ನವದೆಹಲಿ: ಕ್ರಿಕೆಟ್ ನಲ್ಲಿ ಬಲಶಾಲಿ ಟೀಂ ಆಗಿದ್ದ ಕಾಂಗರೂ ಪಡೆ ಇತ್ತೀಚಿಗೆ ತನ್ನ ಬಲವನ್ನು ಕಳೆದುಕೊಂಡಿದೆ. ಇದೀಗ ಟೀಂ ಇಂಡಿಯಾ ಬಲಿಷ್ಠ ತಂಡವಾಗಿ ಹೊರಹೊಮ್ಮುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. 


COMMERCIAL BREAK
SCROLL TO CONTINUE READING

ವಿಶೇಷವೆಂದರೆ 2012ರ ವಿಶ್ವಕಪ್ ನಂತರ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಒಂದೇ ಒಂದು ಟಿ20 ಪಂದ್ಯವನ್ನೂ ಸೋತಿಲ್ಲ. ಇದುವರೆಗೂ ಆಡಿರುವ ಏಳು ಪಂದ್ಯಗಳಲ್ಲಿ ಏಳನ್ನೂ ತನ್ನದಾಗಿಸಿಕೊಂಡು ಅಜೇಯವಾಗಿದೆ. 


ಇದುವರೆಗೂ ಒಟ್ಟು 84 ಟಿ20 ಪಂದ್ಯಗಳನ್ನು ಆಡಿರುವ ಭಾರತ ತಂಡ 50 ಪಂದ್ಯಗಳಲ್ಲಿ ಜಯಗಳಿಸಿದ್ದು, ರಾಂಕಿಂಗ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇವುಗಳಲ್ಲಿ ಕಾಂಗರೂ ಪಡೆ ವಿರುದ್ಧ 10 ಟಿ20 ಪಂದ್ಯಗಳಲ್ಲಿ ಸೆಣಿಸಿದ್ದು 6 ಪಂದ್ಯಗಳಲ್ಲಿ ಜಯ ಸಾಧಿಸಿದೆ.