Hardik Pandya in RCB: ಕಳೆದ ಐಪಿಎಲ್ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ವಿವಾದಗಳ ಸುಳಿಗೆ ಸಿಲುಕಿದ್ದರು. ಈ ಹಿಂದೆ ಮುಂಬೈ ಪರ ಆಡಿದ್ದ ಹಾರ್ದಿಕ್ 2 ವರ್ಷಗಳ ಕಾಲ ಗುಜರಾತ್ ಟೈಟಾನ್ಸ್‌ ಪರ ಆಡಿದ್ದರು. ಅದಾದ ಬಳಿಕ ಮತ್ತೊಮ್ಮೆ ಮುಂಬೈಗೆ ವಾಪಸಾಗಿದ್ದರು. ಆದರೆ ಈ ಬಾರಿ ಮುಂಬೈ ನಾಯಕತ್ವ ವಹಿಸಿಕೊಂಡು ತಂಡಕ್ಕೆ ಕಂಬ್ಯಾಕ್‌ ಮಾಡಿದ್ದರು. ಈ ಸಂದರ್ಭದಲ್ಲಿ ರೋಹಿತ್‌ ಫ್ಯಾನ್ಸ್‌ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಹಳಸಿದ ಬಾಯಲ್ಲಿ ನೀರು ಕುಡಿಯಿರಿ: ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆ?


ಹಾರ್ದಿಕ್ ಪಾಂಡ್ಯ ಐಪಿಎಲ್ ವೃತ್ತಿಜೀವನ


ಹಾರ್ದಿಕ್ ಪಾಂಡ್ಯ ಭಾರತದ ಶ್ರೇಷ್ಠ ಆಲ್‌ರೌಂಡರ್‌ʼಗಳಲ್ಲಿ ಒಬ್ಬರು. ಅವರ ದಾಖಲೆ ಭಾರತಕ್ಕೆ ಮತ್ತು ಐಪಿಎಲ್‌ʼನಲ್ಲೂ ಅತ್ಯುತ್ತಮವಾಗಿದೆ. ನಾಯಕನಾಗಿ ಐಪಿಎಲ್‌ʼನಲ್ಲಿ ಒಮ್ಮೆ ಟ್ರೋಫಿಯನ್ನೂ ಗೆದ್ದಿದ್ದಾರೆ. ಇದಲ್ಲದೇ ಒಮ್ಮೆ ಫೈನಲ್‌ʼಗೂ ಪ್ರಯಾಣ ಬೆಳೆಸಿದ್ದಾರೆ. ಅವರ ಸಂಪೂರ್ಣ ಐಪಿಎಲ್ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, 137 ಪಂದ್ಯಗಳಲ್ಲಿ 2525 ರನ್ ಗಳಿಸಿದ್ದಾರೆ. ಇದರೊಂದಿಗೆ 64 ವಿಕೆಟ್ ಕೂಡ ಅವರ ಹೆಸರಿನಲ್ಲಿ ದಾಖಲಾಗಿದೆ.


ಆರ್‌ʼಸಿಬಿಗೆ ಹಾರ್ದಿಕ್ ಪಾಂಡ್ಯ!?


ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಪಾಂಡ್ಯ ಕುರಿತ ಸುದ್ದಿಯೊಂದು ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಇಂತಹ ಒಂದು ಸುದ್ದಿ ವೈರಲ್‌ ಆಗುತ್ತಿದ್ದು, ಅದರಲ್ಲಿ ʼಹಾರ್ದಿಕ್ ಪಾಂಡ್ಯ 2025 ರ ಐಪಿಎಲ್ ಸೀಸನ್‌ʼನಲ್ಲಿ ಆರ್‌ ಸಿ ಬಿಯ ಹೊಸ ನಾಯಕರಾಗುತ್ತಾರೆʼ ಎಂದು ಹೇಳಲಾಗುತ್ತದೆ. ಒಂದು ಖಾತೆ ಮಾತ್ರವಲ್ಲದೆ ಹಲವು ಖಾತೆಗಳು ಇದನ್ನೇ ಪೋಸ್ಟ್ ಮಾಡಿವೆ. ಆದರೆ ಇದರಲ್ಲಿ ಎಷ್ಟು ಸತ್ಯವಿದೆ ಎಂಬುದು ತಿಳಿಯದ ಸಂಗತಿ.


ಮೆಮೆ ಪೇಜ್‌ʼಗಳು ಈ ಸುದ್ದಿಯನ್ನು ಹರಡುತ್ತಿದೆ. ಆದರೆ ಇದನ್ನು ಕೆಲವರು ಸಂಪೂರ್ಣ ಸುಳ್ಳು ಎಂದು ಹೇಳುತ್ತಿದ್ದಾರೆ. ಏಕೆಂದರೆ ಇಂತಹದ್ದೇನಾದರೂ ನಡೆದಿದ್ದರೆ ಇದಕ್ಕೆ ಸಂಬಂಧಿಸಿದ ಮಾಹಿತಿಯು ಖಂಡಿತವಾಗಿಯೂ RCB ಯ ಅಧಿಕೃತ ಪುಟದಲ್ಲಿ ಲಭ್ಯವಿರುತ್ತದೆ. ಆದರೆ ಆ ರೀತಿಯ ಬೆಳವಣಿಗೆ ಇನ್ನೂ ಕಂಡುಬಂದಿಲ್ಲ.


ಇದನ್ನೂ ಓದಿ:  ಹೋಲಿಕೆ ನನಗೆ ಇಷ್ಟವಿಲ್ಲ.. ಅದರಲ್ಲೂ ಕೊಹ್ಲಿ ಜೊತೆ ನನ್ನನ್ನು ಹೋಲಿಸಬೇಡಿ: ಸ್ಮೃತಿ ಮಂಧಾನ ಶಾಕಿಂಗ್‌ ಹೇಳಿಕೆ ವೈರಲ್


ಮತ್ತೊಂದೆಡೆ ಕನ್ನಡಿಗ ಕೆಎಲ್‌ ರಾಹುಲ್‌ ಕೂಡ ಆರ್‌ ಸಿ ಬಿಗೆ ಸೇರ್ಪಡೆಗೊಳ್ಳಲು ಉತ್ಸುಕರಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಹಿಂದೆ ರಾಹುಲ್‌ ಕೂಡ ಈ ಬಗ್ಗೆ ಆಸಕ್ತಿ ಇರುವುದಾಗಿ ಹೇಳಿಕೊಂಡದ್ದರು. ಒಂದು ವೇಳೆ ಈ ಸುದ್ದಿ ನಿಜವಾದಲ್ಲಿ, ಕರ್ನಾಟಕ ತಂಡದಲ್ಲಿ ಕರ್ನಾಟಕದ ಓರ್ವ ಆಟಗಾರ ಆಡುತ್ತಾನೆ ಎಂಬ ಖುಷಿ ಕನ್ನಡಿಗರಲ್ಲಿ ಮನೆಮಾಡಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ