ಟೆಸ್ಟ್ ಕ್ರಿಕೆಟ್‌ನಲ್ಲಿ 10 ವಿಕೆಟ್ಗಳ ದಾಖಲೆ ಬರೆದ ವನಿತೆ.. ಯಾರು ಈ ಸ್ನೇಹ್ ರಾಣಾ?
Who is Sneh Rana: ಭಾರತದ ಮಹಿಳಾ ಆಟಗಾರ್ತಿ ಸ್ನೇಹ್ ರಾಣಾ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ 8 ಮತ್ತು 2ನೇ ಇನಿಂಗ್ಸ್ನಲ್ಲಿ 2 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.
Test cricket Record: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿದ ಸ್ನೇಹ್ ರಾಣಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಯಾರು ಈ ಸ್ನೇಹ್ ರಾಣಾ?
ಸ್ನೇಹ್ ರಾಣಾ ಬಲಗೈ ಆಫ್ ಬ್ರೇಕ್ ಸ್ಪಿನ್ನರ್. 30ರ ಹರೆಯದ ಅವರು 4 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 23 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಅಲ್ಲದೆ ಏಕದಿನ ಹಾಗೂ ಟಿ20 ಪಂದ್ಯಗಳನ್ನೂ ಆಡಿದ್ದಾರೆ. ಇದರಲ್ಲಿ ಕ್ರಮವಾಗಿ 29 ಮತ್ತು 24 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ-ಭಗವದ್ಗೀತೆ ಸ್ತೋತ್ರದ ಸಾಲುಗಳನ್ನು ಹಂಚಿಕೊಂಡ ಶೋಯೆಬ್ ಅಖ್ತರ್..!
ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 8 ವಿಕೆಟ್ ಹಾಗೂ 2ನೇ ಇನಿಂಗ್ಸ್ ನಲ್ಲಿ 2 ವಿಕೆಟ್ ಪಡೆದು ಒಟ್ಟು 10 ವಿಕೆಟ್ ಪಡೆದು ಭಾರತ ತಂಡದ ಗೆಲುವಿಗೆ ನೆರವಾದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 10 ವಿಕೆಟ್ ಪಡೆದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ ಜೂಲನ್ ಗೋಸ್ವಾಮಿ 10 ವಿಕೆಟ್ ಪಡೆದಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ 603 ರನ್ ಗಳಿಸಿತ್ತು. ಬಳಿಕ ಮೊದಲ ಇನಿಂಗ್ಸ್ ಆಡಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 266 ರನ್ ಗಳಿಸಿದೆ. ಇದಾದ ಬಳಿಕ ದಕ್ಷಿಣ ಆಫ್ರಿಕಾ ಮಹಿಳಾ ತಂಡ 2ನೇ ಇನಿಂಗ್ಸ್ ಆಡಿತು. ಇದರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 373 ರನ್ ಗಳಿಸಿತು. 37 ರನ್ ಗಳ ಗುರಿಯೊಂದಿಗೆ ಆಡಿದ ಭಾರತ ಮಹಿಳಾ ತಂಡ 10 ವಿಕೆಟ್ ಗಳ ಜಯ ಸಾಧಿಸಿತು..
ಇದನ್ನೂ ಓದಿ-21 ರೂಪಾಯಿಯಿಂದ ವಿಶ್ವಕಪ್ ವೈಭವದವರೆಗೆ: ರಾಘವೇಂದ್ರ ದ್ವಿಗಿಯವರ ಸ್ಪೂರ್ತಿದಾಯಕ ಪ್ರಯಾಣ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.