India vs West Indies 2nd ODI: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಸೋಲನುಭವಿಸಬೇಕಾಯಿತು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ಹೋಪ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಆದರೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 181 ರನ್‌’ಗಳಿಗೆ ಆಲೌಟ್ ಆಯಿತು. ವೆಸ್ಟ್ ಇಂಡೀಸ್ ತಂಡವು ಏಕಪಕ್ಷೀಯ ರೀತಿಯಲ್ಲಿ ಈ ಗುರಿಯನ್ನು ಸಾಧಿಸಿತು 4. ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಾಣಲು ಹಲವು ಆಟಗಾರರು ಕಾರಣವಾಗಿದ್ದಾರೆ ಎನ್ನಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ:   T20 ವಿಶ್ವಕಪ್ 2024ರ ವೇಳಾಪಟ್ಟಿ ಪ್ರಕಟ: ಈ ದಿನದಿಂದ ಪ್ರಾರಂಭಗೊಳ್ಳಲಿದೆ ಟೂರ್ನಿ


ಸಂಜು ಸ್ಯಾಮ್ಸನ್:


ಬಾರ್ಬಡೋಸ್‌ ನಲ್ಲಿ ನಡೆದ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪ್ಲೇಯಿಂಗ್ 11 ರಲ್ಲಿ ಸೇರ್ಪಡೆಗೊಂಡರು. ಆದರೆ ಈ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಂಜು ಸ್ಯಾಮ್ಸನ್ ಈ ಹಿಂದೆ 25 ನವೆಂಬರ್ 2022 ರಂದು ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ODI ಆಡಿದ್ದರು. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ 9 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದರು.


ಅಕ್ಷರ್ ಪಟೇಲ್:


ಈ ಪಂದ್ಯದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರು. ಆದರೆ 1 ರನ್ ಗಳಿಸಿದ್ದ ಅವರು, ಶೆಪರ್ಡ್ ಎಸೆತಕ್ಕೆ ಬಲಿಯಾಗಿ ವಿಕೆಟ್ ಕೀಪರ್ ಹೋಪ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ ಕೂಡ 2 ಓವರ್ ಬೌಲ್ ಮಾಡಿದರೂ ವಿಕೆಟ್ ಪಡೆಯುವಲ್ಲಿ ವಿಫಲರಾದರು.


ಹಾರ್ದಿಕ್ ಪಾಂಡ್ಯ:


ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ತಂಡದ ನಾಯಕತ್ವ ವಹಿಸಲಾಗಿತ್ತು. ಆದರೆ ಹಾರ್ದಿಕ್ ಪಾಂಡ್ಯ ಸಂಪೂರ್ಣ ಫ್ಲಾಪ್ ಆಗಿದ್ದರು. 14 ಎಸೆತಗಳಲ್ಲಿ 7 ರನ್‌ ಗಳ ಇನ್ನಿಂಗ್ಸ್‌ ಮಾತ್ರ ಆಡಿದ್ದರು. ಮತ್ತೊಂದೆಡೆ 6.4 ಓವರ್‌ಗಳಲ್ಲಿ ಬೌಲಿಂಗ್ ಮಾಡಿದ್ದರೂ ಸಹ ಒಂದೇ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ.


ಇದನ್ನೂ ಓದಿ:   ವಿಶ್ವಕಪ್ ಮುನ್ನವೇ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಬೌಲರ್?


ಉಮ್ರಾನ್ ಮಲಿಕ್:


ವೇಗಿ ಉಮ್ರಾನ್ ಮಲಿಕ್ ಅವರ ವೈಫಲ್ಯ ಈ ಪಂದ್ಯದಲ್ಲೂ ಮುಂದುವರೆದಿದೆ. ಉಮ್ರಾನ್ ಮಲಿಕ್ ಮತ್ತೊಮ್ಮೆ ವಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದು ಇಲ್ಲಿ ಕಂಡುಬಂತು. ಈ ಪಂದ್ಯದಲ್ಲಿ 3 ಓವರ್‌ ಬೌಲಿಂಗ್ ಮಾಡಿ, ಎದುರಾಳಿಗೆ 27 ರನ್‌ ಗಳನ್ನು ನೀಡಿದ್ದರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ