ಒಂದೇ ಪಂದ್ಯದಲ್ಲಿ 8 ರನೌಟ್... ಏಕದಿನದಲ್ಲಿ ಅತಿ ಹೆಚ್ಚು ರನ್ ಔಟ್ ದಾಖಲೆ ಹೊಂದಿರುವ ಪಂದ್ಯ ಇದುವೇ!! 25 ವರ್ಷಗಳಿಂದ ಹಾಗೇ ಇದೆ ಈ ರೆಕಾರ್ಡ್
highest number of run outs in a match: 1999 ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ODI ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ನಿಂದಲೇ ರನ್ ಔಟ್ ಆರಂಭವಾಯಿತು.
highest number of run outs in a match: ಕ್ರಿಕೆಟ್ ಆಟದಲ್ಲಿ ಹಲವು ವಿಚಿತ್ರ ದಾಖಲೆಗಳು ಕಾಣಸಿಗುತ್ತವೆ. ಅದೇ ಪಟ್ಟಿಯಲ್ಲಿ ರನ್ ಔಟ್ ಆದ ದಾಖಲೆಯೂ ಇದೆ. ಏಕದಿನ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಔಟ್ ಆಗಿದ್ದು ಇಡೀ ಮೈದಾನವನ್ನೇ ತಲ್ಲಣ ಮೂಡಿಸಿತ್ತು. ಅಂದಹಾಗೆ ಈ ದಾಖಲೆ 25 ವರ್ಷಗಳಿಂದ ಹಾಗೇ ಇದೆ.
ಇದನ್ನೂ ಓದಿ: ಕಪ್ಪು ಬಣ್ಣದ ಈ ಹಣ್ಣನ್ನು 5 ದಿನಗಳ ಕಾಲ ಬಿಡದೆ ತಿಂದರೆ ಬೇರಿನಿಂದಲೇ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗಿಸುತ್ತೆ
1999 ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ODI ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ನಿಂದಲೇ ರನ್ ಔಟ್ ಆರಂಭವಾಯಿತು. ರಾಹುಲ್ ದ್ರಾವಿಡ್ ಮತ್ತು ವೆಂಕಟೇಶ್ ಪ್ರಸಾದ್ ಜೊತೆಗೂಡಿ ಬ್ರಿಯಾನ್ ಯಂಗ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಇದಾದ ಬಳಿಕ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಕೂಡ ರನ್ ಔಟ್‌ಗೆ ಬಲಿಯಾದರು. ಈ ಸರಣಿ ಇಲ್ಲಿಗೆ ನಿಲ್ಲಲಿಲ್ಲ, 7, 8 ಮತ್ತು 9ನೇ ಕ್ರಮಾಂಕದಲ್ಲಿದ್ದ ಬ್ಯಾಟ್ಸ್‌ಮನ್‌ಗಳೂ ಸಹ ರನ್ ಔಟ್‌ಗೆ ಪೆವಿಲಿಯನ್ ಸೇರಿದರು.
ಪಂದ್ಯದಲ್ಲಿ ದಿಗ್ಗಜರಾದ ಅನಿಲ್ ಕುಂಬ್ಳೆ ಒಂದು ವಿಕೆಟ್ ಪಡೆದರೆ, 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ 3 ವಿಕೆಟ್ ಪಡೆದರು.
ಇದನ್ನೂ ಓದಿ: ಮಿಕ್ಸಿ ಜಾರ್ ಅನ್ನು ಎಷ್ಟೇ ತೊಳೆದರೂ ಬ್ಲೇಡ್ ಬಳಿ ಅಂಟಿರುವ ಜಿಡ್ಡು ಹೋಗ್ತಿಲ್ವಾ?
ಪಂದ್ಯದಲ್ಲಿ ಒಟ್ಟು ಎಷ್ಟು ರನ್ ಔಟ್?
ಟೀಂ ಇಂಡಿಯಾದ 3 ಬ್ಯಾಟ್ಸ್‌ಮನ್‌ಗಳು ಸಹ ರನೌಟ್ ಆಗಿದ್ದರು. ಈ ಪಟ್ಟಿಯಲ್ಲಿ ಅಜಯ್ ಜಡೇಜಾ, ನಯನ್ ಮೊಂಗಿಯಾ ಮತ್ತು ಅನಿಲ್ ಕುಂಬ್ಳೆ ಸೇರಿದ್ದಾರೆ. ಇನ್ನು ಈ ಪಂದ್ಯದಲ್ಲಿ ಒಟ್ಟು 8 ರನ್ ಔಟ್‌ಗಳು ಆಗಿದ್ದು, ಈ ಪಂದ್ಯವು ODI ಇತಿಹಾಸದಲ್ಲಿ ಅತಿ ಹೆಚ್ಚು ರನ್ ಔಟ್ ಆದ ಪಂದ್ಯ ಎಂದು ದಾಖಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.