cricket ban: ನಾರ್ತ್ ಇಟಲಿಯ ಪಟ್ಟಣವೊಂದರಲ್ಲಿ ಕ್ರಿಕೆಟ್ ಆಟವನ್ನು ನಿಷೇಧಿಸಲಾಗಿದೆ. ಈ ನಿರ್ಧಾರವನ್ನು ಅಲ್ಲಿನ ಮೇಯರ್ ತೆಗೆದುಕೊಂಡಿದ್ದು, ಕ್ರಿಕೆಟ್‌ ಮತ್ತು ಅದನ್ನು ಆಡುವ ವಲಸಿಗರು ಅಲ್ಲಿನ ಸಂಸ್ಕೃತಿಯೊಂದಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಪರಿಗಣಿಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಒಬ್ರಲ್ಲ, ಇಬ್ರಲ್ಲ... ಈ ನಾಲ್ವರು ಸುರಸುಂದರಿಯರ ಜೊತೆ ಶುಭ್ಮನ್‌ ಗಿಲ್‌ ಡೇಟಿಂಗ್!!


BBC ಯ ವರದಿಯ ಪ್ರಕಾರ, ಮಾನ್ಫಾಲ್ಕೋನ್ ಪಟ್ಟಣವು ಅಧಿಕೃತವಾಗಿ ಕ್ರಿಕೆಟ್‌ ಅನ್ನು ನಿಷೇಧಿಸಿದ್ದು, ಅದರ ಮಿತಿಯಲ್ಲಿ ಕ್ರಿಕೆಟ್ ಆಡುತ್ತಿರುವವರಿಗೆ € 100 ವರೆಗೆ ದಂಡವನ್ನು ವಿಧಿಸಿದೆ. ಇದೀಗ ಈ ನಿಷೇಧವು ಇಟಲಿಯ ಆಡ್ರಿಯಾಟಿಕ್ ಕರಾವಳಿಯ ಸಮೀಪದಲ್ಲಿರುವ ಮೊನ್ಫಾಲ್ಕೋನ್‌ʼನಲ್ಲಿ ಭಾರೀ ಉದ್ವಿಗ್ನತೆಗೆ ಕಾರಣವಾಗಿದೆ.


ಸುಮಾರು 30,000 ಜನಸಂಖ್ಯೆಯನ್ನು ಹೊಂದಿರುವ ಪಟ್ಟಣ ಇದಾಗಿದ್ದು,  ಇಲ್ಲಿ ನೆಲೆಸಿರುವವರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ವಿದೇಶಿಯರಿದ್ದಾರೆ. ಮುಖ್ಯವಾಗಿ ಬಾಂಗ್ಲಾದೇಶಿ ಮುಸ್ಲಿಮರು ಇಲ್ಲಿ ನೆಲೆಸಿದ್ದು 1990 ರ ದಶಕದ ಉತ್ತರಾರ್ಧದಲ್ಲಿ ಪ್ರಮುಖ ಹಡಗುಕಟ್ಟೆಯಲ್ಲಿ ಕೆಲಸ ಮಾಡಲು ಬಂದವರಾಗಿದ್ದಾರೆ.


ಇದನ್ನೂ ಓದಿ: ಹೋದ ಕೆಲಸದಲ್ಲೆಲ್ಲಾ ಜಯ ಸಿಗಬೇಕೆಂದರೆ ಮನೆಯ ಈ ದಿಕ್ಕಿನಿಂದ ವಾಹನ ಸ್ಟಾರ್ಟ್‌ ಮಾಡಿ!


ಮೊನ್‌ಫಾಲ್ಕೋನ್‌ʼನ ಸ್ಥಳೀಯ ಉದ್ಯಾನವನದಲ್ಲಿ ಕ್ರಿಕೆಟ್‌ ಆಡುತ್ತಿದ್ದಾಗ, ಭದ್ರತಾ ಕ್ಯಾಮೆರಾಗಳಲ್ಲಿ ದೃಶ್ಯ ಸೆರೆಯಾಗಿತ್ತು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಬಾಂಗ್ಲಾದ ಕೆಲ ಯುವಕರಿಗೆ ದಂಡ ವಿಧಿಸಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ