ಟೆಸ್ಟ್ ಕ್ರಿಕೆಟನ್ನು ಟಿ20 ಥರ ಆಡಿದ್ದ ಕ್ರಿಕೆಟಿಗರಿವರು! ಇವರ ದಾಖಲೆ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾರೂ ಬ್ರೇಕ್ ಮಾಡಿಲ್ಲ...
Batsman who scored most runs in a single over of Test Cricket: ಟೆಸ್ಟ್ ಕ್ರಿಕೆಟ್ʼನ ಒಂದೇ ಓವರ್ʼನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಬ್ಯಾಟ್ಸ್‌ಮನ್‌ಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
Unique Cricket Records: ತಮ್ಮ ಸ್ಫೋಟಕ ಬ್ಯಾಟಿಂಗ್'ನಿಂದ ಟೆಸ್ಟ್ ಪಂದ್ಯವನ್ನು ಟಿ20 ಪಂದ್ಯವನ್ನಾಗಿ ಪರಿವರ್ತಿಸಿದ ವಿಶ್ವದ 5 ಕ್ರಿಕೆಟಿಗರ ಬಗ್ಗೆ ನಿಮಗೆ ತಿಳಿದಿದೆಯೇ? ಈ ಐವರು ಕ್ರಿಕೆಟಿಗರ ಸ್ಫೋಟಕ ಬ್ಯಾಟಿಂಗ್ʼನಿಂದ ಬೌಲರ್ʼಗಳು ಒಂದು ಕಾಲದಲ್ಲಿ ಕಂಗೆಟ್ಟಿದ್ದು ಸುಳ್ಳಲ್ಲ.
ಟೆಸ್ಟ್ ಕ್ರಿಕೆಟ್ʼನ ಒಂದೇ ಓವರ್ʼನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಬ್ಯಾಟ್ಸ್‌ಮನ್‌ಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ: ವಯಸ್ಸು 51 ಆದ್ರೂ ಇನ್ನೂ ಮದುವೆಯಾಗದಿರಲು ಕಾರಣ ತಿಳಿಸಿದ ‘ಹಾಲುಂಡ ತವರು’ ನಟಿ ಸಿತಾರಾ
ಜಸ್ಪ್ರೀತ್ ಬುಮ್ರಾ- 35 ರನ್:
ಭಾರತದ ದಿಗ್ಗಜ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟೆಸ್ಟ್ ಪಂದ್ಯವೊಂದರಲ್ಲಿ ಒಂದೇ ಓವರ್ʼನಲ್ಲಿ ಅತಿ ಹೆಚ್ಚು 35 ರನ್ ಗಳಿಸಿದ ವಿಶ್ವದಾಖಲೆ ಹೊಂದಿದ್ದಾರೆ. 2022ರಲ್ಲಿ ಬರ್ಮಿಂಗ್ ಹ್ಯಾಮ್ʼನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಸ್ಟೀವರ್ಡ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ 35 ರನ್ ಗಳಿಸಿದ್ದರು.
ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) - 28 ರನ್:
ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಶ್ರೇಷ್ಠ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಹೆಸರು ಎರಡನೇ ಸ್ಥಾನದಲ್ಲಿದೆ. 2003-04ರಲ್ಲಿ, ಬ್ರಿಯಾನ್ ಲಾರಾ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ರಾಬಿನ್ ಪೀಟರ್ಸನ್ ಅವರ ಒಂದು ಓವರ್‌ನಲ್ಲಿ 28 ರನ್‌ಗಳನ್ನು ನೀಡಿದ್ದರು. 2 ಸಿಕ್ಸರ್ ಮತ್ತು 4 ಬೌಂಡರಿ ಸೇರಿದೆ.
ಜಾರ್ಜ್ ಬೈಲಿ (ಆಸ್ಟ್ರೇಲಿಯಾ) - 28 ರನ್
2013-14ರಲ್ಲಿ ಪರ್ತ್ʼನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ಮಾಜಿ ODI ನಾಯಕ ಜಾರ್ಜ್ ಬೈಲಿ ಅವರು ಆಂಗ್ಲ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರ ಒಂದು ಓವರ್‌ನಲ್ಲಿ 28 ರನ್ ನೀಡಿದ್ದರು. ಈ ಅವಧಿಯಲ್ಲಿ ಬೈಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದ್ದರು.
ಕೇಶವ್ ಮಹಾರಾಜ್ (ದಕ್ಷಿಣ ಆಫ್ರಿಕಾ) - 28 ರನ್
ದಕ್ಷಿಣ ಆಫ್ರಿಕಾದ ಆಫ್ ಸ್ಪಿನ್ ಆಲ್ ರೌಂಡರ್ ಕೇಶವ್ ಮಹಾರಾಜ್ 2019 ರಲ್ಲಿ ಪೋರ್ಟ್ ಎಲಿಜಬೆತ್ʼನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಅವರ ಒಂದು ಓವರ್ʼನಲ್ಲಿ 28 ರನ್ ನೀಡಿದ್ದರು. ಇದರಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದ್ದರು.
ಇದನ್ನೂ ಓದಿ: ನೀವು ಖರೀದಿಸಿದ ಸಿಲಿಂಡರ್ ಫುಲ್ ಇದ್ಯಾ ಅಥವಾ ಅರ್ಧಂಬರ್ಧ ತುಂಬಿದ್ಯಾ? ಸುಲಭವಾಗಿ ಮನೆಯಲ್ಲೇ ಹೀಗೆ ಚೆಕ್ ಮಾಡಿ
ಶಾಹಿದ್ ಅಫ್ರಿದಿ (ಪಾಕಿಸ್ತಾನ) - 27 ರನ್
2005ರಲ್ಲಿ ಲಾಹೋರ್ʼನಲ್ಲಿ ಭಾರತದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಒಂದು ಓವರ್ʼನಲ್ಲಿ 27 ರನ್‌ಗಳನ್ನು ನೀಡಿದ್ದರು. ಈ ಅವಧಿಯಲ್ಲಿ ಶಾಹಿದ್ ಅಫ್ರಿದಿ 4 ಸಿಕ್ಸರ್ ಬಾರಿಸಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ