ನವದೆಹಲಿ: ಕ್ರಿಕೆಟ್ ಇತಿಹಾಸದಲ್ಲಿ ಹಲವು ಬ್ಯಾಟ್ಸ್‌ಮನ್‌ಗಳು ತಮ್ಮ ವೃತ್ತಿಜೀವನದಲ್ಲಿ ಅತ್ಯಧಿಕ ರನ್ ಮತ್ತು ಶತಕಗಳನ್ನು ಗಳಿಸಿ ಖ್ಯಾತಿ ಪಡೆದಿದ್ದಾರೆ. ಆದರೆ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಶೂನ್ಯಕ್ಕೆ ಎಂದಿಗೂ ಔಟಾಗದ ಕೆಲವು ಅದೃಷ್ಟ ಬ್ಯಾಟ್ಸ್‌ಮನ್‌ಗಳು ಇದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಅಂತಹ 4 ಬ್ಯಾಟ್ಸ್‌ಮನ್‌ಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಜಾಕ್ವೆಸ್ ರೊಡಾಲ್ಫ್- ದಕ್ಷಿಣ ಆಫ್ರಿಕಾ (Jacques Rodalf-South Africa) :
ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಜಾಕ್ವೆಸ್ ರೊಡ್ಲೋಫ್ 7 ಅರ್ಧಶತಕಗಳು ಸೇರಿದಂತೆ 45 ಏಕದಿನ ಪಂದ್ಯಗಳಲ್ಲಿ 1174 ರನ್ ಗಳಿಸಿದ್ದಾರೆ. ಅವರು 6 ಬಾರಿ ಅಜೇಯರಾಗಿದ್ದಾರೆ, ಏಕದಿನ ಪಂದ್ಯಗಳಲ್ಲಿ ಜಾಕ್ವೆಸ್ ಗಳಿಸಿದ ಗರಿಷ್ಠ ಸ್ಕೋರ್ 81 ರನ್ಗಳು ಮತ್ತು ಇವರು ಎಂದೂ ಕೂಡ ಶೂನ್ಯಕ್ಕೆ ಹೊರಬಂದಿಲ್ಲ.


Sri Lanka Cricket Tour: ಭಾರತ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್


ಯಶ್ಪಾಲ್ ಶರ್ಮಾ-ಭಾರತ (Yashpal Sharma-India):
ಈ ಮಾಜಿ ಭಾರತದ ಬ್ಯಾಟ್ಸ್‌ಮನ್ (Indian Batsman) ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ, ಯಶ್ಪಾಲ್ ಶರ್ಮಾ (Yashpal Sharma) 42 ಏಕದಿನ ಪಂದ್ಯಗಳಲ್ಲಿ 883 ರನ್ ಗಳಿಸಿದ್ದಾರೆ ಮತ್ತು 4 ಅರ್ಧಶತಕಗಳನ್ನು ಗಳಿಸಿದ್ದಾರೆ. ಏಕದಿನ ಪಂದ್ಯದಲ್ಲಿ ಅವರ ಗರಿಷ್ಠ ಸ್ಕೋರ್ 89 ರನ್. ಈ ಭಾರತೀಯ ಬ್ಯಾಟ್ಸ್‌ಮನ್ ಏಕದಿನ ಪಂದ್ಯಗಳಲ್ಲಿ ಎಂದಿಗೂ ಡಕ್ ಔಟ್ ಆಗಿಲ್ಲ.


South Africa) ಬ್ಯಾಟ್ಸ್‌ಮನ್ ಪೀಟರ್ ಕ್ರಿಸ್ಟನ್ ಮೂರು ವರ್ಷಗಳ ಕಾಲ ಕ್ರಿಕೆಟ್ ಆಡಿದ್ದರು, ಆದರೆ ಈ ಬ್ಯಾಟ್ಸ್‌ಮನ್ ಎಂದಿಗೂ ದಕ ಔಟ್ ಆಗಿಲ್ಲ. ಪೀಟರ್ ಮೂರು ವರ್ಷಗಳಲ್ಲಿ 40 ಏಕದಿನ ಪಂದ್ಯಗಳನ್ನು ಆಡಿದ್ದು 1293 ರನ್ ಗಳಿಸಿದ್ದಾರೆ. ಇದು 9 ಅರ್ಧಶತಕಗಳನ್ನು ಒಳಗೊಂಡಿದೆ. ಈ ಇನ್ನಿಂಗ್ಸ್ ಸಮಯದಲ್ಲಿ ಪೀಟರ್ ಸಹ 6 ಬಾರಿ ಅಜೇಯರಾಗಿದ್ದರು. ಏಕದಿನ ಪಂದ್ಯಗಳಲ್ಲಿ ಅವರ ಅತ್ಯಧಿಕ ಸ್ಕೋರ್ 97 ರನ್.


WTC Final 2021: WTC ಫೈನಲ್ ಗೆ ತಂಡ ಪ್ರಕಟಿಸಿದ BCCI, ಯಾವ ಯಾವ ಆಟಗಾರರಿಗೆ ಸಿಕ್ತು ಅವಕಾಶ?


ಕೆಪ್ಲರ್ ವೆಸೆಲ್ಸ್-ದಕ್ಷಿಣ ಆಫ್ರಿಕಾ (Kepler Wessels-South Africa):
ಈ ಬ್ಯಾಟ್ಸ್‌ಮನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎರಡಕ್ಕೂ ಆಡಿದ್ದಾರೆ, ಹೆಸರು ಕೆಪ್ಲರ್ ವೆಸೆಲ್ಸ್. ಅವರು ತಮ್ಮ 10 ವರ್ಷಗಳ ವೃತ್ತಿಜೀವನದಲ್ಲಿ 109 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಈ ಸಮಯದಲ್ಲಿ ಅವರು 1 ಶತಕ ಮತ್ತು 26 ಅರ್ಧಶತಕಗಳ ಸಹಾಯದಿಂದ 3367 ರನ್ ಗಳಿಸಿದರು. ಏಕದಿನ ಪಂದ್ಯದಲ್ಲಿ ಅವರ ಗರಿಷ್ಠ ಸ್ಕೋರ್ 107 ರನ್. ವೆಸೆಲ್ಸ್ ಅವರ ವೃತ್ತಿಜೀವನದಲ್ಲಿ ಎಂದಿಗೂ ಶೂನ್ಯಕ್ಕೆ ಹೊರಬಂದಿಲ್ಲ. 


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.