್ಕಾಗಿ 26 ಟೆಸ್ಟ್ ಮತ್ತು 94 ಏಕದಿನ ಪಂದ್ಯಗಳನ್ನು ಆಡಿದ ಕಾರ್ತಿಕ್ ಪಂದ್ಯಕ್ಕೆ ಹಾಜರಾಗುವ ಮೊದಲು ಬಿಸಿಸಿಐನಿಂದ ಅನುಮತಿ ಪಡೆದಿರಬೇಕು. ಅವರ ಒಪ್ಪಂದವು ಯಾವುದೇ ಖಾಸಗಿ ಲೀಗ್‌ನೊಂದಿಗೆ ಸಂಬಂಧ ಹೊಂದದಂತೆ ತಡೆಯುತ್ತದೆ ಎನ್ನಲಾಗಿದೆ.


ಕಾರ್ತಿಕ್ ಐಪಿಎಲ್ ಫ್ರ್ಯಾಂಚೈಸ್ ಕೋಲ್ಕತಾ ನೈಟ್ ರೈಡರ್ಸ್‌ನ ಕ್ಯಾಪ್ಟನ್ ಆದರೆ ಟ್ರಿನ್‌ಬಾಗೊ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದರಿಂದ, ಡ್ರೆಸ್ಸಿಂಗ್ ಕೊಠಡಿಯಿಂದ ಪಂದ್ಯವನ್ನು ವೀಕ್ಷಿಸಿದ್ದರಿಂದಾಗಿ ಬಿಸಿಸಿಐ ಶೋಕಾಸ್ ನೋಟಿಸ್ ನೀಡಿತು, ಅಲ್ಲದೆ ಯಾಕೆ ಕೇಂದ್ರದ ಒಪ್ಪಂದವನ್ನು ಕೊನೆಗೊಳಿಸಬಾರದು ಎಂದು ಅದು ಪ್ರಶ್ನಿಸಿತು.


ಕಾರ್ತಿಕ್ ಅವರು ತಮ್ಮ ಉತ್ತರದಲ್ಲಿ, ಕೆಕೆಆರ್ ತರಬೇತುದಾರ ಬ್ರೆಂಡನ್ ಮೆಕಲಮ್ ಅವರ ಕೋರಿಕೆಯ ಮೇರೆಗೆ ಪೋರ್ಟ್ ಆಫ್ ಸ್ಪೇನ್ ಗೆ ಹೋಗಿದ್ದರು ಮತ್ತು ಅವರ ಒತ್ತಾಯದ ಮೇರೆಗೆ ಟಿಕೆಆರ್ ಜರ್ಸಿ ಧರಿಸಿ ಪಂದ್ಯವನ್ನು ವೀಕ್ಷಿಸಿರುವುದಾಗಿ ತಿಳಿಸಿದ್ದರು.